ಬೆಂಗ್ಳೂರಲ್ಲಿ ಕೇಜ್ರಿವಾಲ್ ರೋಡ್ ಶೋ, ಮೆರವಣಿಗೆ

ಬೆಂಗಳೂರು, ಮಾ. 12: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಉದ್ಯಾನ ನಗರಿಯಲ್ಲಿ ರೋಡ್ ಶೋ, ಚುನಾವಣಾ ಪ್ರಚಾರ ಮೆರವಣಿಗೆ ನಡೆಸಲಿದ್ದಾರೆ.

ಅರವಿಂದ್ ಅವರು ಮಾ. 15 ಹಾಗೂ 16ರಂದು ರಾಜ್ಯಕ್ಕೆ ಭೇಟಿ ನೀಡಿ, ರೋಡ್ ಶೋ ನಡೆಸಲಿದ್ದಾರೆ. ಮಾ.11 ರಂದು ಹಾಗೂ ಮಾ. 16ರಂದು ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪಕ್ಷದ ಪರ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಪೃಥ್ವಿ ರೆಡ್ಡಿ ಅವರು ತಿಳಿಸಿದರು.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಕೆಲವು ಕಡೆ ರೋಡ್ ಶೋಗಳಲ್ಲಿಯೂ ಅವರು ಪಾಲ್ಗೊಂಡು ಮಾತನಾಡಲಿದ್ದಾರೆ. ತಮ್ಮ ಪಕ್ಷದ ವಿಚಾರಗಳನ್ನು ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದರು.ಆಮ್ ಆದ್ಮಿ ಪಕ್ಷ, ರಾಜ್ಯದ 13 ಲೋಕಸಭಾ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಈಗಾಗಲೇ ವಿವಿಧ ಜಿಲ್ಲೆಗಳಿಂದ 300 ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ಆಯ್ದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಒಂದು ವಾರದೊಳಗೆ ಪ್ರಕಟಿಸುವುದಾಗಿ ಪೃಥ್ವಿ ರೆಡ್ಡಿ ತಿಳಿಸಿದರು. [ಎಎಪಿ : ಬಾಲಕೃಷ್ಣನ್, ರವಿಕೃಷ್ಣಾ ರೆಡ್ಡಿ ಕಣಕ್ಕೆ]

AAP Kejriwal road show, rally in Bangalore

ಭೋಜನಕೂಟಕ್ಕೆ ಸಮರ್ಥನೆ: ಬೆಂಗಳೂರು ಭೇಟಿ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಜತೆ ನಡೆಯ ಲಿರುವ ಭೋಜನ ಕೂಟದಲ್ಲಿ ಪಾಲ್ಗೊಳ್ಳುವವರಿಗೆ 20 ಸಾವಿರ ರೂ. ಹಣ ನಿಗದಿ ಮಾಡಿರುವ ಕುರಿತಂತೆ ವ್ಯಕ್ತವಾಗಿರುವ ಟೀಕೆಗಳನ್ನು ಇನ್ಫೋಸಿಸ್ ಸಂಸ್ಥೆ ಮಾಜಿ ಸದಸ್ಯ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಬಾಲಕೃಷ್ಣನ್ ಬಲವಾಗಿ ಸಮರ್ಥಿಸಿ ಕೊಂಡಿದ್ದಾರೆ.

ಬೇರೆ ಪಕ್ಷಗಳಿಗೆ ಶೇ. 75ರಷ್ಟು ಹಣ ಗೊತ್ತಿಲ್ಲದ ಮೂಲಗಳಿಂದ ಬರುತ್ತದೆ. ಆದರೆ ನಮ್ಮ ಪಕ್ಷದಲ್ಲಿ ಅಂಥ ವಾತಾವರಣ ಇಲ್ಲ. ಚುನಾವಣೆ ಎದುರಿಸಲು ನಾವು ಪಾರದರ್ಶಕ ಮಾರ್ಗದಲ್ಲಿ ಹಣ ಸಂಗ್ರಹಿಸು ತ್ತಿರುವುದಾಗಿ ಅವರು ಹೇಳಿದರು. ಭೋಜನಕೂಟದಲ್ಲಿ ಪಾಲ್ಗೊಳ್ಳು ವವರು ಕನಿಷ್ಠ 20 ಸಾವಿರ ರೂ. ಹಣವನ್ನು ಪಕ್ಷಕ್ಕೆ ದೇಣಿಗೆ ರೂಪದಲ್ಲಿ ನೀಡುವಂತೆ ಕೋರಲಾಗಿದೆ. ಇದಕ್ಕೂ ಹೆಚ್ಚಿನ ಮೊತ್ತ ನೀಡಬಹುದು ಎಂದು ಪೃಥ್ವಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+