ಬೆಂಗಳೂರಲ್ಲಿ ಭಾನುವಾರ "ಮಜಾ ರೀಲ್ಸ್" ಮಾಡಲು ಹೋಗಿ ದುರಂತ ಅಂತ್ಯ
ಬೆಂಗಳೂರಿನಲ್ಲಿ ರೀಲ್ಸ್ ಮಾಡಲು ಹೋಗಿ ಮತ್ತೊಂದು ದುರಂತ ಸಂಭವಿಸಿದೆ. ಕಳೆದ ಕೆಲವು ವರ್ಷಗಳ ಹಿಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜನ ಸಾವನ್ನಪ್ಪುತ್ತಿದ್ದದ್ದು ವರದಿಯಾಗುತ್ತಿತ್ತು. ಇದೀಗ ಜನ ರೀಲ್ಸ್ ಮಾಡಲು ಹೋಗಿ ಸಾವನ್ನಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಬೆಂಳಗೂರಿನಲ್ಲೂ ಯುವಕನೊಬ್ಬ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯ ಕಂಡಿರುವುದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವಾಗ ಅಪಘಾತ ಸಂಭಿವಿಸಿರುವುದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವಂತಹ ಘಟನೆಗಳು ವರದಿಯಾಗುತ್ತಲ್ಲೇ ಇವೆ.
ಇಲ್ಲಿನ ಪಣತ್ತೂರು ಕೆರೆಯಲ್ಲಿ ರೀಲ್ಸ್ ಮಾಡಲು ಹೋದ ಯುವಕ ಹುಚ್ಚಾಟ ಮಾಡಿ ಸಾವನ್ನಪ್ಪಿದ್ದಾನೆ. 22 ವರ್ಷದ ಅನಿಲ್ ಎನ್ನುವ ಯುವಕ ಕುಡಿದ ನಶೆಯಲ್ಲಿ ಕೆರೆಗೆ ಇಳಿದು ರೀಲ್ಸ್ ಮಾಡಲು ಮುಂದಾಗಿದ್ದು, ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಘಟನೆ ನಡೆದಿದ್ದು ಹೇಗೆ ?
ಭಾನುವಾರ ಸಂಜೆ ಮೂರು ಜನ ಗೆಳೆಯರು ಸೇರಿ ಪಣತ್ತೂರು ಕೆರೆಗೆ ಹೋಗಿದ್ದಾರೆ. ಮೂರು ಜನ ಕೆರೆಗೆ ಹೋಗುವ ಮುನ್ನವೇ ಪಾರ್ಟಿ ಮಾಡಿ ಹೋಗಿದ್ದರು ಎನ್ನಲಾಗಿದೆ. ಮೂರು ಜನ ಕುಡಿದು ಚೆನ್ನಾಗಿ ಕುಡಿದು ಹೋಗಿದ್ದರು. ಅಲ್ಲದೇ ಕುಡಿದ ನಶೆಯಲ್ಲೇ ಇಬ್ಬರು ರೀಲ್ಸ್ ಮಾಡಲು ಮುಂದಾಗಿದ್ದರೆ. ಕೆರೆಗೆ ಹೋದ ಮೂರು ಜನ ನೇಪಾಳದವರು ಎಂದು ಹೇಳಲಾಗಿದೆ. ನೇಪಾಳ ಮೂಲದ ಉಪೇಂದ್ರ, ದಿನೇಶ್ ಹಾಗೂ ಅನಿಲ್ ಎನ್ನುವವರು ಮೂರು ಜನ ಗೆಳೆಯರು ಭಾನುವಾರ ರಜೆ ದಿನವನ್ನು ಎಂಜಾಯ್ ಮಾಡಲು ಮುಂದಾಗಿದ್ದಾರೆ. ಬೆಳಿಗ್ಗೆಯಿಂದ ಸುತ್ತಾಡಿ, ಸಂಜೆ ಪಾರ್ಟಿ ಮಾಡಿ ಕೆರೆಯ ಬಳಿ ಬಂದಿದ್ದಾರೆ. ಕೆರೆಯಲ್ಲಿ ಇಳಿದು ರೀಲ್ಸ್ ಮಾಡಲು ಪ್ಲಾನ್ ಮಾಡಿದ್ದಾರೆ.
ಈ ವೇಳೆ ಅನಿಲ್ ಹಾಗೂ ದಿನೇಶ್ ಎನ್ನುವವರು ಕೆರೆಗೆ ಇಳಿದು ರೀಲ್ಸ್ ಮಾಡುತ್ತಿದ್ದರೆ, ಉಪೇಂದ್ರ ಎನ್ನುವ ವ್ಯಕ್ತಿ ರೀಲ್ಸ್ ಚಿತ್ರೀಕರಣ ಮಾಡಲು ಶುರುಮಾಡಿದ್ದಾನೆ. ಆದರೆ, ಕೆಲವೇ ನಿಮಿಷಗಳಲ್ಲಿ ಅನಿಲ್ ನೀರಿನಲ್ಲಿ ಮುಳುಗಿದ್ದಾನೆ. ಕುಡಿದ ನಶೆಯಲ್ಲಿ ಇದ್ದಿದ್ದರಿಂದ ಈಜಿ ದಡ ಸೇರಲು ಅಥವಾ ಮೇಲೆ ಏದ್ದೇಳಲು ಸಾಧ್ಯವಾಗಿಲ್ಲ. ಅನಿಲ್ ಮುಳುಗುವುದನ್ನು ನೋಡಿ ಗಾಬರಿಯಾಗಿರುವ ದಿನೇಶ್ ಕೂಡಲೇ ಅಲ್ಲಿಂದ ಮೇಲೆ ಬಂದಿದ್ದಾನೆ. ದಿನೇಶ್ ಹಾಗೂ ಉಪೇಂದ್ರ ಗಾಬರಿಯಲ್ಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ, ಪೊಲೀಸ್ ಬರುವುದರ ಒಳಗೆ ಅನಿಲ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಎನ್ನಲಾಗಿದೆ.
ಶೋಧ ಕಾರ್ಯಾಚರಣೆ
ಸಂಜೆ ವೇಳೆಗೆ ದುರಂತ ಸಂಭವಿಸಿದ್ದು, ರಾತ್ರಿ ಸುಮಾರು 9 ಗಂಟೆಗೆ ಅನಿಲ್ ಮೃತದೇಹ ಪತ್ತೆಯಾಗಿದೆ. ಸಂಜೆ ಈ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಬೋಟ್‌ಗಳ ಮೂಲಕ ಪತ್ತೆ ಕಾರ್ಯಾಚರಣೆ ನಡೆದಿತ್ತು. ಸುಮಾರು ಮೂರ್ನಾಲ್ಕು ಗಂಟೆಗಳ ನಂತರ ಮೃತದೇಹ ಪತ್ತೆಯಾಗಿದೆ.
ಮೂವರು ಗೆಳೆಯರ ಪರಿಚಯವಾಗಿದ್ದು ಹೇಗೆ ?
ಈ ಮೂರು ಜನ ಯುವಕರು ಒಂದೇ ರೂಮ್‌ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಮೃತ ಅನಿಲ್ ಹಾಗೂ ದಿನೇಶ್ ಎನ್ನುವವರು ಇಲ್ಲಿನ ವಸತಿ ಸಮುಚ್ಛಯವೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅದೇ ವಸತಿ ಸಮುಚ್ಛಯದಲ್ಲಿ ಉಪೇಂದ್ರ ಸೆಕ್ಯೂರಿಟಿ ಗಾರ್ಡನ್ ಆಗಿದ್ದ ಎನ್ನಲಾಗಿದೆ. ಭಾನುವಾರ ಹಿನ್ನೆಲೆ ರಿಲಾಕ್ಸ್ ಆಗುವ ಮೂಡನಲ್ಲಿ ಇದ್ದರು. ಆದರೆ, ಮೋಜು - ಮಸ್ತಿ ಮಾಡಲು ಹೋಗಿ ದುರಂತ ಅಂತ್ಯ ಕಂಡಿದೆ.












Click it and Unblock the Notifications