ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವ ಸರ್ಕಾರದ ವಿರುದ್ಧ ಎಎಪಿ ಕಿಡಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಬೆಂಗಳೂರಿನ ಟೌನ್ ಹಾಲ್ ಬಳಿ ಹಲವಾರು ಸಂಘಟನೆಗಳು ಮತ್ತು ಇತರ ಸಾಮಾಜಿಕ ಚಿಂತಕರು CAA ಮತ್ತು NRC ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಎಪಿ ಕಾರ್ಯಕರ್ತರನ್ನು ಬೆಂಗಳೂರು ಪೋಲೀಸರು ಬಂಧಿಸಿರುವುದನ್ನು ಆಮ್ ಆದ್ಮಿ ಪಕ್ಷ ಕರ್ನಾಟಕದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಖಂಡಿಸಿದ್ದಾರೆ.

ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?

ಶಾಂತಿಯುತ ಪ್ರತಿಭಟನೆಯ ಹಕ್ಕು ಸಾಂವಿಧಾನಿಕವಾಗಿದ್ದು, ರಾಜ್ಯ ಸರ್ಕಾರ ಜನರ ಈ ಹಕ್ಕನ್ನು ಹತ್ತಿಕ್ಕುತ್ತಿರುವುದು ಖಂಡನಾರ್ಹ ಹಾಗೂ ಕಾನೂನು ಅಸಮ್ಮತ. ಬೆಂಗಳೂರು ಪೋಲೀಸರು ತಕ್ಷಣವೇ ಎಎಪಿ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ, ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಬೇಕಾಗಿ ಕರ್ನಾಟಕ ಎಎಪಿ ಪಕ್ಷವು ಆಗ್ರಹಿಸುತ್ತದೆ ಎಂದಿದ್ದಾರೆ.

AAP Condemns Constitutionally guaranteed Right to Protest is being violated

ಎಎಪಿಯ ರಾಷ್ಟ್ರೀಯ ಸಂಚಾಲಕರು ಮತ್ತು ದೆಹಲಿಯ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ವಿವರಿಸಿದಂತೆ CAA ಮತ್ತು NRC ಸಂಬಂಧಿಸಿದ ಪಕ್ಷದ ನಿಲುವು ಹೀಗಿದೆ:

1. ಈ ಕಾನೂನು ಜನವಿರೋಧಿ ಮಾತ್ರವಲ್ಲ, ದೇಶದ ಮೂಲ ಸಿದ್ಧಾಂತಕ್ಕೇ ಧಕ್ಕೆಯುಂಟು ಮಾಡುತ್ತಿದೆ.

2. ಈ ಕಾನೂನಿನ ಪ್ರಕಾರ ಹೊರದೇಶದಿಂದ ಬಂದ ಭಾರತೀಯರಿಗೆ ಪೌರತ್ವದ ಆಶ್ವಾಸನೆ ನೀಡುತ್ತದೆ. ಆದರೆ ದೇಶದಲ್ಲಿ ವಾಸಿಸುತ್ತಿರುವ ನಾಗರೀಕರಿಗೆ ಮೂಲಸೌಕರ್ಯದ ಭದ್ರತೆಯನ್ನು ಒದಗಿಸುವುದಿಲ್ಲ.

BREAKING: ಮಂಗಳೂರಿನಲ್ಲಿ ಸಿಡಿದ ಪೊಲೀಸ್ ಗುಂಡು; ಮೂವರ ಸ್ಥಿತಿ ಗಂಭೀರBREAKING: ಮಂಗಳೂರಿನಲ್ಲಿ ಸಿಡಿದ ಪೊಲೀಸ್ ಗುಂಡು; ಮೂವರ ಸ್ಥಿತಿ ಗಂಭೀರ

3.ಇದು ಭಾರತವನ್ನು ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ, ಏರುತ್ತಿರುವ ಬೆಲೆ, ಕುಸಿಯುತ್ತಿರುವ ಆರ್ಥಿಕತೆ ಹಾಗೂ ಕೇಂದ್ರ ಸರ್ಕಾರದ ಸೋಲುಗಳ ಬಗ್ಗೆ ಜನರ ದಿಕ್ಕು ತಪ್ಪಿಸುವ ಹುನ್ನಾರ.

4. ಆಮ್ ಆದ್ಮಿ ಪಕ್ಷವು ದೇಶದ ಶಾಂತಿಗೆ ಯಾವುದೇ ಅಡೆತಡೆಯಾಗದಂತೆ, ಶಾಂತಿಯುತವಾಗಿ ಹೋರಾಡುವ ಜನತೆಯನ್ನು ಬೆಂಬಲಿಸುತ್ತದೆ. ಹೋರಾಟವನ್ನು ಉಗ್ರವಾಗಿ ಕೊಂಡೊಯ್ದರೆ, ಈ ಕಾನೂನನ್ನು ಜಾರಿಗೊಳಿಸಿ, ದೇಶ ವಿಭಜಿಸಿ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಹೊಂಚು ಹಾಕುತ್ತಿರುವವರಿಗೆ ಲಾಭವಾಗುತ್ತದೆಯೇ ಹೊರತು, ದೇಶದ ಅಭಿವೃದ್ಧಿಗೆ ಪೂರಕವಾಗಿರುವುದಿಲ್ಲ.

English summary
Volunteers of the Aam Aadmi Party, who joined the protests against CAA+NRC, held by various citizen groups and individuals at townhall in Bengaluru today have been detained by Bengaluru Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X