ಬೆಂಗಳೂರಿನಲ್ಲಿ ಏಕಕಾಲದಲ್ಲಿ ನಾಲ್ಕು ಕಡೆ ಎಸಿಬಿ ದಾಳಿ
ನಾಗರಬಾವಿ, ಬ್ಯಾಟರಾಯನಪುರ, ಕೋರಮಂಗಲದಲ್ಲಿರುವ ಅಧಿಕಾರಿಗಳ ಮನೆ ಸೇರಿದಂತೆ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಏಕಕಾಲದಲ್ಲಿ 4 ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ.
ಬೆಂಗಳೂರು, ಮೇ 10: ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಏಕಕಾಲದಲ್ಲಿ 4 ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ. ನಾಗರಬಾವಿ, ಬ್ಯಾಟರಾಯನಪುರ, ಕೋರಮಂಗಲದಲ್ಲಿರುವ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಎಸಿಬಿ ತಂಡ ಕೆಲ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ನಾಲ್ವರು ಅಧಿಕಾರಿಗಳ ಮೇಲೆ ಪದೇ ಪದೇ ದೂರು ಬಂದಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ರಾಮನಗರ ತಹಶೀಲ್ದಾರ್ ಎಂ. ರಘುಮೂರ್ತಿ, ಕೆಪಿಟಿಸಿಎಲ್ ಡೈರೆಕ್ಟರ್ ಎನ್. ನಾಗೇಶ್, ಬಿಬಿಎಂಪಿ ಹೆಚ್ಚುವರಿ ಆಯುಕ್ತ ಕೆ.ಸಿ.ಯತೀಶ್ ಕುಮಾರ್, ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕ್ಷಕ ನಿರ್ದೇಶಕ ರಾಮಕೃಷ್ಣ ರೆಡ್ಡಿ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.











Click it and Unblock the Notifications