Darshan Thoogudeepa: ಆ ಮಹಾದಾಸೆ ಈಡೇರುವ ವೇಳೆಯೇ ಜೈಲು ಸೇರಿದ ನಟ ದರ್ಶನ್
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ನಟ ದರ್ಶನ್ ಸೇರಿದಂತೆ ಪಟಾಲಂ ಗ್ಯಾಗ್ ಜೈಲು ಸೇರಿದೆ. ಇನ್ನೂ ಆ ಮಹದಾಸೆ ನೆರುವೇರುವ ವೇಳೆಯೇ ದರ್ಶನ್ ಜೈಲು ಪಾಲಾದರು ಎಂದು ಅವರ ಬಾಲ್ಯ ಕುಚುಕು ಹೇಳಿಕೊಂಡಿದ್ದಾರೆ.
ನಟ ದರ್ಶನ್‌ಗೆ ಕುದುರೆ ಸವಾರಿ, ದನಗಳ ಸಾಕಾಣಿಕೆ, ಅದರಲ್ಲೂ ಬಿಡುವಿನ ವೇಳೆಯಲ್ಲಿ ಎತ್ತಿನ ಬಂಡಿಯಲ್ಲೂ ಕೂಡ ಅವರು ಸವಾರಿ ಮಾಡಿದ ಉದಾಹರಣೆಗಳು ಇವೆ. ಹಾಗೆಯೇ ಇದೇ ಎತ್ತಿನ ಬಂಡಿಗಳ ಮೂಲಕ ಚಾಮರಾಜನಗರ ಜಿಲ್ಲೆಯ ಪವಾಡ ಪುರುಷನ ಬೆಟ್ಟಕ್ಕೆ ಸಾಗುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಅಷ್ಟರಲ್ಲೇ ಅವರ ಬಂಧನವಾಯ್ತು ಎಂದು ಅವರ ಬಾಲ್ಯದ ಕುಚುಕು ಶಿವಕುಮಾರ್ ಹೇಳಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರನ್ನು ಭೇಟಿ ಮಾಡಲು ಅಭಿಮಾನಿಗಳು ಸೇರಿದಂತೆ ಹಲವರು ಜೈಲಿನತ್ತ ಬಂದು ವಾಪಾಸ್ ಆಗುತ್ತಿದ್ದಾರೆ. ಆದರೆ ಕುಟುಂಬ ಸದಸ್ಯರು ಹಾಗೂ ಕೆಲ ಸೆಲೆಬ್ರೆಟಿಗಳನ್ನು ಮಾತ್ರ ದರ್ಶನ್ ಭೇಟಿಗೆ ಅವಕಾಶ ನೀಡಲಾಗುತ್ತಿದೆ. ಅದರಲ್ಲೂ ಜೈಲಿನ ನಿಯಮದ ಪ್ರಕಾರ, ಕುಟುಂಬಸ್ಥರಿಗೆ ಮಾತ್ರ ವಾರದಲ್ಲಿ ಮೂವರಿಗೆ ಮಾತ್ರ ದರ್ಶನ್ ಭೇಟಿಗೆ ಅವಕಾಶ ನೀಡಲಾಗುತ್ತಿದೆ.
ಕೆಲವು ಸಿನಿಮಾ ನಟ, ನಿರ್ಮಾಪಕರು ಸಹ ದರ್ಶನ್ ಅನ್ನು ಜೈಲಿನಲ್ಲಿ ಭೇಟಿ ಆಗಲು ಸಾಧ್ಯ ಆಗದೆ ವಾಪಾಸ್ ತೆರಳಿರುವ ಘಟನೆಗಳು ನಡೆದಿವೆ. ಅಲ್ಲದೆ, ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾದ ಕೆಲವೇ ವ್ಯಕ್ತಿಗಳಲ್ಲಿ ಬಾಲ್ಯದ ಗೆಳೆಯ ಕಾಡು ಶಿವು ಸಹ ಒಬ್ಬರಾಗಿದ್ದಾರೆ.
ದರ್ಶನ್‌ನನ್ನು ಮೊದಲಿನಿಂದಲೂ ನೋಡಿಕೊಂಡು ಬಂದಿರುವ ಶಿವಕುಮಾರ್ ತಮ್ಮ ಹಾಗೂ ದರ್ಶನ್ ಅವರ ನಡುವಿನ ಬಾಂಧವ್ಯದ ಜೊತೆಗೆ ದರ್ಶನ್‌ಗಿದ್ದ ಯೋಚನೆಗಳು, ಮಗನ ಬಗ್ಗೆ ಇದ್ದ ಆಸೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
"ನಮ್ಮದು ತುಂಬಾ ಬಹಳ ಹಳೆ ಬಾಂಧವ್ಯವಾಗಿದೆ. ಮೈಸೂರಿನ ಪ್ರಭಾ ಥಿಯೇಟರ್‌ನಲ್ಲಿ ಸಿನಿಮಾ ನಟರ ಕಟೌಟ್ ನೋಡಿ ನಂದೂ ಹೀಗೆ ಕಟೌಟ್ ನಿಲ್ಲುತ್ತದೆ ಅಂತಾ ಹೇಳಿಕೊಂಡಿದ್ದರು. ಹಾಗೆಯೇ ಆಯಿತು," ಎಂದು ಹೇಳಿಕೊಂಡಿದ್ದಾರೆ.
"ನಟ ದರ್ಶನ್ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಬಂಡಿಯಲ್ಲಿ ಮಹದೇಶ್ವರನ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರು. ಜೂನ್‌ನಲ್ಲಿ ಬಂಡಿಗಳನ್ನು ಕಟ್ಟಿಕೊಂಡು ಮಹದೇಶ್ವರ ಬೆಟ್ಟಕ್ಕೆ ಹೋಗುವ ಯೋಜನೆಯಲ್ಲಿದ್ದರು. ಆದರೆ, ಅಷ್ಟರಲ್ಲೇ ದರ್ಶನ್ ಜೈಲು ಸೇರಿದರು. ದರ್ಶನ್ ಅವನ ಸ್ವಂತ ವಿಷಯಕ್ಕೆ ಎಂದೂ ಸಮಸ್ಯೆಗೆ ಸಿಕ್ಕಿಹಾಕಿಕೊಂಡವರಲ್ಲ. ಯಾವಾಗಲೂ ಬೇರೆಯವರ ಸಮಸ್ಯೆಗೆ ಸಿಕ್ಕಿರುವುದು ಹೆಚ್ಚು," ಎಂದು ಹೇಳಿದ್ದಾರೆ.
"ಮಗನ ಬಗ್ಗೆ ದರ್ಶನ್‌ಗೆ ತುಂಬಾ ಕನಸುಗಳಿವೆ. ನನ್ನ ರೀತಿಯಲ್ಲೇ ಶ್ರಮವಹಿಸಿ ಅವನು ಸಿನಿಮಾ ರಂಗವನ್ನು ಪ್ರವೇಶಿಸಬೇಕು. ಒಂದೇ ಬಾರಿಗೆ ನಾಯಕ ನಟ ಆಗಬಾರದು. ಮೊದಲು ಬೇರೆ-ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಳ್ಳಬೇಕು. ನಂತರ ಅಷ್ಟೇ ಸಿನಿಮಾ ನಟನಾಗಬೇಕು ಎಂದುಕೊಂಡಿದ್ದರು. ವಿಜಯಲಕ್ಷ್ಮಿ ಅವರೊಟ್ಟಿಗೂ ಸಹ ದರ್ಶನ್ ಚೆನ್ನಾಗಿದ್ದರು. ಸಿನಿಮಾಗಳು ಚೆನ್ನಾಗಿ ನಡೆಯುತ್ತಿದ್ದವು. ಸಿನಿಮಾಗಳಲ್ಲಿ ಬೇಡಿಕೆ ಕಡಿಮೆಯಾದಾಗ ರಾಜಕೀಯಕ್ಕೆ ಬರುವ ಯೋಚನೆಯೂ ಇತ್ತು. ಎಲ್ಲವೂ ಚೆನ್ನಾಗಿ ನಡೆಯುವಾಗ ಹೀಗಾಗಿದೆ," ಎಂದಿದ್ದಾರೆ.












Click it and Unblock the Notifications