Get Updates
Get notified of breaking news, exclusive insights, and must-see stories!

AAP Election Manifesto: ಬೆಂಗಳೂರು ಶಿವಾಜಿನಗರಕ್ಕೆ ವಿಶ್ವದರ್ಜೆ ಸೌಲಭ್ಯ, ಪ್ರಣಾಳಿಕೆಯಲ್ಲಿ ಹೇಳಿದ್ದೇನು?

ಬೆಂಗಳೂರು, ಮೇ 02: ರಾಜ್ಯ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಆಮ್ ಆದ್ಮಿ ಪಕ್ಷ (AAP) ಕ್ಷೇತ್ರವಾರು ಪ್ರಣಾಳಿಕೆ ಬಿಡುಗಡೆ ಮಾಡುತ್ತಿದೆ. ಈ ಪೈಕಿ ಬೆಂಗಳೂರಿನ ಶಿವಾಜಿನಗರಕ್ಕೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಪಕ್ಷ ನೀರ್ಧರಿಸಿದೆ ಎಂದು ಶಿವಾಜಿನಗರ ಅಭ್ಯರ್ಥಿ ಪ್ರಕಾಶ್ ನೆಡುಂಗಡಿ ತಿಳಿಸಿದರು.

ಮಂಗಳವಾರ ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಶಿವಾಜಿನಗರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿದರು.

AAP Manifesto 2023: AAP Candidate Prakash Nedungadi Released Manifesto for Shivajinagar

ಆಮ್ ಆದ್ಮಿ ಪಾರ್ಟಿಯ ಪೊರಕೆಯೊಂದಿಗೆ ನಾನು ಶಿವಾಜಿನಗರವನ್ನು ವಿಶ್ವದರ್ಜೆಯ ಸೌಲಭ್ಯಗಳುಳ್ಳ, ನಾಗರಿಕಸ್ನೇಹಿಯಾದ ನಗರ ಕೇಂದ್ರವನ್ನಾಗಿ ಮಾಡಲಾಗುವುದು.

ಈ ವೇಳೆ ಮಾತನಾಡಿದ ಪ್ರಕಾಶ್ ಅವರು, ಶಿವಾಜಿನಗರವು ಭೌಗೋಳಿಕ ಮತ್ತು ಐತಿಹಾಸಿಕವಾಗಿ ಬೆಂಗಳೂರಿನ ಕೇಂದ್ರವಾಗಿದೆ. ವಿಧಾನ ಸೌಧ, ಹೈಕೋರ್ಟ್, ಸಚಿವಾಲಯಗಳು ಮತ್ತು ಇತರ ಸರ್ಕಾರಿ ಕಟ್ಟಡಗಳು ಶಿವಾಜಿನಗರದಲ್ಲಿವೆ. ಇದು ಬೆಂಗಳೂರಿನ ವ್ಯಾಪರ ವಲಯದ ಕೇಂದ್ರ ಬಿಂದುವು ಹೌದು. ಹಳೆಯ ಧಾರ್ಮಿಕ ಸ್ಥಳಗಳು, ಅಂಗಡಿಮುಂಗಟ್ಟುಗಳು, ಉದ್ಯಾನವನಗಳು ಮತ್ತು ಪ್ರವಾಸಿ ತಾಣಗಳನ್ನು ಹೊಂದಿದೆ.

ಪ್ರಣಾಳಿಕೆಯಲ್ಲಿನ 23 ಅಂಶಗಳ ಜಾರಿಯ ಗುರಿ

ಹಲವು ವಿಶೇಷತೆಗಳನ್ನು ಹೊಂದಿರುವ ಶಿವಾಜಿನಗರದ ಶೇಕಡಾ 90ಕ್ಕಿಂತ ಹೆಚ್ಚು ನಿವಾಸಿಗಳು ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದಂತೆ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ರಾಜ್ಯ ರಾಜಧಾನಿಯ ಕೇಂದ್ರ ಸ್ಥಳವೆಂದು ಹೇಳಲು ನಾಚಿಕೆ ಪಡುವ ಸಂಗತಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ನಾನು ಜಯಗಳಿಸಿದರೆ, ಪ್ರಾಮಾಣಿಕ ಮತ್ತು ಉತ್ತಮ ಆಡಳಿತದ ಮೂಲಕ ಬದಲಾವಣೆ ತರುತ್ತೇನೆ. ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತದಿಂದ ಆರಂಭಿಸಿ ಸಾಮಾನ್ಯ ಜನರ ನೋವು-ನಲಿವುಗಳನ್ನು ತಿಳಿಸುವ 23 ಅಂಶಗಳ ಯೋಜನೆಗಳನ್ನು ಜಾರಿಗೆ ತರುವ ಗುರಿ ನನ್ನದಾಗಿದೆ. ಈ ಪ್ರಣಾಳಿಕೆಯನ್ನು ಕ್ಷೇತ್ರದ ಜನರ ಅಭಿಪ್ರಾಯಗಳನ್ನು ಕೇಳಿ, ಕೆಲವು ಉತ್ತಮ ನಗರ ಯೋಜನೆ ತಜ್ಞರ ಜ್ಞಾನ ಮತ್ತು ಅನುಭವವನ್ನು ಬಳಸಿಕೊಂಡು ಸಿದ್ಧಪಡಿಸಲಾಗಿದೆ ಎಂದರು.

AAP Manifesto 2023: AAP Candidate Prakash Nedungadi Released Manifesto for Shivajinagar

ಎಎಪಿಯ ಬೆಂಗಳೂರು ಅಲ್ಪಸಂಖ್ಯಾತರ ಅಧ್ಯಕ್ಷ ಫರೀದುದ್ದೀನ್ ಷರೀಫ್ ಮಾತನಾಡಿ, ಶಿವಾಜಿನಗರದ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸಲು ಬಳಕೆಯಾಗಬೇಕಿದ್ದ ಹಣವು ವ್ಯವಸ್ಥಿತವಾಗಿ ಲೂಟಿಯಾಗಿದೆ. ಇಲ್ಲಿನ ವಿಐಪಿ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಶಿವಾಜಿನಗರಕ್ಕೆ ಭಾರೀ ಹಣ ಮಂಜೂರು ಮಾಡಲಾಗಿದೆ. ಆದರೆ ರಾಜಕಾರಣಿಗಳ ಕಮಿಷನ್‌ ದಾಹದಿಂದಾಗಿ ಮೇಕಪ್‌ನಂತೆ ಮೇಲ್ನೋಟಕ್ಕೆ ಮಾತ್ರ ಕಾಮಗಾರಿಗಳು ನಡೆದಿವೆ. ಹೀಗಾಗಿ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪ್ರಕಾಶ್ ನೆಡುಂಗಡಿಯವರು ಶಾಸಕರಾದಾಗ ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶಿನವಾಜಿನಗರದಲ್ಲಿ ಪರಿವರ್ತನೆ: 209 ಕ್ಷೇತ್ರವಾರು ಪ್ರಣಾಳಿಕೆ

ಶಿವಾಜಿನಗರದಲ್ಲಿ ಪರಿವರ್ತನೆ ತರಲು ಪ್ರಕಾಶ್ ನೆಡುಂಗಡಿಯವರ ಪ್ರಣಾಳಿಕೆಯು ಜಾರಿಗೆ ಬರಬೇಕಿದೆ. ಇದು ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲರ ರಾಜಕೀಯ ವಿಧಾನವನ್ನು ಪ್ರತಿಬಿಂಬಿಸುತ್ತಿದೆ. ವೋಟ್‌ ಬ್ಯಾಂಕ್, ಕೋಮುವಾದ ಹಾಗೂ ಹಣಬಲದ ರಾಜಕೀಯವನ್ನು ಬೆಂಬಲಿಸುವ ಬದಲು, ಈ ಪ್ರಣಾಳಿಕೆಯು ಎಲ್ಲ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಕಾರಿಯಾಗಲಿದೆ ಎಂದು ಎಎಪಿಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ತಜ್ಞರಾದ ಅಶ್ವಿನ್‌ ಮಹೇಶ್‌ ಹೇಳಿದರು.

ಕರ್ನಾಟಕದಲ್ಲಿ 209 ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷ ಪಕ್ಷದ ಅಭ್ಯರ್ತಿಗಳು ಸ್ಪರ್ಧಿಸುತ್ತಿದ್ದಾರೆ. ಈ ಸಂಬಂಧ ಪಕ್ಷ ಕ್ಷೇತ್ರವಾರು ಪ್ರತ್ಯೇಕ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದೆ. ಈ ರೀತಿ ಪ್ರಣಾಳಿಕೆ ಬಿಡುಗಡೆಯಿಂದ ಕ್ಷೇತ್ರದ ಜನರಿಗೆ ಪರ್ಯಾಯ ಆಯ್ಕೆ ನೀಡಿದ್ದೇವೆ ಎಂದು ಎಎಪಿ ಹೇಳಿಕೊಂಡಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಆಪ್ ಮುಖಂಡರು ಮತ್ತು ನೂರಾರು ಕಾರ್ಯಕರ್ತರುಗಳು ಕಳೆದ ಒಂದು ವರ್ಷದಿಂದ ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ನಮ್ಮ ಪಕ್ಷದ ಈ ಕಾರ್ಯ ರಾಜಕೀಯ ಮೈಲುಗಲ್ಲಾಗಲಿದೆ ಎಂದು ಎಎಪಿ ರಾಜ್ಯಾದ್ಯಕ್ಷ ಪೃಥ್ವಿ ರೆಡ್ಡಿ ಪ್ರತಿಕ್ರಿಯಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+