ಅದಾನಿಗೆ ಪ್ರಧಾನಿ ಸಹಾಯ: ಬಿಜೆಪಿ ಕಚೇರಿ ಮುಂದೆ ಎಎಪಿ ಪ್ರತಿಭಟನೆ, ಹಲವರು ವಶಕ್ಕೆ

ಭಾರತದ ಉದ್ಯಮಿ ಗೌತಮ್ ಅದಾನಿ ಅವ್ಯವಹಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಸಹಕಾರ ನೀಡಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಭಾನುವಾರ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಬೆಂಗಳೂರು, ಫೆಬ್ರವರಿ 12: ಭಾರತದ ಉದ್ಯಮಿ ಗೌತಮ್ ಅದಾನಿ ಅವ್ಯವಹಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಸಹಕಾರ ನೀಡಿದೆ ಎಂದು ಆರೋಪಿಸಿದ ಆಮ್ ಆದ್ಮಿ ಪಕ್ಷ (AAP) ಭಾನುವಾರ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಹಲವರನ್ನು ಪೊಲೀಸರ ವಶಕ್ಕೆ ಪಡೆದರು.

ಪ್ರತಿಭಟನೆ ವೇಳೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಭಾರತವೆಂದರೆ ನಮ್ಮೆಲ್ಲ ತಾಯಿ ಇದ್ದಂತೆ. ತಾಯಿಯ ಸಂಪನ್ಮೂಲವನ್ನು ಬಿಜೆಪಿಯು ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದೆ. ದೇಶದ ಕಲ್ಲಿದ್ದಲು, ಗ್ಯಾಸ್‌, ವಿದ್ಯುತ್‌, ರಸ್ತೆ, ನೀರು, ವಿಮಾನ ನಿಲ್ದಾಣ, ಬಂದರು ಮುಂತಾದವುಗಳನ್ನೆಲ್ಲ ಅದಾನಿ ಪಾಲಾಗುವಂತೆ ಕೇಂದ್ರ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

AAP Protest Against BJP and PM Narendra Modi in front of BJP Party Office at Bengaluru

Namma Metro: 318 ಬೋಗಿಗಳ ಪೂರೈಕೆಗೆ ಆಸಕ್ತಿ ವಹಿಸಿದ 4 ಕಂಪನಿಗಳು, ಟೆಂಡರ್, ಮಾರ್ಗದ ಬಗ್ಗೆ ತಿಳಿಯಿರಿ.

ಸದ್ಯ ದೇಶದಲ್ಲಿ ಆರ್ಥಿಕ ಆತಂಕ ಎದುರಾಗಿದ್ದು, ಹೀಗೇ ಮುಂದುವರಿದರೆ, ಭಾರತ ಮಾತೆಗೆ ಜೈ ಎನ್ನುವ ಬದಲು ಅದಾನಿಗೆ ಜೈ ಎಂದು ಹೇಳಬೇಕಾಗುತ್ತದೆ. ಪ್ರಧಾನಮಂತ್ರಿಗಳು ಈ ಬಗ್ಗೆ ತನಿಖೆಗೆ ಸೂಚಿಸಬೇಕು. ಬದಲಾಗಿ ಅವರೇ ಉದ್ಯಮಿ ಪರ ನಿಂತಿದ್ದಾರೆ. ಅದಾನಿ ವಿರುದ್ಧದ ಎಲ್ಲ ಆರೋಪಗಳ ಬಗ್ಗೆ ಜಂಟಿ ಸದನ ಸಮಿತಿಯ ತನಿಖೆಯಾಗಬೇಕು ಅವರು ಆಗ್ರಹಿಸಿದರು.

ಎಎಪಿ ರಾಜ್ಯ ಕಾರ್ಯಾಧ್ಯಕ್ಷ ಮೋಹನ್‌ ದಾಸರಿ ಮಾತನಾಡಿದ, ಅದಾನಿ ಆಸ್ತಿಯು 2014ರಲ್ಲಿ 37,000 ಕೋಟಿ ರೂ. ಆಸ್ತಿ ಹೊಂದಿದ್ದ ಅದಾನಿ ನಾಲ್ಕು ವರ್ಷದ ನಂತರ 2018ರಲ್ಲಿ 59,000 ಕೋಟಿ ರೂ. ಆಸ್ತಿ ಒಡೆಯನಾದರು. 2020ರಲ್ಲಿ 2.5 ಲಕ್ಷ ಕೋಟಿ ಹಾಗೂ ಕಳೆದ ವರ್ಷ 2022ರಲ್ಲಿ 13 ಲಕ್ಷ ಕೋಟಿ ರೂ.ಗೆ ಅವರ ಆಸ್ತಿ ಹೆಚ್ಚಾಯಿತು.
ಇದಕ್ಕೆ ಕಾರಣ ಪ್ರಧಾನಮಂತ್ರಿಗಳು. ಒಬ್ಬ ಉದ್ಯಮಿಗೆ ಎಲ್ಲಾ ಸಂಪನ್ಮೂಲಗಳನ್ನು ನೀಡಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಮಾಡಲಾಗಿದೆ ಎಂದು ದೂರಿದರು.

ಮುಖಂಡರು ಪೊಲೀಸರ ವಶಕ್ಕೆ
ಉದ್ಯಮಿ ಅದಾನಿ ಮತ್ತು ಪ್ರಧಾನಮಂತ್ರಿಗಳ ಮಧ್ಯದ ಸ್ನೇಹ ಎಲ್ಲರಿಗೂ ಗೊತ್ತು. ಅದಾನಿ ತರಹದ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂ.ಲಾಭ ಮಾಡಿಕೊಡಲಾಗಿದೆ. ಬಳಿಕ ಉದ್ಯಮಿಯಿಂದ ಪಕ್ಷದ ಖಾತೆಗೆ ಕೋಟಿಗಟ್ಟಲೇ ಹಣ ದೇಣಿಗೆಯಾಗಿ ಬರುತ್ತದೆ. ಈ ಹಣ ಚುನಾವಣೆಯಲ್ಲಿ ಮತ ಸೆಳೆಯಲು, ಆಮಿಷ ಒಡ್ಡಲು ಬಳಕೆಯಾಗುತ್ತದೆ ಎಂದು ಎಎಪಿ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್‌ ಕುಮಾರ್‌ ಹೇಳಿದರು.

AAP Protest Against BJP and PM Narendra Modi in front of BJP Party Office at Bengaluru

ಪ್ರತಿಭಟನೆ ವೇಳೆ ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರು, ಮುಖಂಡರ ಗುಂಪು ಜಮಾಯಿಸಿತು. ನಾಮಫಲಕ ಹಿಡಿದು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಹಲವು ಎಎಪಿ ಮುಖಂಡರನ್ನು ವಶಕ್ಕೆ ಪಡೆದರು.
ಈ ವೇಳೆ ಮುಖಂಡರಾದ ಚನ್ನಪ್ಪಗೌಡ ನೆಲ್ಲೂರು, ಜಗದೀಶ್‌ ವಿ ಸದಂ, ಸುಮನ್‌ ಪ್ರಶಾಂತ್‌, ಉಷಾ ಮೋಹನ್‌, ಪುಟ್ಟಣ್ಣ, ಕಾರ್ಯಕರ್ತರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+