ಟ್ವಿಟ್ಟರ್ ನಲ್ಲಿ ಜಗ್ಗೇಶ್, ಉಪೇಂದ್ರ, ಜಿತೇಂದ್ರ ಎ-ಟು-ಜಡ್
"ಕೃಷ್ಣ ಕಾಲದ ಬಗ್ಗೆ ಹೇಳಿದನ್ನ ಕೆಟ್ಟದಾಗಿ ಹಾಡಲ್ಲಿ ಒಬ್ಬ ನಟ ತನ್ನ ಸಹೋದ್ಯೋಗಿ ನಟರನ್ನ ಅಣಕ ಮಾಡಿ ಹಾಡಿದ ಹಾಡು.ರೋಗಗ್ರಸ್ತರ ಮನಸಿನಂತೆ ಇದೆ" ಎಂದು ಉಪೇಂದ್ರ ಅವರ ಉಪ್ಪಿ 2 ಹಾಡಿನ ಬಗ್ಗೆ ಒಂದು ಕಾಲದ ಜಿತೇಂದ್ರ, ನವರಸ ನಾಯಕ ಜಗ್ಗೇಶ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ಅದರೆ, ಇದು ಅಲ್ಲಿಗೆ ನಿಲ್ಲಲಿಲ್ಲ, ಕೆಲ ಫ್ಯಾನ್ಸ್ ಗಳನ್ನು ಟ್ವಿಟ್ಟರಿನಲ್ಲಿ ಜಗ್ಗೇಶ್ ಅವರನ್ನು ಕಾಡತೊಡಗಿದರು. ಕೊನೆ ವಿಧಿ ಇಲ್ಲದೆ ಕೀಟಲೆ ಮಾಡೋ ಕುಹಕಿಗಳನ್ನು ಜಗ್ಗೇಶ್ ಅವರು 'ಬ್ಲಾಕ್' ಮಾಡಿ ಹಾಕಿದ್ದಾರೆ. [ರಮ್ಯಾ ಅಭಿಮಾನಿಗಳಿಗೆ ಜಗ್ಗೇಶ್ ಟ್ವೀಟ್ ಏಟು]
'ಕನ್ನಡದ ಗಾದೆ"ಇದ್ದಿದ್ ಇದಂಗ್ ಹೇಳಿದ್ ರೆ ಎದ್ ಬಂದ್ ಎದೆಗ್ ಒದಿತಾರಂತೆ" ಅಂತವರ ಎದೆ ಮೇಲೆ ಕಾಲಿಟ್ಟು ಸತ್ಯ ಹೇಳೊನೆ ಅಪ್ಪಂಗ್ ಹುಟ್ಟಿದಮಗ ಅನ್ನೊದು ನನ್ ಗಾದೆ.b frank' ಎಂದು ಜಗ್ಗೇಶ್ ತಮ್ಮ ಸ್ಟೈಲಿನಲ್ಲಿ ಚಾಟಿ ಬೀಸಿದ್ದಾರೆ. [ಮಂಡ್ಯದ ಮಾಜಿ ಸಂಸದೆ ರಮ್ಯಾ , ಶಾಸಕಿಯಾಗೋಲ್ಲ ಬಿಡಿ!]
ನಿಜ ಅಭಿಮಾನಿ ಮಾತಿಗೆ ಮನ್ನಣೆ ಕೊಡುತ್ತೇನೆ..ಈ ಕ್ಷಣದಿಂದಲೆ i will ignore.ಎಲ್ಲರಿಗು ರಾಯರು ಬಯಸಿದ್ದೆಲ್ಲಾ ನೀಡಲಿ ಶುಭಮಸ್ತು: ಎಂದಿದ್ದಾರೆ. ಕನ್ನಡಿಗರು, ಕನ್ನಡ ಸಿನಿಮಾ, ಸಾಮಾಜಿಕ ಜಾಲ ತಾಣಗಳಲ್ಲಿನ ನಡವಳಿಕೆ, ಇತಿಹಾಸ, ಫ್ಯಾನ್ಸ್ ಬಗ್ಗೆ ಜಗ್ಗೇಶ್ ಹರಿಸಿದ ವ್ಯಾಖ್ಯಾನಗಳು ಸರಣಿ ಟ್ವೀಟ್ ಗಳು ನಿಮ್ಮ ಮುಂದೆ....

ಮನ ಮೈಲಿಗೆಯಾಗುತ್ತೆ ಎಂದ ಜಗ್ಗೇಶ್
ಟ್ವಿಟರ್ ವಿದ್ಯಾವಂತರ ಚಾವಡಿ ಈ ಕ್ಷೇತ್ರಕ್ಕು ಕೆಲ ಪರೋಡಿಗಳ ಆಗಮನವಾಗಿದೆ.ಅಂತವರನ್ನ ದೇವಸ್ಥಾನದ ಬಾಗಲಲ್ಲಿ ಕೂರಿಸಿ ಕಾಲುತೊಳದುಕೊಳ್ಳಿ.ಇಲ್ಲವಾದರೆ ಮನ ಮೈಲಿಗೆಯಾಗುತ್ತೆ ಎಂದ ಜಗ್ಗೇಶ್.

ಕನ್ನಡಿಗ ಒಂದಾಗಿ ಬಾಳಿದ ಇತಿಹಾಸ ಕಮ್ಮೀ
ಕನ್ನಡಿಗ ಒಂದಾಗಿ ಬಾಳಿದ ಇತಿಹಾಸ ಕಮ್ಮೀ:)ಹಾಗಾಗಿ ಮಯೋರ ನಿಂದ ಸಂಗೋಳ್ಳಿರಾಯಣ್ಣ ನ ವರೆಗು,ಹಾಗೂ ಇಂದು ಕೂಡ ನಮ್ಮವರಿಂದಲೆ ನಮ್ಮವರು ಸೊರಗಿದ್ದಾರೆ.ಮುಂದೆಯು ಸೊರಗುತ್ತಾರೆ.
|
ಇತಿಹಾಸ ಗೊತ್ತಿರದ ಮಂದಿಗೆ
90ಇಚೆ ಜನಿಸಿದ ಹಾಗೂ ಮುಂದಿನ ಪೀಳಿಗೆ ಪಾಲಕರಿಗೆ ಮಾತಾಡುವ ಮೊದಲು ಇತಿಹಾಸ ಅಧ್ಯಯನ ಮಾಡಿ,ಅದರ ಕೊರತೆ ಕಾಣುತ್ತಿದೆ,ಮಾತು ನುಡಿದರೆ ಶಿವಮೆಚ್ಚಬೇಕು ಅಂದಿದ್ದಾರೆ ಶರಣರು:)
|
ಕರೆದರೆ ಹುಡುಗಿರು ಮಲಗುತ್ತಾರೆ ಎಂಬ ಡೈಲಾಗ್
ಜಿತೆಂದ್ರ film ಅಂತ್ತಿದ್ದಂಗೆ ನೀವು ಮುಟ್ ನೋಡ್ಕೊಂಡ್ರ ಸರ್ :D ಎಂದು ಉಪ್ಪಿ ಫ್ಯಾನ್ ಸಂದೀಪ್ ಟಾಂಗ್ ನೀಡಿದ್ದಲ್ಲದೆ,. touching touching dialog ಹೊಡ್ದಾಗ ಅಕ್ಕ ತಂಗಿರು ನೆನಪಾಗಿಲ್ವಾ? ?? ಎಂದು ಪ್ರಶ್ನಿಸಿದ್ದಾರೆ.
|
ಬಿಜೆಪಿ ಕರ್ನಾಟಕ, ಸಂಸದ ಪ್ರತಾಪ್ ಗೆ ಟ್ಯಾಗ್
ಬಿಜೆಪಿ ಕರ್ನಾಟಕ, ಸಂಸದ ಪ್ರತಾಪ್ ಗೆ ಟ್ಯಾಗ್ ಮಾಡಿ ಕೆಲ ಕುಹಕಿಗಳ ಬಗ್ಗೆ ತಿಳಿಸಿದ ಜಗ್ಗೇಶ್. ಎಷ್ಟು ಚಂದ ಹಿರಿಯರ ಮಾತು "ರಾಜನಂತೆ ಪ್ರಜೆ"ತಂದೆ ತಾಯಿ ಯಂತೆ ಮಕ್ಕಳು,ಶಿಕ್ಷಕನಂತೆ ವಿದ್ಯಾರ್ಥಿ,ಗುಣದಂತೆ ಜೀವನ,ನಮ್ಮಂತೆ ನಮ್ಮ ವಂಶ,ಮಾತಿನಂತೆ ಸಮಾಜ,ಊಟದಂತೆ ದೇಹ:)
|
ಉಪ್ಪಿಯಿಂದಲೇ ಬೆಳೆದ ಜಗ್ಗೇಶ್?
ಉಪ್ಪಿಯಿಂದಲೇ ಬೆಳೆದ ಜಗ್ಗೇಶ್ ನಂತರ ಉಪ್ಪಿಯನ್ನೇ ಆಡಿಕೊಂಡು ಸಿನಿಮಾ ಮಾಡಿದರು ಎಂಬ ಟ್ವೀಟ್ ಗೆ ಉತ್ತರಿಸಿದ ಜಗ್ಗೇಶ್
|
ನೋ ಕನ್ನಡ ಎಂಬ ಗ್ರೂಪಿನ ಬಗ್ಗೆ ಜಗ್ಗೇಶ್ ಕಿಡಿ
ಫೇಸ್ ಬುಕ್ ನಲ್ಲಿ ಆರಂಭವಾಗಿರುವ ನೋ ಕನ್ನಡ ಎಂಬ ಪುಟದ ಬಗ್ಗೆ ಜಗ್ಗೇಶ್ ಕಿಡಿಕಾರಿದ್ದು ಹೀಗೆ
|
ಜಗ್ಗೇಶ್ ಹಿತ ನುಡಿಗಳ ಸರಣಿ
ನಾನು ಸಂಪ್ರದಾಯ ಗ್ರಾಮಿಣ ಒಕ್ಕಲಿಗರ ಬಡಕುಟುಂಬದಲ್ಲಿ ಡುಡ್ಡಿಗಿಂತ ಮಾನವಿಯತೆ ಕಲಿತ ಮಗ. ನಮಗೆ ಇಂದಿನ ಗಿಮಿಕ್ ಗಿಂತ ನಿನ್ನೆಯ ಸಂಪ್ರದಾಯ ಮಾತ್ರ ಗೊತ್ತು.. ಬೆಟ್ಟದ ತಪ್ಪಲಲ್ಲಿ ನಿಂತು ಆಯಸ್ಸು ಶ್ರಮ ವ್ಯರ್ಥ ಮಾಡಿ ಹತ್ತಿದವರ ಅನುಭವವನ್ನ ಕ್ಷಣದಲ್ಲಿ ಅಳೆಯಬಹುದು !ಆದರೆ ಬೆಟ್ಟ ಹತ್ತಿದಾಗ ಅವರ ಅಳತೆ ತಪ್ಪು ಎಂದು ತಿಳಿಯುತ್ತೆGEv












Click it and Unblock the Notifications