ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ

ಬೆಂಗಳೂರು: ಕಾಂಗ್ರೆಸ್ ರಾಜ್ಯದ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ರೈತರ ಪಂಪ್‌ಸೆಟ್‌ಗಳಿಗೆ ಈ ಮೊದಲು 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು, ಈಗ 2 ಗಂಟೆಗಳ ಕಾಲ ಕೂಡ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ .ನಾಗಣ್ಣ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ಐದು ವಿದ್ಯುತ್ ಶಕ್ತಿ ಪೂರೈಕೆ ಕಂಪನಿಗಳು ಈಗಾಗಲೇ 63000 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿವೆ ಈ ಸಮಯದಲ್ಲಿ ಮುಖ್ಯಮಂತ್ರಿಗಳು 85,000 ಕೋಟಿ ಸಾಲವನ್ನು ಪಡೆಯಲು ಈಗಾಗಲೇ ಆರ್ಥಿಕ ಇಲಾಖೆಗೆ ಸೂಚಿಸಿರುವುದನ್ನು ಗಮನಿಸಿದಾಗ ರಾಜ್ಯವು ಸಂಪೂರ್ಣ ದಿವಾಳಿಯತ್ತ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

aap-criticizes-karnataka-government

ದೆಹಲಿಯಲ್ಲಿ ನಾವು ಭರವಸೆ ನೀಡಿದಂತೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. ದೆಹಲಿಯಲ್ಲಿ ವಿದ್ಯುತ್ ಪೂರೈಕೆದಾರರು ಒಂದು ಗಂಟೆ ವಿದ್ಯುತ್ ಕಡಿತ ಮಾಡಿದರೆ ಒಂದು ಗಂಟೆಗೆ 50 ರೂಪಾಯಿ ದಂಡ ಕಟ್ಟಿಕೊಡಬೇಕಾಗುತ್ತದೆ, 2 ಗಂಟೆಗಿಂತ ಹೆಚ್ಚು ಸಮಯ ವಿದ್ಯುತ್ ಕಡಿತ ಮಾಡಿದರೆ ಗಂಟೆಗೆ 100 ರೂಪಾಯಿಯಂತೆ ದಂಡ ಕಟ್ಟಿಕೊಡಬೇಕು, ಅಂತಹ ಕಾನೂನು ರೂಪಿಸಲಾಗಿದೆ. ಅಂತಹ ಕಾನೂನು ಇಲ್ಲಿ ತರಲಿ ಎಂದು ಒತ್ತಾಯಿಸಿದರು.

ಕುಸುಮ್ ಯೋಜನೆ ಅಸಮರ್ಪಕ ಬಳಕೆ

ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಭಗವಂತ ಖೂಬಾ ಅವರ ನಿರ್ಲಕ್ಷ್ಯದಿಂದ ಕೆಯುಎಸ್‌ಯುಎಂ ನಂತಹ ಯೋಜನೆಗಳು ಗಮನಾರ್ಹ ಪ್ರಗತಿ ಸಾಧಿಸಿಲ್ಲ. ಇದರಿಂದ ಸಬ್ಸಿಡಿ ದರದ ಸೋಲಾರ್‌ ಪಂಪ್‌ಗಳ ಅಳವಡಿಕೆ ಕುಸಿತವಾಗಿದೆ. 10,314 ಪಂಪ್‌ಗಳನ್ನು ಅಳವಡಿಸುವ ಗುರಿ ಹೊಂದಲಾಗಿತ್ತು, ಆದರೆ ಕೇವಲ 314 ಪಂಪ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ ಪವನ ವಿದ್ಯುತ್‌ನಿಂದ ಉತ್ಪಾದಿಸಲಾಗುವ ಹೆಚ್ಚುವರಿ 29,544 ಮೆಗಾವ್ಯಾಟ್‌ ವಿದ್ಯುತ್‌ ಅಸಮರ್ಪಕವಾಗಿ ಬಳಕೆಯಾಗುತ್ತಿದೆ ಎಂದರು.

ರಾಜ್ಯದಲ್ಲಿ ಸಂಪನ್ಮೂಲಗಳ ಕೊರೆತೆಯಿಲ್ಲ, ಆದರೆ ಸರ್ಕಾರಗಳ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯಗಳ ಕಾರಣದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ, ಕಳಪೆ ವಿದ್ಯುತ್‌ ಉತ್ಪಾದನೆ, ನಿರ್ವಹಣಾ ಸಾಮರ್ಥ್ಯದಲ್ಲಿ ಹಿನ್ನಡೆ ಅನುಭವಿಸಿದೆ. ರಾಜ್ಯದಲ್ಲಿ ಎದುರಾಗಿರುವ ವಿದ್ಯುತ್‌ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಎಪಿ ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+