ಮಲೆನಾಡೇಕೆ..? ನಮ್ಮ ಬೆಂಗಳೂರಲ್ಲೇ ಇದೆ ವಾಟರ್ ಫಾಲ್, ವಿಡಿಯೋ ವೈರಲ್!
ಸಾಮಾನ್ಯವಾಗಿ ವೀಕೆಂಡ್ ಬಂದ್ರೆ ಯಾವುದಾದ್ರೂ ವಾಟರ್‌ಫಾಲ್ ನೋಡಿಕೊಂಡು ಚಿಲ್ ಆಗಿ ಬರೋಣ ಅಂತ ಬೆಂಗಳೂರು ತೊರೆಯೋದನ್ನ ಕೇಳಿರ್ತೀವಿ. ಆದ್ರೆ ಈಗ ವಾಟರ್‌ಫಾಲ್ ಬೆಂಗಳೂರಿನಲ್ಲೇ ಇರೋ ವಿಚಾರ ಕೇಳಿ ಸಿಲಿಕಾನ್ ಸಿಟಿ ಮಂದಿ ಶಾಕ್ ಆಗಿದ್ದಾರೆ. ಹೌದು, ನಿನ್ನೆಯಿಂದ ಸುರಿತಿರೋ ಧಾರಕಾರ ಮಳೆಯಿಂದ ಇಡೀ ಬೆಂಗಳೂರು ಮುಳುಗುತ್ತಿರೋದು ಒಂದು ಕಡೆಯಾದ್ರೆ, ಮತ್ತೊಂದೆಡೆ ತಾತ್ಕಾಲಿಕ ಜಲಪಾತಗಳು ಸೃಷ್ಟಿಯಾಗಿ ನೀರು ಧುಮ್ಮಿಕ್ಕಿ ಹರಿದಿದೆ.
ಹೌದು, ಐಟಿಬಿಟಿ ಕಂಪನಿಗಳಿಗೆ ಹೆಸರುವಾಸಿಯಾಗಿದ್ದ ಮಾನ್ಯತಾ ಟೆಕ್‌ಪಾರ್ಕ್ ಅಕ್ಷರಶಃ ಮಾನ್ಯತಾ ವಾಟರ್ ಫಾಲ್ಸ್ ಆಗಿ ಬದಲಾಗಿದೆ. ನಿನ್ನೆ ಸುರಿದ ಧಾರಾಕಾರ ಮಳೆಯು ಮಾನ್ಯತಾ ಟೆಕ್‌ಪಾರ್ಕ್ ಬಳಿ ಜಲಪಾತಗಳನ್ನು ಸೃಷ್ಟಿಸಿದೆ. ಇದು ನೋಡಲು ನೈಜವಾದ ಜಲಪಾತಗಳಂತೆಯೇ ಕಾಣಿಸಿದ್ದು, ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ.

ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿದ್ದ ಕೆಲವು ಟೆಕ್ಕಿಗಳು ಈ ವಾಟರ್‌ಫಾಲ್ ಕಂಡು ಅರೇ..ವಾವ್ ಎಂದು ಖುಷಿಯಾಗಿದ್ದಾರೆ. ಈ ವಿಡಿಯೋ ಸೆರೆಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದೆಡೆ ಮಳೆಯಿಂದ ತತ್ತರಿಸಿರುವ ಉದ್ಯಾನಗರಿಯಲ್ಲಿ ಈ ರೀತಿಯ ಜಲಪಾತಗಳು ಕಂಡುಬಂದಿರುವುದು ಮನಸ್ಸಿಗೆ ಮುದ ನೀಡಿದೆ.
Nearest waterfall to the Bangaloreans 😂🤦♂️.
— Parikshith (@PunyaBharath) October 15, 2024
Manyata Water Falls, no entry fees but reaching out the destination is at own risk😂#BengaluruRains pic.twitter.com/dM1nvLlsxg
ಜಲಪಾತ ನೋಡಲು ಮಲೆನಾಡ ಕಡೆಗೆ ಹೋಗಬೇಕಿತ್ತು. ಈಗ ಜಲಪಾತವೇ ನಮ್ಮನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದೆ ಎಂದು ಫನ್ ಕೂಡ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಟೆಕ್ ಹಬ್ ಆಗಿ ಗುರುತಿಸಿಕೊಂಡಿದ್ದ ಮಾನ್ಯತಾ ಟೆಕ್‌ಪಾರ್ಕ್‌ಗೆ ಇದೀಗ ಮಾನ್ಯತಾ ವಾಟರ್‌ಫಾಲ್ಸ್ ಎಂಬ ಹೊಸ ಹೆಸರು ಕೂಡ ಬಂದಿದೆ.

ಈ ವಿಡಿಯೋಗೆ ಹಲವು ಮಂದಿ ಮಾನ್ಯತಾ ವಾಟರ್‌ಫಾಲ್ಸ್ ಎಂದೇ ಬರೆದುಕೊಂಡು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಮಾನ್ಯತಾ ಟೆಕ್‌ಪಾರ್ಕ್ ಅನ್ನ ವಿಭಿನ್ನ ವಿನ್ಯಾಸದಲ್ಲಿ ನಿರ್ಮಿಸಿರುವುದರಿಂದ ಈ ಜಲಪಾತವು ಮೂಲವಾಗಿ ಅಲ್ಲಿಯೇ ಇರುವಂತೆ ಭಾಸವಾಗುತ್ತಿದೆ. ಇದು ಮಳೆಯಿಂದ ಸೃಷ್ಟಿಯಾಗಿದ್ದರೂ ಮಾನ್ಯತಾ ಟೆಕ್‌ಪಾರ್ಕ್‌ನ ಅಂದ ಹೆಚ್ಚಿಸಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಂಚಲನ ಮೂಡಿಸಿದೆ. ಬೆಂಗಳೂರಿನಲ್ಲಿ ವಾಟರ್‌ಫಾಲ್ ನೋಡಲು ಯಾವುದೇ ಪ್ರವೇಶ ದರ ಇಲ್ಲ. ಫ್ರೀಯಾಗಿ ನಿಮಗೆ ತೋರಿಸುತ್ತೇವೆ. ಸೀದಾ ಮಾನ್ಯತಾ ಟೆಕ್‌ಪಾರ್ಕ್‌ಗೆ ಬನ್ನಿ ಎಂದು ಆಹ್ವಾನ ಕೂಡ ನೀಡಿದ್ದಾರೆ.

ಇನ್ನು ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಸಂಪೂರ್ಣವಾಗಿ ಜಲಾವೃತವಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿದೆ. ಇಂದೂ ಕೂಡ ಹೆಚ್ಚು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಬೆಂಗಳೂರಿಗೆ ಆರೆಂಜ್ ಅಲರ್ಟ್ ಅನ್ನು ಘೋಷಿಸಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಎಲ್ಲ ಶಾಲಾ ಕಾಲೇಜುಗಳಿಗೂ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಇನ್ನು ಧಾರಾಕಾರ ಮಳೆಯ ಮುನ್ಸೂಚನೆ ಇರುವುದರಿಂದ ಎಲ್ಲ ಆಫೀಸ್‌ಗಳಿಗೂ ವರ್ಕ್ ಫ್ರಂ ಹೋಮ್ (ಮನೆಯಿಂದಲೇ ಕೆಲಸ) ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.












Click it and Unblock the Notifications