Darshan: ಅಭಿಮಾನಿಗಳಿಗೆ ಕೊಟ್ಟ ಮಾತು ಮರೆತ ದರ್ಶನ್, ಅಂದು ಈತ ಹೇಳಿದ್ದೇನು?
ಬೆಂಗಳೂರು, ಜೂನ್ 18: ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗಿದೆ. ಮತ್ತೊಂದೆಡೆ ದರ್ಶನ್ ಈ ಹಿಂದೆ ಮಾಡಿದ್ದ ತಪ್ಪುಗಳೆಲ್ಲವು ಒಂದೊಂದಾಗೇ ಬಯಲಿಗೆ ಬರುತ್ತಿವೆ. ಮನುಷ್ಯನಾದವನು ಅದರಲ್ಲೂ ಸೆಲೆಬ್ರೆಟಿಯಾದವನು ಮೊದಲ ತಪ್ಪಿನಲ್ಲೇ ತಿದ್ದಿಕೊಂಡಿದ್ದರೆ ಇದೆಲ್ಲವು ಆಗುತ್ತಲೇ ಇರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಹಾಗಾದರೆ ದರ್ಶನ್ ಮಾಡಿದ ಮೊದಲ ತಪ್ಪೇನು? ನಂತರ ಅಭಿಮಾನಿಗಳಿಗೆ ಕೊಟ್ಟ ಮಾತು, ಭರವಸೆಯಂತೆ ನಡೆದುಕೊಂಡರಾ? ಇಲ್ಲಿದೆ ಉತ್ತರ.
ಬೇರೊಬ್ಬ ನಟಿಯ ವಿಚಾರವಾಗಿ ತಾನು ಕಷ್ಟದಲ್ಲಿದ್ದಾಗ ಸಲುಹಿದ ಪತ್ನಿ ವಿಜಯಲಕ್ಷ್ಮಿಗೆ ದರ್ಶನ್ ಮನಬಂದಂತೆ ಥಳಿಸಿದ್ದ. ಪತ್ನಿಯ ಕೈ ಮುರಿಯುವ ಹಾಗೆ ಹಲ್ಲೆ ಮಾಡಿದ್ದ ಆಸ್ಪತ್ರೆಗೆ ಅಟ್ಟಿದ್ದ. ಇದಾದ ಬಳಿಕ ದರ್ಶನ್ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ವೈವಾಹಿಕ ಜೀವನದಲ್ಲಿ ನಡೆದ ಕಲಹಗಳು, ಅಂದಿನ ದರ್ಪ ದರ್ಶನ್‌ನನ್ನು 14 ದಿನ ಜೈಲಿಗೆ ಕಳಹಿಸಿದ್ದವು.

'ನಿದರ್ಶನ' ವಾದ ನಟ 'ದರ್ಶನ್'
2011ರಲ್ಲಿ ನಡೆದ ಈ ಘಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ನಡೆದಿದ್ದ ನಟ ದರ್ಶನ್ ರಾಜ್ಯ ಜನರು, ಅಭಿಮಾನಿಗಳು, ಮಾಧ್ಯಮಗಳಿಗೆ ಪರಿ ಪರಿಯಾಗಿ ಕ್ಷಮೆ ಕೇಳಿದ್ದ. ಮುಂದೆ ಎಲ್ಲವು ಚೆನ್ನಾಗಿರುತ್ತದೆ. ನಾನು ಪತ್ನಿ ವಿಜಯಲಕ್ಷ್ಮಿ ಉತ್ತಮವಾಗಿ ಬದುಕಿ ತೋರಿಸುತ್ತೇವೆ ಎಂದೆಲ್ಲ ಹೇಳಿದ್ದ.
ಅಭಿಮಾನಿಗಳಿಗೆ ಮಾತು ಕೊಟ್ಟಿದ್ದ ದರ್ಶನ್ ಈವರೆಗೆ (2024) ಕೊಟ್ಟ ಮಾತಿನಂತೆ ನಡೆದುಕೊಂಡನಾ? ಇಲ್ಲ. ಅಹಂ, ಹಣದ ಮದ, ಜನಪ್ರಿಯತೆ ನಶೆ ಯಿಂದ ದಾರಿ ತಪ್ಪಿದ್ದಾನೆ. ಈ ಮಾತಿಗೆ ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್ ಜೈಲಲ್ಲಿರುವುದೇ ಜೀವಂತ ನಿದರ್ಶನವಾಗಿದೆ.
ದರ್ಶನ್ ಅಂದು ಹೇಳಿದ್ದೇನು?, ಈಗ ಮಾಡಿದ್ದೇನು?
ಪತ್ನಿ ಮೇಲಿನ ಹಲ್ಲೆ ಪ್ರಕರಣದ ಬಳಿಕ ನಟ ದರ್ಶನ್ ದಂಪತಿಗಳು ಮಾತನಾಡಿದ್ದರು. 'ಪತಿ-ಪತ್ನಿ ಜಗಳ, ಇದು ನಮ್ಮ ಬಾಳಿನಲ್ಲಿ ಬಂದ ಕಹಿ ಘಟನೆ. ಇದರಿಂದ ಇಷ್ಟೆಲ್ಲ ಆಗಿದೆ. ನಾನು ಜೈಲಲ್ಲಿದ್ದರು ಅಭಿಮಾನಿಗಳು, ರಾಜ್ಯ ಜನರು ನನ್ನ ಕೈ ಬಿಟ್ಟಿಲ್ಲ ಎಂದು ಸಾರಥಿ ಸಿನಿಮಾ ಬಿಡುಗಡೆ ಬಳಿಕ ಸಿಕ್ಕ ಗೆಲುವನ್ನು ದರ್ಶನ್ ನೆನೆದರು.
ಇಂತಹ ಕಹಿ ಘಟನೆ ನಡೆಯಬಾರದಿತ್ತು, ನಡೆದು ಹೋಗಿದೆ. ಕಷ್ಟದಲ್ಲಿ ಕೈ ಹಿಡಿದ ರಾಜ್ಯದ ಜನರು, ಅಭಿಮಾನಿಗಳನ್ನು ಕ್ಷಮೆ ಕೋರಿತ್ತೇನೆ. ದಯವಿಟ್ಟು ನನ್ನ ಕ್ಷಮಿಸಿ. ನಿಜವಾಯಿಗೂ ಇಷ್ಟು ಜನ ಇದ್ದಾರೆ ಎಂಬುದು ನನಗೇ ಗೊತ್ತಿರಲಿಲ್ಲ. ಒಬ್ಬ ವ್ಯಕ್ತಿಗೆ ಎಷ್ಟು ಅಭಿಮಾನಿಗಳು ಇರುತ್ತಾರೆ ಎಂದು ತೋರಿಸಿದ್ದಾರೆ. ನಿಮಗೆಲ್ಲ ನಾನು ಜೀವನ ಪೂರ್ತಿ ಚಿರುಋಣಿಯಾಗಿರುತ್ತೇನೆ. ದಯವಿಟ್ಟು ನನ್ನ ಕ್ಷಮಿಸಿ. ಮುಂದೆ ದರ್ಶನ್ ಕಡೆಯಿಂದ ಇಂತಹ ತಪ್ಪುಗಳು ಆಗಲ್ಲ ಎಂದು ಮಾತು ಕೊಟ್ಟಿದ್ದ.

ನಾನು ನನ್ನ ಪತ್ನಿ ವಿಜಯಲಕ್ಷ್ಮೀ ಚೆನ್ನಾಗಿದ್ದೆವು. ಇದೊಂದು ಕೆಟ್ಟ ಘಟನೆ ನಡೆದು ಹೋಗಿದೆ. ಆಗಿದ್ದೆಲ್ಲ ಆಯ್ತು, ಮುಂದೆ ಇದೆಲ್ಲ ಮರೆತು ನಾನು ವಿಜಯಲಕ್ಷ್ಮಿ ಚೆನ್ನಾಗಿ ಇರುತ್ತೇವೆ. ಅಭಿಮಾನಿಗಳ ಜೊತೆಗೆ ಮಾಧ್ಯಮಗಳು ಕ್ಷಮಿಸಬೇಕು. ನೀವು ತುಂಬಾ ಸಪೋರ್ಟ್ ಮಾಡಿದ್ದೀರಿ. ಯಾರಿಗೆಲ್ಲ ನನ್ನಿಂದ ತೊಂದರೆ ಆಗಿದೆಯೋ ಅವರೆಲ್ಲ ದಯಮಾಡಿ ಕ್ಷಮಿಸಿ.
ಎಲ್ಲಿರಿಗೂ ಋಣಿಯಾಗಿರುತ್ತೇನೆ ಎಂದಿದ್ದ ದರ್ಶನ್
ಸಾರಥಿ ಸಿನಿಮಾ ನೋಡಿದ ಜನ ನನ್ನ ಕೈ ಹಿಡಿದಿದ್ದಾರೆ. ಪ್ರತಿ ಜಿಲ್ಲೆ ಜಿಲ್ಲೆಗೂ ಹೋಗಿ ಬೇಟಿಯಾಗಿ, ಅಭಿಮಾನಿಗಳ ಬಳಿ ಕ್ಷಮೆ ಕೇಳಿ ಬರುತ್ತೇನೆ. ನಿರ್ಮಾಪಕರಿಗೆ, ಸ್ನೇಹಿತರ, ಚಿತ್ರರಂಗದ ಎಲ್ಲ ಕಲಾವಿದರಿಗೂ ತುಂಬ ಚಿರಋಣಿ ಆಗಿರುತ್ತೇನೆ ಎಂದು ಹೇಳಿದ್ದ, ಮಾತು ಕೊಟ್ಟಿದ್ದ ದರ್ಶನ್ ಇಂದು ದಾರಿ ತಪ್ಪಿದ ಮಗನಾಗಿದ್ದಾನೆ.
ತಾಯಿ, ಸಹೋದರನನ್ನು ದೂರ ಮಾಡಿಕೊಂಡಿರುವ ದರ್ಶನ್ ವರ್ತನೆ, ನಡವಳಿಗೆ ಹಾಗೆಯೇ ಇದೆ. 2011ರ ನಂತರ ಕೊಟ್ಟ ಮಾತು ಮರೆತ ದರ್ಶನ್, ಕಳೆದ ಕೆಲವೇ ವರ್ಷಗಳಲ್ಲಿ ಅನೇಕ ವಿವಾದಗಳಿಗೆ ಸಾಕ್ಷಿಯಾಗಿದ್ದಾರೆ. ದರ್ಶನ್ ಮೇಲೆ FIR ಗಳು ದಾಖಲಾಗಿವೆ.
ಹಲವರಿಗೆ ಬೆದರಿಸಿದ್ದ, ಹಲ್ಲೆ ಮಾಡಿದ್ದ ಎನ್ನಲಾಗಿದೆ. ಸಾಲು ಸಾಲು ಪ್ರಕರಣದಲ್ಲಿ ದರ್ಶನ್ ದರ್ಪ, ಹಣದ ಮದ, ದುರಹಂಕಾರವೇ ಕಣ್ಣಿಗೆ ರಾಚುತ್ತದೆ. ಈ ಮೂಲಕ ದರ್ಶನ್ ಬಾಯಿ ಮಾತಿನಲ್ಲಿ ತೆರೆ ಮುಂದೆ ಮಾತ್ರ ಅಭಿಮಾನಿಗಳು, ಸರಳತೆ, ಕರುಣೆ, ಒಳ್ಳೆಯತನ ಮಾತ್ರ, ತೆರ ಹಿಂದೆ ಮೃಗೀಯ ವರ್ತನೆ ತೋರುವ ಮನುಷ್ಯ ಎಂಬುದು ಈಗ ಸಾಬೀತಾಗಿದೆ.












Click it and Unblock the Notifications