ಆ ನಟಿಗೆ ಶೂಟಿಂಗ್‌ ಸೆಟ್‌ನಲ್ಲೇ ಇಷ್ಟವಿಲ್ಲದ ಕೆಲಸ ಮಾಡಿ ದುರ್ಯೋಧನನಂತೆ ನಕ್ಕಿದ್ದ ನಟ ದರ್ಶನ್‌; ಆರೋಪ

Actor Darshan Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ಎ1 ಆರೋಪಿ ಪವಿತ್ರಗೌಡ ಆಗಿದ್ದರೆ, ಎ2 ಆರೋಪಿ ನಟ ದರ್ಶನ್‌ ಆಗಿದ್ದಾನೆ. ಇನ್ನು ಕೊಲೆಗೂ ಮುನ್ನ ದರ್ಶನ್‌ ಮತ್ತು ಗ್ಯಾಂಗ್‌ ರೇಣುಕಾಸ್ವಾಮಿ ಅವರನ್ನು ಶೆಡ್‌ನಲ್ಲಿ ಕೂಡಿಹಾಕಿ ಆತ ನಾನ್‌ವೆಜ್‌ ಆಗಿದ್ದರೂ ಬಲವಂತದಿಂದ ಮೂಳೆ ತಿನ್ನಿಸಿ ಹಲ್ಲೆ ಮಾಡಿದ್ದಾರೆಂಬ ಆರೋಪವಿದೆ. ಅಷ್ಟೇ ಅಲ್ಲದೇ ಈ ಹಿಂದೆಯೂ ಸಹ ಶೂಟಿಂಗ್‌ ಸೆಟ್‌ನಲ್ಲಿ ನಟಿಯೊಬ್ಬರಿಗೆ ಬಲವಂತಂದಿಂದ ಮೂಳೆ ಬಾಯಲ್ಲಿಟ್ಟಿದ್ದರೆಂದು ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಹೇಳಿದ್ದಾರೆ.

ಇನ್ನು ಈ ಬಗ್ಗೆ ಈಗಾಗಲೇ ಹಲವು ಸಿನಿಮಾ ನಟ, ನಟಿಯರು ಸೇರಿದಂತೆ ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಇದೀಗ ಬಿಗ್‌ಬಾಸ್‌ ಸ್ಪರ್ಧಿಯೊಬ್ಬರು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Actor Darshan fed chicken to actress even though she didn t like it on shooting set allegation

ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಈಗಾಗಲೇ ನಟ ದರ್ಶನ್‌ಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಹಲವೆಡೆ ಹಲವು ಸಂಘಟನೆಗಳು, ಸಮುದಾಯಗಳು ಪ್ರತಿಭಟನೆಗಳನ್ನು ಮಾಡುತ್ತಿವೆ. ಇದರ ನಡುವೆಯೇ ನಟ ದರ್ಶನ್ ಬಗ್ಗೆ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ಆಗಿರುವ ಪ್ರಶಾಂತ್ ಸಂಬರಗಿ ಅವರು ದರ್ಶನ್ ಬಗ್ಗೆ ಅಚ್ಚರಿಕೆ ಹೇಳಿಕೆಯನ್ನು ನೀಡಿದ್ದಾರೆ.

ಕೊಲೆಗೂ ಮುನ್ನ ಅಮಾಯಕ ರೇಣುಕಾಸ್ವಾಮಿ ಮಾಂಸ ತಿನ್ನುವುದಿಲ್ಲ, ಸಸ್ಯಾಹಾರಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೂ ಕ್ಯಾರೆ ಅನ್ನದ ಈ ರೌಡಿ ಬಾಸ್‌ ಬಲವಂತವಾಗಿ ಚಿಕನ್ ಪೀಸ್ ಬಾಯಿಗೆ ತುರಿಕಿದ್ದಾನೆ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಹಾಗೆಯೇ 3 ವರ್ಷಗಳ ಹಿಂದೆ ಚಿತ್ರಿಕರಣದ ವೇಳೆ ಖ್ಯಾತ ಕನ್ನಡ ಚಲನಚಿತ್ರ ನಟಿಯೊಬ್ಬರು ತಾನು ಸಸ್ಯಾಹಾರಿ ಎಂದು ಕೇಳಿದಾಗಲೂ ಅವರ ಮಾತನ್ನು ಲೆಕ್ಕಿಸದೆ, ಈ ನಟನ ಸೂಚನೆಯಂತೆ ಮಧ್ಯಾಹ್ನದ ಊಟದಲ್ಲಿ ಮಾಂಸವನ್ನು ಬೆರೆಸಿ ನೀಡಲಾಯಿತು. ಬಳಿಕ ಅದನ್ನು ತಿನ್ನುವಾಗ ಈ ದುರಾತ್ಮ ದುರ್ಯೋಧನನಂತೆ ನಕ್ಕನಂತೆ. ಇವನೊಬ್ಬ ಹೆರನೋವುಗ ಮೃಗ ಎಂದು ಪ್ರಶಾಂತ್‌ ಸಬಂರ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಎಲ್ಲೋ ಒಂದು ಕಡೆ ನಟ ದರ್ಶನ್ ಪ್ರಕರಣ ಮುಚ್ಚಹೋಗುವ ಸಂದೇಹವಿತ್ತು. ಆದರೆ ಎಲ್ಲರಿಗೂ ಒಂದೇ ಕಾನೂನು ಅಂತಾ ಬೆಂಗಳೂರು ಪೊಲೀಸರು ಸಾಬೀತುಪಡಿಸಿದ್ದು, ಇದು ತುಂಬಾ ಸಂತಸದ ಸಂಗತಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ಕಾಮೆಂಟ್‌ಗಳು ಬರುತ್ತಿವೆ. ಇದಕ್ಕೆಲ್ಲ ಕೊಲೆ ಅಂದ್ರೆ ಹೇಗೆ? ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಕಷ್ಟ. ದೇಹ ಬೆಳೆದರೂ ಬುದ್ಧಿ ಬೆಳೆದಿಲ್ಲ ಅಂದ್ರೆ ಅದು ಪಾಲಕರು ಕೊಟ್ಟಿರೋ ಜೀನ್ಸ್," ಎಂದು ಪ್ರಶಾಂತ್ ಸಂಬರಗಿ ಗುಡುಗಿದ್ದಾರೆ.

" ಇನ್ನು ನಾನು 20 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರೂ ಕೂಡ ಇದುವರೆಗೂ ದರ್ಶನ್ ಜೊತೆ ಸೆಲ್ಫಿ ತೆಗೆದುಕೊಂಡಿಲ್ಲ. ಅವರ ಜೊತೆ ಸಿನಿಮಾವನ್ನು ಸಹ ಮಾಡಿಲ್ಲ, ಭೇಟಿಯೂ ಆಗಿಲ್ಲ. ಭಗವಂತನೇ ನನ್ನನ್ನು ದುಷ್ಟರಿಂದ ದೂರ ಇಟ್ಟಿರಬಹುದು", ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+