ನಟ ಸಂಚಾರಿ ವಿಜಯ್ ಅಪಘಾತ ಪ್ರಕರಣ: ಬೈಕ್ ಸವಾರ ನವೀನ್ ಹೇಳಿಕೆ ದಾಖಲು
ಬೆಂಗಳೂರು, ಜೂ. 02: ಕೊರೊನಾ ಕಷ್ಟದಲ್ಲಿ ಸಿಲುಕಿದ್ದವರಿಗೆ ಆಹಾರ ಕಿಟ್ ವಿತರಿಣೆ ಬಗ್ಗೆ ನಾನು ಮತ್ತು ಸಂಚಾರಿ ವಿಜಯ್ ಮತ್ತು ಸ್ನೇಹಿತರು ಸಭೆ ಸೇರಿ ಚರ್ಚಿಸುತ್ತಿದ್ದೆವು. ನನ್ನ ಪತ್ನಿ ಅನಾರೋಗ್ಯಕ್ಕೆ ಒಳಗಾಗಿದ್ದಳು. ಪೋನ್ ಕಾಲ್ ಮಾಡಿ ಮಾತ್ರೆ ತರಲು ಹೇಳಿದ್ದಳು. ನಾನು ವಿಜಯ್ ನನ್ನು ಬಿಟ್ಟು ಮಾತ್ರೆ ತೆಗೆದುಕೊಂಡು ಹೋಗಲು ಹೊರಟೆ. ನನ್ನ ಜತೆಗೆ ವಿಜಯ್ ಕೂಡ ಬಂದರು. ಉದಯೋನ್ಮುಖ ನಟ ಸಂಚಾರಿ ವಿಜಯ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಸವಾರ ನವೀನ್‌ನನ್ನು ಜಯನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿಂತೆ ಸಮಗ್ರ ಮಾಹಿತಿಯನ್ನು ನವೀನ್ ಪೊಲೀಸರ ಮುಂದೆ ದಾಖಲಿಸಿದ್ದು, ಠಾಣೆಯ ಜಾಮೀನು ಆಧಾರದ ಮೇಲೆ ಹೊರ ಬಂದಿದ್ದಾನೆ.
ಜೂನ್ 12 ರಂದು ಬೈಕ್ ಅಪಘಾತದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಸಾವನ್ನಪ್ಪಿದ್ದರು. ಕೋಮಾಗೆ ಒಳಗಾಗಿದ್ದ ವಿಜಯ್ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ. ಇದೇ ಅವಘಡದಲ್ಲಿ ಗಾಯಗೊಂಡಿದ್ದ ವಿಜಯ್ ಆಪ್ತ ನವೀನ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ನವೀನ್ ನನ್ನು ಜಯನಗರ ಸಂಚಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆ ಕುರಿತು ಸಮಗ್ರ ವಿವರವನ್ನು ನವೀನ್ ಪೊಲೀಸರ ಮುಂದೆ ದಾಖಲಿಸಿದ್ದಾನೆ. ಜೂ 12 ರಂದು ರಾತ್ರಿ ನಾನು ಮತ್ತು ಸಂಚಾರಿ ವಿಜಯ್ ಮತ್ತು ಆಪ್ತರು ವಿಜಯ್ ಮನೆಯಲ್ಲಿ ಸಭೆ ಸೇರಿದ್ದೆವು. ಕೊರೊನಾ ಸಂಕಷ್ಟಕ್ಕೆ ಒಳಗಾದವರಿಗೆ ಆಹಾರ ಕಿಟ್ ವಿತರಣೆ ಮಾಡುವ ಬಗ್ಗೆ ಚರ್ಚೆ ನಡೆಸುವಾಗ ನನಗೆ ನನ್ನ ಪತ್ನಿಯಿಂದ ಕರೆ ಬಂತು. ಅನಾರೋಗ್ಯಕ್ಕೆ ಒಳಗಾಗಿದ್ದ ನನ್ನ ಪತ್ನಿ ಮೆಡಿಕಲ್ ಸ್ಟೋರ್ ನಿಂದ ಮಾತ್ರೆ ತರುವಂತೆ ಕೇಳಿಕೊಂಡಳು. ನನ್ನ ಪತ್ನಿಗೆ ಮಾತ್ರೆ ತಂದು ಕೊಡುವ ಸಲುವಾಗಿ ನಾನು ಬೈಕ್ ನಲ್ಲಿ ಹೊರಗೆ ಬಂದಾಗ ಸಂಚಾರ ವಿಜಯ್ ಕೂಡ ಬಂದ. ನಾನು ನಿನ್ನ ಜತೆ ಬರುವುದಾಗಿ ಹೇಳಿ ವಿಜಯ್ ಬೈಕ್ ಏರಿ ಕೂತು ಕೊಂಡಿದ್ದ.

Recommended Video
ಇದೆಲ್ಲವೂ ನಮ್ಮ ಮನೆ ಸಮೀಪವೇ ಆಗಿದ್ದರಿಂದ ನಾನು ಆಗಲೀ, ವಿಜಯ್ ಆಗಲೀ ಹೆಲ್ಮೆಟ್ ಧರಿಸಿಲ್ಲ. ಮೆಡಿಕಲ್ ಸ್ಟೋರ್ ನಲ್ಲಿ ಔಷಧ ತೆಗೆದುಕೊಂಡು ಮನೆಗೆ ಹೋಗುವಾಗ ಬೈಕ್ ಸ್ಕಿಡ್ ಆಗಿ ಎಲೆಕ್ಟ್ರಿಕಲ್ ಬೈಕ್ ಗೆ ಹೊಡೆಯಿತು. ಈ ವೇಳೆ ಗಾಯಗೊಂಡು ನಾನು ಪ್ರಜ್ಞೆ ಕಳೆದುಕೊಂಡೆ ಎಂದು ಬೈಕ್ ಸವಾರ ನವೀನ್ ಹೇಳಿಕೆ ದಾಖಲಿಸಿದ್ದಾನೆ. ನವೀನ್ ಹೇಳಿಕೆ ಆಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications