ನಟ ನಾಗಭೂಷಣ್ ಕಾರು ಆಕ್ಸಿಡೆಂಟ್: ಅಷ್ಟಕ್ಕೂ ಆಗಿದ್ದು ಏನು?

ಬೆಂಗಳೂರು: ಅಷ್ಟಕ್ಕೂ ಕಾರು ಅಪಘಾತದಲ್ಲಿ ಮಹಿಳೆಯ ಸಾವಿಗೆ ಕಾರಣರಾದ ಆರೋಪದ ಹಿನ್ನೆಲೆ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕೆಲ ಗಂಟೆಗಳಲ್ಲಿ ಅವರನ್ನು ಕೋರಮಂಗಲದಲ್ಲಿರುವ ಜಡ್ಜ್ ಮುಂದೆ ಹಾಜರುಪಡಿಸುವುದಾಗಿ ಮಾಹಿತಿ ಸಿಕ್ಕಿದೆ. ನಟ ನಾಗಭೂಷಣ್ ಅವರು ಕೂಡ ಸ್ವತಃ ಪೊಲೀಸರ ಎದುರು ಘಟನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮದೆ ವಿಭಿನ್ನ ಅಭಿನಯದ ಮೂಲಕ ಗಮನ ಸೆಳೆದಿದ್ದ ನಟನಿಗೆ ಇಂದು ಆಘಾತ ಸಿಕ್ಕಿದೆ. ರಾಜಧಾನಿ ಬೆಂಗಳೂರಿನ ವಸಂತಪುರದ ನಿವಾಸಿಯಾದ 48 ವರ್ಷದ ಪ್ರೇಮಾ ಎಂಬ ಮಹಿಳೆಗೆ ನಟ ನಾಗಭೂಷಣ್ ಕಾರಲ್ಲಿ ಗುದ್ದಿ, ಅಪಘಾತ ಎಸಗಿದ್ದಾರೆಂದು ಆರೋಪ ಮಾಡಲಾಗಿದೆ. ನಿನ್ನೆ ತಡರಾತ್ರಿ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ ರಾತ್ರಿ 9 ಗಂಟೆಗೆ ನಾಗಭೂಷಣ್ ತಮ್ಮ ಮನೆಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಾಗಿದೆ. ಪ್ರತ್ಯಕ್ಷ್ಯದರ್ಶಿಗಳು ನಾಗಭೂಷಣ್ ಅವರನ್ನು ಗುರುತು ಹಿಡಿದಿದ್ದಾರೆ.

Accident Allegation against Kannada Actor Nagabhushan

ಭೀಕರ ಘಟನೆ ನಡೆದಿದ್ದು ಹೇಗೆ

ಹೌದು ನಟ ನಾಗಭೂಷಣ್ ಶೂಟಿಂಗ್ ಮುಗಿಸಿಕೊಂಡು ಬರುವಾಗ ದುರಂತ ಸಂಭವಿಸಿದೆ. ಅಷ್ಟಕ್ಕೂ ಶೂಟಿಂಗ್ ಮುಗಿಸಿಕೊಂಡು ನಾಗಭೂಷಣ್ ಕಾರಿನಲ್ಲಿ ಬರುವ ಸಂದರ್ಭದಲ್ಲಿ ಈ ದಂಪತಿ ಅಡ್ಡ ಕಾರಿಗೆ ಅಡ್ಡ ಬಂದಿದ್ದಾರೆ ಎನ್ನಲಾಗಿದೆ. ನಾಗಭೂಷಣ್ ಕಾರಿಗೆ ಪ್ರೇಮಾ & ಕೃಷ್ಣ ದಂಪತಿ ಅಡ್ಡ ಬಂದ ಕಾರಣ ನಾಗಭೂಷಣ್ ಅವ್ರ ಕಾರು ಗುದ್ದಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಮೃತರ ಕುಟುಂಬಸ್ಥರು ಬೇರೆಯದ್ದೇ ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಹಾಗೇ ಪ್ರತ್ಯಕ್ಷ್ಯದರ್ಶಿಗಳ ಜೊತೆಗೂ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಚಿಕಿತ್ಸೆ ಫಲಿಸದೆ ಮೃತಪಟ್ಟ...

ಮತ್ತೊಂದು ಕಡೆ ಅಪಘಾತದಲ್ಲಿ ದಂಪತಿಗೆ ತೀವ್ರ ಗಾಯವಾಗಿದ್ದು ತಕ್ಷಣವೇ ನಾಗಭೂಷಣ್ ಗಾಯಾಳುಗಳನ್ನ ಖುದ್ದಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಪ್ರೇಮಾ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ಪ್ರೇಮಾ ಅವ್ರ ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗಕ್ಕೂ ದೊಡ್ಡ ಆಘಾತ ಎದುರಾಗಿದೆ. ಇನ್ನು ಘಟನೆ ಬಗ್ಗೆ ಸೂಕ್ತ ತನಿಖೆಗೆ ಮೃತರ ಕುಟಂಬ ಸದಸ್ಯರು ಒತ್ತಾಯ ಮಾಡುತ್ತಿದ್ದಾರೆ.

Accident Allegation against Kannada Actor Nagabhushan

ಒಟ್ನಲ್ಲಿ ನಟ ನಾಗಭೂಷಣ್ ಅಪಘಾತ ಈಗ ಸಂಚಲನ ಸೃಷ್ಟಿಸಿದ್ದು, ಅಲ್ಲದೆ ದಂಪತಿಯ ಸಾವಿಗೆ ನಿರ್ಲಕ್ಷ್ಯದ ಚಾಲನೆ ಕಾರಣ ಎಂದು ಈಗ ಮೃತರ ಕುಟುಂಬ ಸದಸ್ಯರು ಆರೋಪ ಮಾಡ್ತಿದ್ದಾರೆ. ಹೀಗಾಗಿ ಸೂಕ್ತ ತನಿಖೆ ನಂತರವೇ ಸತ್ಯ ಬಯಲಾಗಲಿದೆ. ಈ ಹಿನ್ನೆಲೆಯಲ್ಲಿ ಈಗ ನಾಗಭೂಷಣ್ ಅವರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಪ್ರತ್ಯಕ್ಷ್ಯದರ್ಶಿಗಳಿಂದ ಕೂಡ ಮಾಹಿತಿ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+