Jaggesh: ಮದಕ್ಕೆ ಕರುಣೆ ಇಲ್ಲ..ಪಾಪಕರ್ಮ ಅವನ ಸುಡುತ್ತದೆ: ಜಗ್ಗೇಶ್ ಹೀಗಂದಿದ್ದೇಕೆ?
ಬೆಂಗಳೂರು, ಜೂನ್ 12: ಕೊಲೆ ಆರೋಪದ ಮೇಲೆ ನಟ ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಹಿರಿಯ ನಟ ರಾಜಕಾರಣಿ ಜಗ್ಗೇಶ್ ಮಾಡಿರುವ ಟ್ವೀಟ್ ಎಲ್ಲಡೆ ವೈರಲ್ ಆಗುತ್ತಿದ್ದು, ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ. ದರ್ಶನ್ ಅವರ ಹೆಸರನ್ನೂ ಎಲ್ಲೂ ಪ್ರಸ್ತಾಪಿಸದ ನಟ ಜಗ್ಗೇಶ್, ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಜಗ್ಗೇಶ್ ಮಾಡಿರುವ ಟ್ವೀಟ್ ಏನು?
ಸರ್ವ ಜೀವಿಯಲ್ಲಿ ದೇವರಿದ್ದಾನೆ
ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!
ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ
ಅವನ ಪಾಪಕರ್ಮ ಅವನ ಸುಡುತ್ತದೆ!
ಕಲಿಯುಗದಲ್ಲಿ ದೇವರು ಕಲ್ಲಲ್ಲಾ
ಎಲ್ಲಾ ಕರ್ಮಕ್ಕೂ ತತಕ್ಷಣ ಫಲಿತಾಂಶ
ಉಂಟು!
ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ!
ಮದಕ್ಕೆ ಕಾರುಣ್ಯದ ಅರಿವಿಲ್ಲಾ ಎಂದು ನಟ ಜಗ್ಗೇಶ್ ಯಾರನ್ನು ಕೊಲ್ಲುವ ಹಕ್ಕು ಯಾರಿಗಿಲ್ಲ, ಅವನ ಪಾಪಕರ್ಮ ಅವನನ್ನೇ ಸುಡುತ್ತದೆ. ಎಲ್ಲಾ ಕರ್ಮಕ್ಕೂ ತತ್‌ಕ್ಷಣ ಫಲಿತಾಂಶ ಉಂಟು, ಮದಕ್ಕೆ ಕರುಣೆ ಇಲ್ಲ ಎಂದು ಪರೋಕ್ಷವಾಗಿ ದರ್ಶನ್‌ಗೆ ಟಾಂಗ್ ಕೊಟ್ಟಿದ್ದಾರೆ.
ನಟ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ವಿವಾದವೇನು..?
ಕನ್ನಡದ ಹಿರಿಯ ನಟ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಈ ಹಿಂದೆ ವಿವಾದ ಸೃಷ್ಟಿ ಆಗಿತ್ತು. ಆ ವಿವಾದ ದೊಡ್ಡ ಮಟ್ಟಕ್ಕೆ ತಲುಪಿತ್ತು. ಮೈಸೂರಿನಲ್ಲಿ ಜಗ್ಗೇಶ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ಸ್ಥಳಕ್ಕೆ ಕೆಲವು ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಜಗ್ಗೇಶ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದರು.
ದರ್ಶನ್ ಅಭಿಮಾನಿಗಳು ಈ ರೀತಿ ಮುತ್ತಿಗೆ ಹಾಕಲು ನಟ ಜಗ್ಗೇಶ್ ಅವರು ಮಾತನಾಡಿದ ಆಡಿಯೋ ಒಂದು ಕಾರಣ ಆಗಿತ್ತು. ಹಾಗಾಗಿ ದರ್ಶನ್ ಅವರ ಬಗ್ಗೆ ನೀವು ಮಾತನಾಡಿದ್ದು ಸರಿಯಿಲ್ಲ, ನೀವು ಫ್ಯಾನ್ಸ್ ಬಳಿ ಕ್ಷಮೆ ಕೇಳಿ ಎಂದು ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರನ್ನು ಮುತ್ತಿಕೊಂಡಿದ್ದರು. ಈ ಘಟನೆಯಿಂದ ನಟ ಜಗ್ಗೇಶ್ ಮನನೊಂದಿದ್ದರು. ಟ್ವಿಟ್ಟರ್ ಮೂಲಕ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದರು. ಈ ವಿವಾದದ ಬಳಿಕ ಅನೇಕ ಬಾರಿ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.












Click it and Unblock the Notifications