ಘಟನೆ ನಡೆದ 36 ಗಂಟೆಗಳಲ್ಲಿ ನಟ ದರ್ಶನ್ ಬಂಧನ: ಸಿಕ್ರೇಟ್ ರಿವೀಲ್ ಮಾಡಿದ ಪೊಲೀಸ್ ಆಯುಕ್ತ ದಯಾನಂದ್
ನಟ ದರ್ಶನ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಕಳೆದ ಮಂಗಳವಾರ ದರ್ಶನ್‌ರನ್ನು ಅನ್ನಪೂರ್ಣೆಶ್ವರಿ ನಗರ ಪೊಲೀಸ್‌ರು ಮೈಸೂರಿನಲ್ಲಿ ಬಂಧಿಸಿದ್ದರು. ಈ ಬಗ್ಗೆ ಮಂಗಳವಾರ ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿ ನಡೆಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಾಗುತ್ತಿರುವ ಹಾದಿಯ ಬಗ್ಗೆ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಈಗಾಗಲೇ ಈ ಕೊಲೆ ಸಂಬಂಧಿಸಿದಂತೆ 17 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿ ವಿಜಯನಗರ ವಹಿಸಿಕೊಂಡಿದ್ದಾರೆ. ಸತ್ಯಾ ಸತ್ಯತೆ ಬಯಲಿಗೆ ಎಳೆಯಲು ತನಿಖೆಯನ್ನು ವಿವಿಧ ಆಯಮದಲ್ಲಿ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕಾದರೆ ಮಾಧ್ಯಮಗಳ ಸಹಾಯ ತುಂಬಾ ಮುಖ್ಯ. ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ನಾವು ಮಾಡುತ್ತೇವೆ. ಆರೋಪಿಗಳಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಇರುವ ಕಾರಣ ಜನರಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ ಎಂದು ತಿಳಿಸಿದ್ದಾರೆ.
ತನಿಖೆ ಬೇರೆ ಬೇರೆ ಆಯಮದಲ್ಲಿ ನಡೆಸಲಾಗಿದೆ. ಸತ್ಯಾ ಸತ್ಯತೆಯನ್ನು ಬಯಲಿಗೆ ಎಳೆಯಲು ತಂಡಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಹಿಂದಿನ ಇನ್ಸ್‌ಪೆಕ್ಟರನ್ನು ಈ ಟೀಮ್ ನಲ್ಲಿ ಸೇರಿಸಲಾಗಿದೆ. ವಿಧಿವಿಜ್ನಾನ ತಂಡ, ಟೆಕ್ನಿಕಲ್ ಟೀಮ್ ಎಲ್ಲರನ್ನು ಸೇರಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಪ್ರಕರಣ ಬೆಳಕಿಗೆ ಬಂದಿದ್ದು ಪೊಲೀಸರ ಸಮಯಪ್ರಜ್ನೆಯಿಂದ, ಸಾಕ್ಷಿಗಳನ್ನು ಬೇಗನೆ ಕಂಡುಕೊಂಡಿದ್ದರಿಂದ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ದೌರ್ಜನ್ಯಪೂರವಾಗಿ ಕೊಲೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದರು.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಕೆಲಸ ಆಗಬೇಕಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಸಮಪರ್ಕ ಸಾಕ್ಷಿ ಕ್ರೂಢಿ ಕರಿಸಲು ಎಲ್ಲ ಕ್ರಮಗಳನ್ನು ಕೈ ಗೊಳ್ಳಲಾಗಿದೆ ಎಂದರು.
ಶಾಮಿಯಾನ, ನಿಷೇಧಾಜ್ಞೆ ಏಕೆ?
ಇನ್ನು ಎಲ್ಲರ ಚಿತ್ತ ಕದ್ದಿರುವ ಠಾಣೆಯ ಸುತ್ತಲ್ಲಿನ ಶಾಮಿಯಾನ ಹಾಗೂ ನಿಷೇಧಾಜ್ಞೆಯ ಕುರಿತಾಗಿಯೂ ಸಹ ಪೊಲೀಸ ಆಯುಕ್ತ ಬಿ ದಯಾನಂದ್ ಮಾಹಿತಿ ನೀಡಿದರು. ಆರೋಪಿ ಸೆಲಿಬ್ರಿಟಿ ಆಗಿರುವುದರಿಂದ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಹೀಗಾಗಿ ಕೆಲವು ಊಹಾಪೋಹಗಳು ಎಡೆ ಮಾಡಿಕೊಟ್ಟಿವೆ. ಎಲ್ಲರೂ ಶಾಂತ ರೀತಿಯಿಂದ ವರ್ತಿಸಿದಲ್ಲಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬಹುದು ಎಂದು ಹೇಳಿದ್ದಾರೆ.












Click it and Unblock the Notifications