ಬೆಂಗಳೂರಿನಲ್ಲಿ 3ಕಡೆ ಎಸಿಬಿ ದಾಳಿ, ದಾಖಲೆ ಪರಿಶೀಲನೆ
ಬೆಂಗಳೂರು,ಡಿಸೆಂಬರ್ 29: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಪರಿಶೀಲಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ,ಆರ್. ಮುದ್ದುರಾಜು, ಬೆಂಗಳೂರು ಗ್ರಾಮಾಂತರ ಭೂ ದಾಖಲೆ ನಿರ್ದೇಶಕ ಇ.ಪ್ರಕಾಶ್ ಮತ್ತು ಬೆಂಗಳೂರು ಗ್ರಾಮಾಂತರ ಕೈಗಾರಿಕಾ ಜಂಟಿ ನಿರ್ದೇಶಕ ಜಿ.ನಾಗರಾಜು ಅವರ ಮನೆ ಮತ್ತು ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ಮಾಡಿದ್ದು ದಾಖಲೆಗಳನ್ನು ಪರಿಶೀಲಿಸಿದೆ.

ಅಕ್ರಮ ಹಣ, ಆಸ್ತಿ ಮತ್ತು ಅಪನಗದೀಕರಣದಿಂದಾದ ಭ್ರಷ್ಟಾಚಾರ ಹಿನ್ನೆಲೆ ಎಸಿಬಿ ದಾಳಿ ನಡೆಸಿದ್ದು ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿ ಯಾರು ಯಾರು ಅಕ್ರಮ ನಡೆಸಿದ್ದಾರೆ ಎಂಬುದರ ಬಗ್ಗೆ ಮಾಹತಿ ಕಲೆಹಾಕಿದೆ. ಆದರೆ ಅಕ್ರಮದ ಬಗ್ಗೆ ಮಾಹಿತಿ ನೀಡಿಲ್ಲ
ಅದರೆ ಇದೇ ರೀತಿ ಅನೇಕ ಗ್ರಾಮಾಂತರ ಮತ್ತು ಬಿಬಿಎಂಪಿ ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡುವ ಸಾಧ್ಯತೆಯಿದ್ದು ಅಕ್ರಮ ನಡೆಸಿದವರನ್ನು ಹೊರಗೆಳೆಯಲಿದ್ದಾರೆ











Click it and Unblock the Notifications