ಭಾರತ ಬಂದ್ : ರಮ್ಯಾ ಟ್ವೀಟಲ್ಲಿ ಇಣುಕಿದ ಜಡೇಜ, ಅಮೀರ್ ಖಾನ್

Recommended Video

      Bharat Bandh : ನರೇಂದ್ರ ಮೋದಿ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ ರಮ್ಯಾ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 10: ನಿರಂತರವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್ ಭಾರತದಾದ್ಯಂತ ಬಂದ್ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ರವೀಂದ್ರ ಜಡೇಜ, ಅಮೀರ್ ಖಾನ್ ಅವರ ಚಿತ್ರಗಳನ್ನು ಬಳಸಿಕೊಂಡು ಹಾಸ್ಯ ಮಾಡಿ ಟ್ವೀಟ್ ಮಾಡಿದ್ದಾರೆ.

      ಕರ್ನಾಟಕದಲ್ಲಿ ಬಂದ್‍ಗೆ ಸಂಪೂರ್ಣ ಸಹಕಾರ ದೊರೆತಿದ್ದು, ಬಹುತೇಕ ಸಾರಿಗೆ ವ್ಯವಸ್ಥೆ ಸ್ತಭ್ದವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಅಂಗಡಿ-ಮುಗ್ಗಟ್ಟುಗಳು ಮುಚ್ಚಿವೆ. ಬಂದ್ ಗೆ ಕರೆ ನೀಡಿದ ದಿನದಿಂದಲೂ ಬಿಜೆಪಿಯವರು ಯುಪಿಎ ಆಡಳಿತ ಅವಧಿ ಹಾಗೂ ಮೋದಿ ಆಡಳಿತ ಅವಧಿಯನ್ನು ತುಲನೆ ಮಾಡಿ ಟ್ರಾಲ್ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ರಮ್ಯಾ ಅವರು ಅಂದು -ಇಂದು ಎಂಬ ಸರಣಿ ಟ್ವೀಟ್ ಮಾಡಿದ್ದಾರೆ.

      ಇದಕ್ಕೂ ಮುನ್ನ ಪೆಟ್ರೋಲ್ ಬೆಲೆ 87ರುಗೇರಿದೆ. ಕ್ರಿಕೆಟರ್ ರವೀಂದ್ರ ಜಡೇಜ ಅವರು 86ರನ್ ಗಳಿಸಿದ್ದನ್ನು ಉಲ್ಲೇಖಿಸಿ ರಮ್ಯಾ ಅವರು ಟ್ವೀಟ್ ಮಾಡಿದ್ದಾರೆ.

      ಮೋದಿ ಸ್ಕೋರ್ ಜಾಸ್ತಿ

      ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜ ಅವರು 86ರನ್ ಗಳಿಸಿದ್ದಾರೆ. ಆದರೆ, ಮೋದಿ ಅವರ ಕಾಲದಲ್ಲಿ ಪೆಟ್ರೋಲ್ ಬೆಲೆ 87 ರುಗೇರಿದೆ. ಜಡೇಜ ಅವರು ಎರಡನೇ ಸ್ಥಾನದಲ್ಲಿದ್ದಾರೆ ಎಂದು ರಮ್ಯಾ ಟಾಂಗ್ ಕೊಟ್ಟಿದ್ದಾರೆ.

      ಬೆಲೆ ಏರಿಕೆ ಅಂದು ಇಂದು

      ಯುಪಿಎ ಕಾಲದಲ್ಲಿ ಹೇಗಿದ್ದವರು ಇಂದು ಎನ್ ಡಿಎ ಕಾಲದಲ್ಲಿ ಹೇಗೆ ಆಗಿದ್ದಾರೆ ಎಂಬುದನ್ನು ಚಿತ್ರಗಳ ಮೂಲಕ ತೋರಿಸಿದ್ದಾರೆ.

      ಕರ್ನಾಟಕದಲ್ಲಿ ಬೆಲೆ ಎಷ್ಟಿತ್ತು?

      ಕರ್ನಾಟಕದಲ್ಲಿ ಯಾವ ಸರ್ಕಾರ ಇದ್ದಾಗ ಇಂಧನ ಬೆಲೆ ಎಷ್ಟಿತ್ತು? ಎಂಬುದನ್ನು ಹಾಕಿದ ಸಾರ್ವಜನಿಕರು.

      ದಂಗಲ್ ಚಿತ್ರದ ಬಗ್ಗೆ ಟ್ವೀಟ್

      ಯುಪಿಎ ಕಾಲದಲ್ಲಿ ದಂಗಲ್ ಚಿತ್ರದ ಅಮೀರ್ ಖಾನ್ ಹಾಗೂ ಎನ್ಡಿಎ ಕಾಲದಲ್ಲಿ ಅಮೀರ್ ಹೇಗೆ ಇದ್ದಾರೆ ನೋಡಿ ಎಂದು ಹಾಕಿದ ರಮ್ಯಾ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+