Darshan-Pratham: ಅಭಿಮಾನಿಗಳಿಗೆ ದೊಣ್ಣೆಯಿಂದ ಹೊಡೆದು ಒಡಿಸುವೆ: ಪ್ರಥಮ್ ಹೇಳಿಕೆಗೆ ಡಿ.ಫ್ಯಾನ್ಸ್ ಗರಂ
ಬೆಂಗಳೂರು, ಜೂನ್ 17: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ತೂಗುದೀಪ್ ಸೇರಿದಂತೆ 18 ಮಂದಿ ಆರೋಪಿಗಳು ಸದ್ಯ ಪೊಲೀಸ್ ವಶದಲ್ಲಿದ್ದಾರೆ. ಸದ್ಯ ಇವರೆಲ್ಲ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದರ್ಶನ್ ಇದ್ದು, ನಟನನ್ನು ನೋಡಲು ಅಪಾರ ಅಭಿಮಾನಿಗಳು ಠಾಣೆ ಮುಂದೆ ಬಂದಿದ್ದರು. ಇವರೆಗೆಲ್ಲ ದೊಣ್ಣೆಯಿಂದ ಭಾರಿಸಬೇಕು ಎಂದೆಲ್ಲ ಮಾತನಾಡಿದ್ದ ನಟ ಒಳ್ಳೆ ಹುಡುಗ ಪ್ರಥಮ್ ಅವರ ವಿಡಿಯೋ ಹರಿದಾಡುತ್ತಿದೆ. ಇದಕ್ಕೆ ಡಿ.ಫ್ಯಾನ್ಸ್ ಗರಂ ಆಗಿದ್ದಾರೆ. ಪ್ರಥಮ್ ಮರಳಿ ಪ್ರತಿಕ್ರಿಯಿಸಿದ್ದಾರೆ.
ನಟ ದರ್ಶನ್ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದ ಎಂಬ ಕಾರಣಕ್ಕೆ ಎಂದು ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ಕೊಲೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತದೆ. ಚಿತ್ರರಂಗದ ಒಬ್ಬೊಬ್ಬರೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದೇ ರೀತಿ ಇತ್ತೀಚೆಗೆ ನಟ ಒಳ್ಳೆ ಹುಡುಗ ಪ್ರಥಮ್ ಸಹ ಮಾತನಾಡಿದ್ದರು.

ಈ ಬೇವರ್ಸಿಗಳಿಗೆ ಒಂದೊತ್ತು ಊಟ ಹಾಕಲು ಯೋಗ್ಯತೆ ಇಲ್ಲ
ಪ್ರಕರಣ ಸಂಬಂಧ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ನಟ ಪ್ರಥಮ್, ''ಆ ಅನ್ನಪೂರ್ಣೇಶ್ವರಿ ನಗರದ ಠಾಣೆ ಮುಂದೆ ಇವರೇನು (ಅಭಿಮಾನಿಗಳಿಗೆ) ಕೆಲಸ. ಠಾಣೆ ಮುಂದಿರುವ ಬೇವರ್ಸಿಗಳಿಗೆ ಮನೆಯಲ್ಲಿ ಅವರಮ್ಮನಿಗೆ ಒಂದೊತ್ತು ಹಿಟ್ಟು ಕೊಡಿಸಲು ಯೋಗ್ಯತೆ ಇಲ್ಲ. ನನಗೆ ಒಂದು ವಾರ ಪೊಲೀಸ್ ಪೇದೆ ಆಗುವ ಅವಕಾಶ ಕೊಟ್ಟು ನೊಡಿ ಎಲ್ಲರನ್ನು ದೊಣ್ಣೆ ಹಿಡಿದು ಹೊಡೆದು ಓಡಿತ್ತೇನೆ'' ಎಂದು ಹೇಳಿದ್ದರು.
ಮಾಧ್ಯಮಗಳು ಅವರ ಕೆಲಸ ಮಾಡ್ತಿದಾರೆ. ನಮ್ಮಿಂದ ಟಿಆರ್‌ಪಿ ಬರುತ್ತೆ ಎನ್ನುವ ಅಲ್ಲಿನ ಅಭಿಮಾನಿಗಳಿಗೆ ತಿಳಿ ಹೇಳಿ ಎಂದು ಮಾಧ್ಯಮಗಳ ಕೆಲಸ ಬಗ್ಗೆ ಮಾತನಾಡಿದ್ದಾರೆ. ಇದೊಂದು ಕಾನೂನು ಪ್ರಕ್ರಿಯೆ ಆಗಿದ್ದು, ಹೀಗೆ ಠಾಣೆ ಮುಂದೆ ಬಂದು ಜಮಾಯಿಸುವುದು ಎಷ್ಟು ಸರಿ ಎಂದು ಪ್ರಥಮ್ ಪ್ರಶ್ನಿಸಿದರು.
ಮಾಧ್ಯಮಗಳ ಕಾರ್ಯ ವಿವರಿಸಿದ ಪ್ರಥಮ್
ಕಾನೂನಿನ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಊಟ ನಿದ್ದೆ ಬಿಟ್ಟು ಮಾಧ್ಯಮಗಳ ಕೆಲಸ ಮಾಡುತ್ತಿವೆ. ಜಾಹೀರಾತು ಹಾಕದೇ ಸುದ್ದಿ ಪ್ರಸಾರ ಮಾಡುತ್ತಿವೆ. ಈ ವೇಸ್ಟ್ ಬಾಡಿಗಳು ಇಲ್ಲಿ ಬಂದು ನಿಂತಿರುತ್ತಾರೆ ಎಂದು ದರ್ಶನ್ ಅಭಿಮಾನಿಗಳ ಮೇಲೆ ಗರಂ ಆಗಿದ್ದಾರೆ.

ಕಣ್ಣೀರು ಒರೆಸುವ ಕೆಲಸ ಮಾಡೋಣ
ರೇಣುಕಾಸ್ವಾಮಿ ಪತ್ನಿ ಸಹನಾ ಅವರ ಖಾತೆ ನಂಬರ್ ಕೊಡಿ, ಅವರಿಗೆ ಆರ್ಥಿಕವಾಗಿ ಸಹಾಯ ಮಾಡೋಣ. ಮಾಧ್ಯಮಗಳು ನಾವು ನೀವೆಲ್ಲ ಮಾಡಬೇಕು. ಜೊತೆಗೆ ಆ ತಾಯಿ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಅಮ್ಮ ಅಕ್ಕಾ ಎಂದು ಪೋಸ್ಟ್ ಹಾಕದೇ ನೀವೆಲ್ಲ ಉತ್ತಮ ಕೆಲಸ ಮಾಡಿ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದ್ದಾರೆ. ಸಾಮಾಜಿಕ ಕಳಕಳಿ ಬಗ್ಗೆಯೂ ಪ್ರಥಮ್ ಮಾತನಾಡಿದ್ದಾರೆ.
ಇದಕ್ಕೆ ಪೊಲೀಸ್ ಠಾಣೆ ಬಳಿ ನೆರೆದಿದ್ದ ದರ್ಶನ್ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ. ನೀವು ಒಬ್ಬ ಬೆಳೆಯಬೇಕಾದ ನಟ. ನಿಮಗೂ ಅಭಿಮಾನಿಗಳು ಬೇಕು. ಈ ರೀತಿ ಮಾತನಾಡುವುದು ಸರಿಯಲ್ಲ. ಮುಂದಿನ ಇಂತಹ ಸ್ಥಿತಿಯನ್ನು ಯಾರು ಬೇಕಾದರೂ ಎದುರಿಸಬಹುದು ಎಂದು ಅಭಿಮಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ.
ಅಭಿಮಾನಿಗಳಿಗೆ ಪ್ರಥಮ್ ಸ್ಪಷ್ಟನೆ ಏನು?
ಇದಕ್ಕೆ ಸೋಮವಾರ ಒಳ್ಳೆ ಹುಡುಗ ಪ್ರಥಮ್ ಅಭಿಮಾನಿಗಳ ಮಾತಿಗೆ ಪ್ರತಿಕ್ರಿಯಿಸಿ ವಿಡಿಯೋ ಲಿಂಕ್ ಪೋಸ್ಟ್ ಮಾಡಿದ್ದಾರೆ. ಅರ್ಧಂಬರ್ಧ ಎಡಿಟೆಡ್ ವಿಡಿಯೋ ನೋಡಿ ಗೊಂದಲಕ್ಕೆ ಒಳಗಾಗಬೇಕಡಿ. ಪೂರ್ತಿ ವಿಡಿಯೋ ಇಲ್ಲಿದೆ ಸಾಧ್ಯವಾದರೆ ನೋಡಿ. ಯಾರಿಗಾದ್ರೂ ಬೇಸರವಾಗಿದ್ರೆ ಹೇಳಿ, ಖಂಡಿತಾ ನಾನು ತಿದ್ದುಕೊಳ್ಳುತ್ತೇನೆ. ನನಗೆ ಯಾವುದೇ ಅಹಂ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ಎಚ್ಚರಿಕೆ ನಡುವೆಯು ಪ್ರಥಮ್ ವಿರುದ್ಧ ದರ್ಶನ್ ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ. ಒಬ್ಬ ನಟನಾಗಿ ಮತ್ತೊಬ್ಬ ನಟನ ಅಭಿಮಾನಿಗಳಿಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿ ಹೇಳುತ್ತಿದ್ದಾರೆ.












Click it and Unblock the Notifications