ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

''ಹೊಸ ಬೆಂಗಳೂರು'' ಚಿತ್ರದ ಮೂಲಕ ಮನೆ ಮನೆಗೂ ಎಎಪಿ ಅಭಿಯಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಕರ್ನಾಟಕದ ಆಮ್ ಆದ್ಮಿ ಪಕ್ಷ (ಎಎಪಿ) 2020 ರ ಬಿಬಿಎಂಪಿ ಚುನಾವಣೆಗೆ ಗಂಭೀರ ಸಿದ್ಧತೆಗಳನ್ನು ನಡೆಸುತ್ತಿದೆ ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಲು ಹೊಸಮಾರ್ಗಗಳ ಅನುಭವದೊಂದಿಗೆ ಎಎಪಿಯ ಬಿಬಿಎಂಪಿ ಚುನಾವಣೆಗೆ ಸಜ್ಜಾಗುತ್ತಿದೆ

ನಮ್ಮ ಪ್ರೀತಿಯ ಬೆಂಗಳೂರು ನಿರಂತರವಾಗಿ ಸಂಪೂರ್ಣ ನಿರ್ಲಕ್ಷ್ಯ ಮತ್ತು ಉತ್ತಮ ಆಡಳಿತದ ಕೊರತೆಯನ್ನು ಅನುಭವಿಸಿದೆ. ಬೆಂಗಳೂರು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಬೆಂಗಳೂರನ್ನು ಪರಿವರ್ತಿಸುವುದು ಮಾತ್ರವಲ್ಲ, ಅದನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿ ಪಡಿಸಲು ಸಮಯಕ್ಕೆ ಅನುಗುಣವಾದ ಕ್ರಿಯಾ ಯೋಜನೆ ಅಗತ್ಯವಿರುತ್ತದೆ

ಜನರ ಸಹಭಾಗಿತ್ವದೊಂದಿಗೆ ದೆಹಲಿ ಆಡಳಿತದ ಮಾದರಿಯಲ್ಲಿಯೇ ಕರ್ನಾಟಕದ ಆಡಳಿತದಲ್ಲಿಯೂ ಸಂಪೂರ್ಣ ಪಾರದರ್ಶಕತೆ ತರುವ ಹೊಣೆಗಾರಿಕೆಯನ್ನು ಹೊತ್ತಿದೆ. ನಮ್ಮ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು 2015 ರಿಂದ ಕೇವಲ 5 ವರ್ಷಗಳಲ್ಲಿ ಜನಪರವಾದ ಕಾರ್ಯಕ್ರಮಗಳ ಮೂಲಕ ಸಾಧಿಸಿದ ದೆಹಲಿಯ ಪ್ರಗತಿಯನ್ನು ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೆ ತಿಳಿಸಲು ಹೊಸ ಬೆಂಗಳೂರು ಚಲನಚಿತ್ರವನ್ನು ನಿರ್ಮಿಸಿದೆ.

ಮನೆ ಮನೆಗೂ ಆಮ್ ಆದ್ಮಿ ಅಭಿಯಾನ

ಮನೆ ಮನೆಗೂ ಆಮ್ ಆದ್ಮಿ ಅಭಿಯಾನ

ಮುಂದಿನ 250 ದಿನಗಳಲ್ಲಿ ಅಥವಾ ಚುನಾವಣೆಯ ತನಕ ಬಿಬಿಎಂಪಿಯ ಪ್ರತಿ 8000+ ಬೂತ್ ಗಳಲ್ಲಿ ಬೀದಿ, ಮೊಹಲ್ಲಾಗಳಲ್ಲಿ, ಸ್ಥಳೀಯ ಸಮುದಾಯ ಗುಂಪುಗಳಲ್ಲಿ ಮತ್ತು ಆರ್ಡಬ್ಲ್ಯೂಎಗಳಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು, ಜನಸಂಪರ್ಕ ಕಾರ್ಯಕ್ರಮದ ಭಾಗವಾಗಿ ಮನೆ ಮನೆಗೂ ಆಮ್ ಆದ್ಮಿ ಅಭಿಯಾನವನ್ನು ಪಕ್ಷವು ಸಿದ್ಧಪಡಿಸಿದೆ.

ಜನ ಸಂವಾದ ಕಾರ್ಯಕ್ರಮ

ಜನ ಸಂವಾದ ಕಾರ್ಯಕ್ರಮ

ಥಿಂಕ್ ಟ್ಯಾಂಕ್ ಗಳು, ಸಮುದಾಯ ಸಂಸ್ಥೆಗಳು, ಯುವಕರು, ಮಹಿಳೆಯರು ಮತ್ತು ವಸತಿ ಸಮುಚ್ಛಯ ಸಂಘಗಳು (ಆರ್ಡಬ್ಲ್ಯೂಎ) ನಾಗರಿಕ ಸಂಘಟನೆಗಳು, ವಾಣಿಜ್ಯ ಸಂಘಗಳು, ಶಿಕ್ಷಣ ಸಂಸ್ಥೆಗಳು ಮುಂತಾದ ಗುಂಪು ಸಮುದಾಯಗಳಲ್ಲಿ ನ ನಗರದ ಮತದಾರ ನಾಗರೀಕರಿಗೆ ದೆಹಲಿಯ ಎಎಪಿ ಸರ್ಕಾರದ ವಿವಿಧ ಸಾಧನೆಗಳ ಬಗ್ಗೆ ಚಲನಚಿತ್ರದ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಪ್ರತಿ ಬೂತ್ ನಲ್ಲಿಯೂ ಜನ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಪರಿವರ್ತನಾ ಕಾರ್ಯಕ್ರಮಗಳು

ಪರಿವರ್ತನಾ ಕಾರ್ಯಕ್ರಮಗಳು

ದೆಹಲಿಯಲ್ಲಿ ಎಎಪಿ ಸರ್ಕಾರವು ಕೈಗೊಂಡ ಕೆಲವು ಪರಿವರ್ತನಾ ಕಾರ್ಯಕ್ರಮಗಳಾದ ಸರ್ಕಾರಿ ಶಾಲೆಗಳನ್ನು ನವೀಕರಿಸುವುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ವಿಶ್ವ ದರ್ಜೆಗೆ ಏರಿಸುವುದು ಮತ್ತು ಜನಸಾಮಾನ್ಯರ ಕೈಗೆಟುಕುವಂತೆ ಮಾಡಲು, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ, ಕೈಗೆಟುಕುವ ಸಾರ್ವಜನಿಕ ಸಾರಿಗೆ, ನೀರು ಮತ್ತು ವಿದ್ಯುತ್,ಕನಿಷ್ಠ ನಿಗಧಿತ ವೇತನ ದೇಶ, ಭ್ರಷ್ಟಾಚಾರ ಮತ್ತು ವಿಳಂಬವಿಲ್ಲದೆ 100+ ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ ಸಾಮಾನ್ಯ ಜನರನ್ನು ಪ್ರತಿನಿಧಿಸುವ ಮತ್ತು ಸಾಮಾನ್ಯ ಜನರಿಗಾಗಿ ಶ್ರಮಿಸುತ್ತಿರುವ ಸರ್ಕಾರದ ಪರಿಣಾಮವನ್ನು ಮನರಂಜನೆಯ ಮೂಲಕ ಜನರನ್ನು ತಲುಪುವುದಲ್ಲದೇ, *ಜನರ ಶ್ರೇಯೋಭಿವೃದ್ಧಿಗಾಗಿ ಪಕ್ಷದ ಶ್ರಮವನ್ನು* ಅರ್ಥ ಮಾಡಿಸಲು *ಹೊಸಬೆಂಗಳೂರು* ಚಲನಚಿತ್ರವನ್ನು ಪ್ರಸ್ತುತ ಪಡಿಸಲಾಗಿದೆ.

ಭ್ರಷ್ಟಾಚಾರ ಮುಕ್ತ ಆಡಳಿತ

ಭ್ರಷ್ಟಾಚಾರ ಮುಕ್ತ ಆಡಳಿತ

ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿವರ್ಷ ಹೆಚ್ಚುವರಿ ಬಜೆಟ್ ನೊಂದಿಗೆ ಎಎಪಿ ಪಕ್ಷವು 5 ವರ್ಷಗಳಲ್ಲಿ ಕಳಂಕವಿಲ್ಲದ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿದೆ. ಈ ಬೃಹತ್ ಯೋಜನೆಯೊಂದಿಗೆ ಜನರ ಆಶೋತ್ತರ ಮತ್ತು ಕನಸುಗಳ ಆಧಾರದ ಮೇಲೆ ಪಕ್ಷವು ಹೊಸ ಬೆಂಗಳೂರಿನ ಧ್ಯೇಯವನ್ನು ಅಭಿವೃದ್ಧಿಪಡಿಸುತ್ತದೆ, 2025 ರ ವೇಳೆಗೆ ಬೆಂಗಳೂರನ್ನು ನಿಜವಾದ ವಿಶ್ವ ದರ್ಜೆಯ ನಗರವನ್ನಾಗಿ ಮಾಡುವ ಹಾದಿಯಲ್ಲಿ ಎಲ್ಲಾ ಜನಸಾಮಾನ್ಯರ ಜೀವನ ಮಟ್ಟ ಉತ್ತಮ, ಸಂತೋಷ ಮತ್ತು ಸಮೃದ್ಧಿಯೊಂದಿಗೆ ಕೂಡಿರಬೇಕೆಂಬುದು ಪಕ್ಷದ ಆಶಯ.

English summary
For long, our beloved Bengaluru has experienced utter neglect and lack of governance. Bengaluru is day-by-day collapsing. Bengaluru needs a complete overhaul with not just a transformative vision, but a time-bound action plan to develop it into a World-class City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X