ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಸ್ ನೀಡುವ ಸಂಸದರೇ, ಮೊದಲು ಕೇಂದ್ರದಿಂದ ಆಕ್ಸಿಜನ್ ತರಿಸಿ

|
Google Oneindia Kannada News

ಬೆಂಗಳೂರು, ಮೇ 5: ತಿಮಿಂಗಿಲಗಳನ್ನು ಹಿಡಿಯದೆ ಬರೀ ಮೀಡಿಯಾ ಪೋಸ್ ನೀಡುತ್ತಿರುವ ಸಂಸದರು ನಿಜಕ್ಕೂ ತಾಕತ್ ಇದ್ದಲ್ಲಿ ಕೇಂದ್ರ ಸರ್ಕಾರದಿಂದ ಆಕ್ಸಿಜನ್ ತರಿಸಿ ಎಂದು ಬೆಂಗಳೂರು ನಗರ ಉಪಾಧ್ಯಕ್ಷ ನಾಗಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕೊರೊನಾ ಎರಡನೇ ಅಲೆಯ ಮಹಾದುರಂತ ರಾಷ್ಟ್ರವನ್ನು ಅಪ್ಪಳಿಸುತ್ತಿರುವ ಈ ಸಮಯದಲ್ಲಿ ಜನಸಾಮಾನ್ಯರಿಗೆ ಬೆಡ್‌ಗಳು ಐಸಿಯು ವೆಂಟಿಲೇಟರ್‌ಗಳು ಆಕ್ಸಿಜನ್‌ಗಳು ರಾಷ್ಟ್ರವನ್ನು ಅಪ್ಪಳಿಸುತ್ತಿರುವ ಈ ಸಮಯದಲ್ಲಿ ರಾಜ್ಯದಲ್ಲಿ ಜನಸಾಮಾನ್ಯರಿಗೆ ಬೆಡ್‌ಗಳು, ಆಂಬ್ಯುಲೆನ್ಸ್ , ಐಸಿಯು, ವೆಂಟಿಲೇಟರ್, ಆಕ್ಸಿಜನ್‌ಗಳು ಸಮಯಕ್ಕೆ ಸಿಗದೆ ಪ್ರತಿ ದಿವಸ ನೂರಾರು ಸರ್ಕಾರಿ ಪ್ರಾಯೋಜಿತ ಕಗ್ಗೊಲೆಗಳಾಗುತ್ತಿರುವುದು ಕಟುವಾಸ್ತವ.

ಕೊರೊನಾ ಮಹಾ ಮಾರಿಯ ಮೊದಲನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಹಲವಾರು ವೈಫಲ್ಯಗಳ ನಂತರ ಎರಡನೇ ಅಲೆಯಲ್ಲಿಯೂ ಸಹ ಪೂರ್ವಯೋಜಿತವಾಗಿ ಏನನ್ನು ಸಿದ್ಧಪಡಿಸಿಕೊಳ್ಳದೆ ಸಂಪೂರ್ಣ ವೈಫಲ್ಯತೆಯಿಂದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪರಿಣಾಮವಾಗಿ ರಾಜ್ಯದಲ್ಲಿ ಇಂದು ಸಾವಿರಾರು ಮಂದಿ ಈಗಾಗಲೇ ಸಾವನ್ನಪ್ಪುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷರಾದ ಬಿ. ಟಿ ನಾಗಣ್ಣ ಇಂದಿಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

AAP demand BJP MPs to get required Oxygen to Karnataka

ರಾಜ್ಯ ಬಿಜೆಪಿ ಸರ್ಕಾರದ ಇಷ್ಟೆಲ್ಲಾ ವೈಫಲ್ಯಗಳಿದ್ದರೂ ಸಹ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಇತ್ತ ಕಡೆ ಗಮನಹರಿಸಿ ಸಮರೋಪಾದಿಯಲ್ಲಿ ವೈಫಲ್ಯಗಳನ್ನು ಸರಿಪಡಿಸುವುದನ್ನು ಬಿಟ್ಟು ಬೆಡ್ ಬ್ಲಾಕಿಂಗ್ ಎಂಬ ದಂಧೆಯನ್ನು ಬಯಲಿಗೆಳೆದಿದ್ದೇನೆ ಎಂಬಂತೆ ಮಾಧ್ಯಮಗಳ ಮುಂದೆ ಫೋಸ್ ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ.

ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಒದಗಿಸಿ: ಹೈಕೋರ್ಟ್ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಒದಗಿಸಿ: ಹೈಕೋರ್ಟ್

ತಮ್ಮ ಬಿ ಜೆ ಪಿ ಸರ್ಕಾರದ ಮಂತ್ರಿ ಮಹೋದಯರುಗಳೇ ಈ ದಂಧೆಯಲ್ಲಿ ಅವ್ಯಾಹತವಾಗಿ ನಿರತರಾಗಿ ಇದ್ದರೂ ಸಹ ಯಾವುದೋ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ಬೃಹತ್ ತಿಮಿಂಗಿಲಗಳನ್ನು ಹಿಡಿಯಲಾರದ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಇಂದು ರೆಮ್‌ಡಿಸಿವಿರ್ ಔಷಧ, ಆಕ್ಸಿಜನ್ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಅವ್ಯಾಹತವಾಗಿ ಮಾರಾಟವಾಗುತ್ತಿವೆ.

ಇವೆಲ್ಲವುಗಳನ್ನು ಮೂಲೋಚ್ಛಾಟನೆ ಮಾಡುವುದು ಬಿಟ್ಟು ಏಕಾಏಕಿ ಬಿ ಬಿ ಎಂ ಪಿ ಕಾಲ್ ಸೆಂಟರ್‌ಗೆ ನುಗ್ಗಿ ಪೌರುಷವನ್ನು ಪ್ರದರ್ಶಿಸುವುದು ಹೇಡಿತನದ ಲಕ್ಷಣ ಎಂದು ನಾಗಣ್ಣ ತಮ್ಮ ಆಕ್ರೋಶವನ್ನು ಹೊರಹಾಕಿದರು.

Recommended Video

ಮುಂಬೈನಲ್ಲಿ ಕೊರೊನಾವೈರಸ್ ಕಡಿವಾಣಕ್ಕೆ ಬಂದಿದ್ದು ಹೇಗೆ? | Oneindia Kannada

ಮಾನ್ಯ ಸಂಸದರಿಗೆ ನಿಜಕ್ಕೂ ಬೆಂಗಳೂರಿಗರ ಪ್ರಾಣದ ಮೇಲೆ ಕಿಂಚಿತ್ತಾದರೂ ಕಾಳಜಿ - ಕಳವಳ ಹಾಗೂ ತಾಕತ್ತು ಇದ್ದರೆ ಈ ಕೂಡಲೇ 28 ಮಂದಿ ರಾಜ್ಯದ ಸಂಸತ್ ಸದಸ್ಯರು ಗಳನ್ನು ಸೇರಿಸಿಕೊಂಡು ಪ್ರಧಾನ ಮಂತ್ರಿಗಳ ಮೇಲೆ ತೀವ್ರ ಒತ್ತಡವನ್ನು ಹೇರುವ ಮೂಲಕ ಈ ತಕ್ಷಣದಿಂದಲೇ ರಾಜ್ಯಕ್ಕೆ ಬೇಕಾಗುವಷ್ಟು ವೈದ್ಯಕೀಯ ಆಮ್ಲಜನಕಗಳನ್ನು ತಂದು ರಾಜ್ಯದ ಜನತೆಯ ಪ್ರಾಣವನ್ನು ಉಳಿಸಬೇಕೆಂದು ಬೆಂಗಳೂರು ನಗರ ಉಪಾಧ್ಯಕ್ಷ ನಾಗಣ್ಣ ಆಗ್ರಹಿಸಿದರು.

English summary
AAP demand BJP MPs to get required quota of Oxygen to Karnataka from union government instead of posing to media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X