ಕಮಲ್ ಹಾಸನ್ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ನಟ ಶ್ರೀನಾಥ್
ಬೆಂಗಳೂರು, ಮೇ 29: ಕನ್ನಡ ಭಾಷೆ ಹುಟ್ಟಿದ್ದರ ಕುರಿತು ತಮಿಳು ನಟ ಕಮಲ್ ಹಾಸನ್ ಅವರು ಮಾತನಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರ ಕುರಿತು ಸಾಕಷ್ಟು ಕನ್ನಡ ಕಲಾವಿದರ ಪ್ರತಿಕ್ರಿಯಿಸಿದ್ದಾರೆ. ಇದೀಗ ಕನ್ನಡದ ಹಿರಿಯ ನಟ ಶ್ರೀನಾಥ್ ಅವರು ಕಮಲ್ ಹಾನಸ್‌ಗೆ ತಿರುಗೇಟು ನೀಡಿದ್ದಾರೆ. ಕನ್ನಡ ಬೇಕಾದಷ್ಟು ಭಾಷೆಗಳನ್ನು ಬೆಳೆಸಿದೆ ಎಂದು ಅವರು ಮಾತನಾಡಿದ್ದಾರೆ.
ಕಮಲ್ ಹಾಸನ್ ನಟನೆಯ ಸಿನಿಮಾವೊಂದರ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿತ್ತು. ಈ ವೇಳೆ ವೇದಿಕೆ ಮೇಲೆ ನಟ ಕಮಲ್ ಹಾಸನ್ ಮಾತನಾಡಿದ್ದು, ವಿವಾದಿತ ಹೇಳಿಕೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೇ ವೇದಿಕೆ ಮುಂದೆ ನಟ ಶಿವರಾಜ್ ಕುಮಾರ್ ಕೂತಿದ್ದರು. ಅವರನ್ನು ಅತಿಥಿಯಾಗಿ ಕರೆಯಲಾಗಿತ್ತು. ಹೇಳಿಕೆ ಬಳಿಕ ಕಮಲ್ ಹಾಸನ್ ಅವರು ಕ್ಷಮೇ ಕೇಳುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಕನ್ನಡಪರ ಹೋರಾಟಗಾರರು ಮಾತ್ರವಲ್ಲದೇ ರಾಜ್ಯ ಸರ್ಕಾರ ಸಹ ಮಹತ್ವದ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೆ ನಟ ಶ್ರೀನಾಥ್ ಅವರು ಕನ್ನಡ ಕುರಿತ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರಲ್ಲದೇ ಕಮಲ್ ಹಾಸನ್‌ಗೆ ತಿರುಗೇಟು ನೀಡಿದ್ದಾರೆ.
'ನಾನು ಗ್ರೇಟ್' ಅನ್ನಬಾರದು..
''ಕನ್ನಡ ಎಲ್ಲಿಂದಲೂ ಹುಟ್ಟ ಬೇಕಾಗಿಲ್ಲ, ಅದು ಎಲ್ಲಿಂದ ಹುಟ್ಟಬೇಕೋ ಅಲ್ಲಿಂದಲೇ ಹುಟ್ಟಿದೆ. ನಮ್ಮ ಕನ್ನಡ ಬೇಕಾದಷ್ಟು ಭಾಷೆಗಳನ್ನು ಬೆಳಸಿದೆ. ಕನ್ನಡಿಗರಿಗೆ ಭಾಷೆಯ ಹುಟ್ಟಿನ ಬಗ್ಗೆ ಗೊತ್ತಿದೆ, ಅದನ್ನು ಬೆರೆಯವರಿಂದ ತಿಳಿದುಕೊಳ್ಳಬೇಕಿಲ್ಲ. ಯಾವ ವ್ಯಕ್ತಿನೂ 'ನಾನು ಗ್ರೇಟ್' ಎಂದುಕೊಳ್ಳಬಾರದು. ನಾನು ಎನ್ನುವ ಬದಲು. ನಾವು ಅಂತ ಅಂದುಕೊಳ್ಳಬೇಕು'' ಎಂದು ಅವರು ಬುದ್ಧಿವಾದ ಹೇಳಿದ್ದಾರೆ.
''ನನ್ನ ಭಾಷೆ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಭಾಷೆ ಬಗ್ಗೆ ಯಾರೋ ಬೇರೆಯವರು ಬಂದು ಹೇಳಬೇಕಾಗಿಲ್ಲ. ನಮ್ಮ ಕನ್ನಡ ಭಾಷೆ ಬಗ್ಗೆ ನಮಗೆ ಗೊತ್ತಿದೆ'' ಎಂದು ತಿಳಿ ಹೇಳಿದ್ದಾರೆ. ಈ ಮೂಲಕ ಕನ್ನಡ ಯಾವ ಭಾಷೆಯಿಂದಲೂ ಹುಟ್ಟಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಕಮಲ್ ಹಾಸನ್ ಹೇಳಿಕೆಯ ನಂತರ ಬೆಳವಣಿಗೆ ವೇಳೆ ನಟ ಶ್ರೀನಾಥ್ ಅವರು ಕನ್ನಡಿಗರ ಪರ ಧ್ವನಿಯಾಗಿದ್ದಾರೆ.
ಶಿವರಾಜ್ ಕುಮಾರ್ ಸುಮ್ಮನಿದ್ದಿದ್ದೇಕೆ?
ಇತ್ತ ಸಿನಿಮಾ ಪ್ರಚಾರದ ವೇಳೆ ನಟ ಕಮಲ್ ಹಾಸನ್ ಗೆ ಕನ್ನಡ ಭಾಷೆ ಕುರಿತು ಪ್ರಶ್ನೆ ಎದುರಾಗಿದೆ. ಕನ್ನಡಿಗರ ಆಕ್ರೋಶ ಕುರಿತು ಪ್ರಶ್ನಿಸಲಾಗಿದ್ದು, ಆಗ ಅವರು, ನಾನು ಸ್ಪಷ್ಟನೆ ನೀಡಿದ್ದೇನೆ. ಯಾರಿಗೂ ಕ್ಷಮೆ ಕೇಳಲ್ಲ ಎಂದಿದ್ದಾರೆ. ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ಕನ್ನಡ ಕುರಿತು ಹೇಳಿಕೆ ನೀಡುವಾಗ ವೇದಿಕೆ ಮುಂದೆ ನಟ ಶಿವರಾಜ್ ಕುಮಾರ್ ಸಹ ಅಲ್ಲಿದ್ದರು. ಕನ್ನಡಿರಗಾದ ಅವರು, ಕನ್ನಡ ಭಾಷೆ ಬಗ್ಗೆ ಬೇರೆಯವರು ಮಾತನಾಡಿದರೂ ಸುಮ್ಮನ್ನೆ ಇದ್ದದ್ದು ನೋಡಿ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ನಟ ಶಿವರಾಜ್ ಕುಮಾರ್ ಟ್ರೋಲ್ ಆಗುತ್ತಿದ್ದಾರೆ.
ಶಿವರಾಜ್ ಕುಮಾರ್ ಪ್ರತಿಕ್ರಿಯೆ
ಬೇರೊಂದು ಕಾರ್ಯಕ್ರಮದ ವೇದಿಕೆಯಲ್ಲಿ ಇದೇ ವಿಚಾರವಾಗಿ ಮಾತನಾಡಿರುವ ನಟ ಶಿವರಾಜ್ ಕುಮಾರ್ ಅವರು, ಕನ್ನಡ ಭಾಷೆ ರಕ್ಷಣೆಗೆ, ಉಳಿವಿಗೆ ಹೋರಾಡುತ್ತೇನೆ. ಪ್ರಾಣ ಕೊಡಲು ಸಿದ್ಧವಿದ್ದಾರೆ. ಕಮಲ್ ಹಾಸನ್ ಅವರು ವೇದಿಕೆ ಮೇಲೆ ಹೇಳಿದ್ದಾರೆ. ಆಗ ಏನು ತಪ್ಪಾಯ್ತು ಎಂಬುದು ಗೊತ್ತಾಗಲಿಲ್ಲ. ಹೊರಗೆ ಬಂದು ನೋಡಿದಾಗ ವಿವಾದ ಆಗುತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಕನ್ನಡ ಕುರಿತು ಯಾರೋ ಒಬ್ಬರು ಮಾತನಾಡಿದಾಗ ಮಾತ್ರವೇ ಕನ್ನಡ ಪ್ರೀತಿ ಬರಬಾರದು, ಯಾವಾಗಲೂ ಇರಬೇಕು. ಕನ್ನಡ ಪ್ರೇಮ ಎಂಬುದು ಸದಾ ಕಾಲ ಇರಬೇಕು ಎಂದು ಅವರು ಕಿವಿ ಮಾತು ಹೇಳಿದ್ದಾರೆ.












Click it and Unblock the Notifications