ಮಳೆಹಾನಿಗೆ ನಾಗರಿಕರೇ ಜವಾಬ್ದಾರರು: ನಟ ವಿಜಯ್

ಬೆಂಗಳೂರು, ಸೆ.26: ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಜನ ಬೆಚ್ಚಿದ್ದಾರೆ. ಮನಸಾರೆ ಮನಬಂದಂತೆ ಹಲವರ ಮೇಲೆ ಮುನಿಸಿಕೊಂಡಿದ್ದಾರೆ. ಮಳೆ ಬೀಳುವುದೇ ತಪ್ಪು, ಬಿಬಿಎಂಪಿ ಇರುವುದೇ ವೇಸ್ಟ್ ಎಂಬಂತೆ ಮಾಧ್ಯಮಗಳ ಮುಂದೆ ಜನ ಕೂಗಾಡಿದ್ದಾರೆ. ಅದರೆ, ಇದಕ್ಕೆಲ್ಲ ನಾವೇ ಹೊಣೆ ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸಿದ್ದಾರೆ ಈ ರೀತಿ ವಿಕೋಪಗಳನ್ನು ಎದುರಿಸಬೇಕಾಗುತ್ತಿರಲಿಲ್ಲ ಎಂಬ ಸತ್ಯ ಯಾರ ಬಾಯಿಂದಲೂ ಬರಲಿಲ್ಲ. ಈ ಬಗ್ಗೆ ಯೋಚಿಸಿರಲಿಕ್ಕೂ ಸಾಕು.

ನೈಋತ್ಯ ಮುಂಗಾರು ವಾಪಸ್ ಆಗುವ ಸಂದರ್ಭದಲ್ಲಿ ಒಂದೆರಡು ದಿನ ಭಾರಿ ಮಳೆ ಮತ್ತೆರಡು ದಿನ ಸಾಧಾರಣ ಮಳೆ ನಿರೀಕ್ಷಿತ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದವು. ಆದರೆ, ಈ ಬಗ್ಗೆ ನಾವು ಎಷ್ಟು ಎಚ್ಚರಿಕೆ ವಹಿಸಿದೆವು? ಮಳೆಯಂತೂ ಬೀಳುವುದು ನಿಲ್ಲುವುದಿಲ್ಲ ಅದರೆ, ಮಳೆ ಎದುರಿಸಲು ನಾವು ಎಷ್ಟರಮಟ್ಟಿಗೆ ತಯಾರಾಗಿದ್ದೇವೆ? ಇದು ಎಲ್ಲ ನಾಗರಿಕರು ಕೇಳಿಕೊಳ್ಳಬೇಕಾದ ಪ್ರಶ್ನೆ. [ಯಡಿಯೂರು ಕೆರೆ, ಪಾರ್ಕ್‌ ಮೇಲೊಂದು ಪಕ್ಷಿ ನೋಟ]

ನಾಗರಿಕ ಸಾಮಾಜಿಕ ಕಳಕಳಿ ಬಗ್ಗೆ ನಟ ದುನಿಯಾ ವಿಜಯ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಹಿಂದೆ ಬೋರ್ ವೆಲ್ ದುರಂತಗಳಾದ ಇಂಥದ್ದೇ ಕಳಕಳಿಯ ಪೋಸ್ಟ್ ಮಾಡಿದ್ದರು.

ಮಳೆ,ಮೋರಿ ನೀರೂ COURT ನಲ್ಲಿ ನ್ಯಾಯ ಕೇಳಿದರೆ 'ಅಪರಾಧಿ' ಯಾರು? "ಬೆಂಗಳೂರಿನಲ್ಲಿ ಧಾರಾಕಾರ ಮಳೆ.,ರಸ್ತೆಯಲ್ಲಿ ವಾಹನಗಳು ಮುಳುಗಡೆ ಪ್ರಯಾಣಿಕರ ಪರದಾಟ,ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿದ ನೀರು, ಮನೆಯವರ ಹೆಣಗಾಟ". ಮನುಷ್ಯನಿಗಾಗುವ ಅನಾನುಕೂಲಗಳ ಬಗ್ಗೆ ಎಷ್ಟೆಲ್ಲಾ ಮಾತನಾಡುವ ನಾವುಗಳು "ಮನುಷ್ಯನೇ" ಅದಕ್ಕೆ ಮೂಲ ಕಾರಣ ಎನ್ನುವುದನ್ನ ಮರೆತೇ ಬಿಡುತ್ತೇವೆ! [ದುನಿಯಾ ವಿಜಯ್ ಹೇಳಿದ್ದು ಕೇಳಿ!]

ಬೆಂಗಳೂರಿನ ಕೆರೆಗಳೆಲ್ಲ ಎಲ್ಲಿ ಹೋದವು?

ಬೆಂಗಳೂರಿನ ಕೆರೆಗಳೆಲ್ಲ ಎಲ್ಲಿ ಹೋದವು?

20 ವರ್ಷಗಳ ಹಿಂದೆ 200ಕ್ಕೂ ಹೆಚ್ಚಿದ್ದ ಬೆಂಗಳೂರಿನ ಕೆರೆಗಳು ಇಂದು ಕೇವಲ 50!
ಸರ್ಕಾರ ಅರ್ಧ ಕೆರೆಗಳನ್ನು ಮುಚ್ಚಿ ಮಾರಿದರೆ, ಭೂಗಳ್ಳರ ಕರಾಮತ್ತಿನಿಂದ ಮಿಕ್ಕ ಕೆರೆಗಳು ಸತ್ತು ಹೋಗಿವೆ. ಸರಿ ಸುಮಾರು '25 ಸಾವಿರ ಕೋಟಿ' ಬೆಲೆಯಷ್ಟು ಕೆರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ.

ಮೋರಿಯ ಪಕ್ಕ ನಿವೇಶನ ಸಿಕ್ಕರೆ ಮೂರಡಿ ಜಾಗ ಹೆಚ್ಚು ಸಿಕ್ಕಿತು ಎಂದು ಖುಷಿಯಿಂದ ಒತ್ತುವರಿ ಮಾಡಿಕೊಳ್ಳುವ ನಾಗರೀಕರು! ರಾಜಕಾಲುವೆಗಳ ಸುಳಿವೂ ಇಲ್ಲದೆ ತಲೆಯೆತ್ತಿರುವ ವಾಣಿಜ್ಯ ಸಂಕೀರ್ಣಗಳು!ಮಳೆ ನೀರು ಎಲ್ಲಿ ಹೋಗಬೇಕು?ನೀರಿಗೂ ನ್ಯಾಯ ಬೇಡವೇ? ಎಂದು ಪ್ರಶ್ನಿಸಿದ್ದಾರೆ.

ನೀರಿಗೂ ನ್ಯಾಯ ಬೇಡವೇ

ನೀರಿಗೂ ನ್ಯಾಯ ಬೇಡವೇ

ನಿಂತ, ನುಗ್ಗಿದ ಮಳೆ ನೀರಿನ ಬಗ್ಗೆ ಬೊಬ್ಬೆ ಹೊಡೆಯುವ ನಾವುಗಳೇ ಅದು ಸೇರಬೇಕಾದ ಸ್ಥಳವನ್ನು ಅದರಿಂದ ಕಸಿದುಕೊಂಡಿರುವುದು ಎನ್ನುವ ಸತ್ಯ ಮರೆತು ಬೆಟ್ಟಿದ್ದೇವೆ... ನೀರಿಗೂ ನ್ಯಾಯ ಬೇಡವೇ?

ಮನೆಗಳಿಗೆ ನುಗ್ಗುವ ಮಳೆನೀರಿನ ಬಗ್ಗೆ

ಮನೆಗಳಿಗೆ ನುಗ್ಗುವ ಮಳೆನೀರಿನ ಬಗ್ಗೆ

ಮನೆಗಳಿಗೆ ನುಗ್ಗುವ ಮಳೆನೀರಿನ ಬಗ್ಗೆ ಬೊಬ್ಬೆ ಹೊಡೆಯುವ ನಾವು ಕೆರೆಗಳಿಗೆ ಲಗ್ಗೆ ಇಟ್ಟ ಮನುಷ್ಯರನ್ನು ಏಕೆ ಕ್ಷಮಿಸಿ ಬಿಡುತ್ತೇವೆ? ನೀರಿಗೂ ನ್ಯಾಯ ಬೇಡವೇ? ಎಂದು ವಿಜಯ್ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೇ ನೀಡಿರುವ ಮ್ಯಾನ್ಯುಯಲ್ ಕೆ ಪಾಲ್ ಎಂಬುವರು ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದು ನೆಮ್ಮದಿ ಕಾಣುವುದಕ್ಕಿಂತ ಮಕ್ಕಳು, ಮಡದಿ ಕರೆದುಕೊಂಡು ಪುನಃ ಹಳ್ಳಿಗೆ ಹೋಗಿ ನೆಲೆಸುವುದೇ ಮೇಲು ಎಂದಿದ್ದಾರೆ.

ಕೆರೆಗಳೂ ಬೊಬ್ಬೆ ಇಟ್ಟರೆ

ಕೆರೆಗಳೂ ಬೊಬ್ಬೆ ಇಟ್ಟರೆ

ಮನುಷ್ಯನು ಕೆರೆಗಳಿಗೆ ನುಗ್ಗಿ concrete ಹಾಕುವಾಗ ಕೆರೆಗಳೂ ಬೊಬ್ಬೆ ಇಟ್ಟರೆ.,ನ್ಯಾಯ ಕೇಳಿದರೆ ಅಪರಾಧಿ ಯಾರು.,ಶಿಕ್ಷೆ ಯಾರಿಗೆ? ನೀರಿಗೂ ನ್ಯಾಯ ಬೇಡವೇ...?

ರಿಯಲ್ ಎಸ್ಟೇಟ್ ಮಾಫಿಯಾ ಅವಾಂತರ ಸೃಷ್ಟಿಸುತ್ತಿದೆ. ಸರ್ಕಾರ ಅರ್ಧ ಕೆರೆಗಳನ್ನು ಮುಚ್ಚಿ ಮಾರಿದರೆ, ಭೂಗಳ್ಳರ ಕರಾಮತ್ತಿನಿಂದ ಮಿಕ್ಕ ಕೆರೆಗಳು ಸತ್ತು ಹೋಗಿವೆ ಎಂದು ವಿಜಯ್ ಎಚ್ಚರಿಸಿದ್ದಾರೆ.

ಬೆಂಗಳೂರಿನ ಬಹುತೇಕ ಕೆರೆಗಳ ಗತಿ ಇದು

ಬೆಂಗಳೂರಿನ ಬಹುತೇಕ ಕೆರೆಗಳ ಗತಿ ಇದು

ಬೆಂಗಳೂರಿನ ಬಹುತೇಕ ಕೆರೆಗಳ ಗತಿ ಇದು..... ನಾವು ಮಳೆನೀರಿನ ಮನೆಯನ್ನು ಕಿತ್ತುಕೊಂಡಿದ್ದೇವೆ ಎನ್ನುವುದನ್ನು ಯಾಕೆ ಮರೆತು ಬಿಡುತ್ತೇವೆ..?? ನೀರಿಗೂ ನ್ಯಾಯ ಬೇಡವೇ? ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾರ್ವಜನಿಕರು, ನಿಮ್ಮ ಮಾತು ನಿಜ, ಕೆರೆ ಜಾಗವನ್ನು ಒತ್ತುವರಿ ಮಾಡಿ ಅಪಾರ್ಟ್ಮೆಂಟ್ ಕಟ್ಟಿ ಲೇಕ್ ವ್ಯೂ ಅಪಾರ್ಟ್ಮೆಂಟ್ ಎಂದು ಬೋರ್ಡ್ ಹಾಕುತ್ತಾರೆ, ಮರಳು ಮಾಫಿಯಾದಿಂದ ಕೆರೆಗಳಲ್ಲಿ ನೀರಿಲ್ಲದ್ದಂತಾಗಿದೆ ಎಂದಿದ್ದಾರೆ.

ಈ ಚಿತ್ರಸರಣಿಯ ಎಲ್ಲಾ ಚಿತ್ರಗಳ ಕೃಪೆ: ದುನಿಯಾ ವಿಜಯ್ ಅವರ ಫೇಸ್ ಬುಕ್ ಪುಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+