ಶ್ರೀರಾಮುಲು ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಲಿ: ಪೃಥ್ವಿ ರೆಡ್ಡಿ
ಬೆಂಗಳೂರು, ಜುಲೈ 16: ಕೊರೊನಾ ಮಹಾ ಭೀತಿಯಿಂದ ನರಳುತ್ತಿರುವ ನಮ್ಮ ರಾಜ್ಯವನ್ನು ಆ ಭಗವಂತನೇ ಕಾಪಾಡಬೇಕು ಎಂಬ ಕಳವಳಕಾರಿ ಹೇಳಿಕೆಯನ್ನು ನೀಡಿರುವ ಸಚಿವ ಶ್ರೀರಾಮುಲು ಅವರು ಒಂದು ಕ್ಷಣವೂ ಆರೋಗ್ಯ ಇಲಾಖೆಯ ಮಂತ್ರಿಯಾಗಿ ಮುಂದುವರಿಯುವ ನೈತಿಕ ಹೊಣೆಗಾರಿಕೆಯನ್ನು ಕಳೆದುಕೊಂಡಿದ್ದಾರೆ. ಆ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದ ಜನತೆಯ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.
Recommended Video
ಈಗಲೇ ರಾಜ್ಯದ ಜನತೆ ಭಯ ಭೀತಿಯಿಂದ ನರಳುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿ ಧೈರ್ಯವನ್ನು ನೀಡುವ ಬದಲಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆಯಿಂದ ರಾಜ್ಯದ ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇಂತಹ ಆರೋಗ್ಯ ಸಂದಿಗ್ಧತೆಯನ್ನು ನಿಭಾಯಿಸುವಲ್ಲಿ ಸ್ವತಃ ಆರೋಗ್ಯ ಸಚಿವರೇ ಸಂಪೂರ್ಣ ಸೋತು ಕೈಚೆಲ್ಲಿರುವ ಲಕ್ಷಣಗಳು ಗೋಚರಿಸುತ್ತಿವೆ.
Trust in god but tie your horse ಎಂಬ ಆಂಗ್ಲ ಭಾಷೆಯ ನಾಣ್ನುಡಿಯಂತೆ ಸಚಿವರು ಭಗವಂತನನ್ನು ನಂಬಿ ಕುದುರೆಯನ್ನು ಕಟ್ಟಿ ಹಾಕದೆ ಓಡಿ ಹೋಗಲು ಬಿಟ್ಟಿರುವ ಸಂಗತಿ ಗೋಚರಿಸುತ್ತಿದೆ. ಆಮ್ ಆದ್ಮಿ ಪಕ್ಷದ ದೆಹಲಿ ರಾಜ್ಯ ಸರ್ಕಾರವು ಕೈಗೊಂಡಿರುವ ಅನೇಕ ಕೋರೋನ ಕ್ರಮಗಳನ್ನು ಸರ್ಕಾರದ ಬಳಿ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆಂದು ತಿಳಿಸಿದ್ದರೂ ಸಹ ಮಂತ್ರಿಗಳಾದ ಡಾ. ಸುಧಾಕರ್ ಹಾಗೂ ಶ್ರೀರಾಮುಲು ಈ ಬಗ್ಗೆ ಸಿದ್ಧರಿಲ್ಲದಿರುವುದು ಕಳವಳಕಾರಿಯಾಗಿದೆ.

ಆರೋಗ್ಯ ಸಚಿವರಾದ ಶ್ರೀರಾಮುಲು ಈ ಕೂಡಲೇ ನೈತಿಕ ಹೊಣೆಗಾರಿಕೆಯನ್ನು ಒತ್ತಿ ರಾಜೀನಾಮೆಯನ್ನು ನೀಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಈ ಮೂಲಕ ಆಗ್ರಹಿಸಿದ್ದಾರೆ.












Click it and Unblock the Notifications