ಕುಟುಂಬ ಯೋಜನೆ ಕುರಿತು ಬೆಂಗಳೂರಲ್ಲೊಂದು ಉಪಯುಕ್ತ ಕಾರ್ಯಕ್ರಮ
ಬೆಂಗಳೂರು, ಜೂನ್ 29: ಕುಟುಂಬ ಯೋಜನೆ ಪ್ರಸಾರದಲ್ಲಿ ಮಾಧ್ಯಮಗಳ ಪಾತ್ರ ಮತ್ತು ಕುಟುಂಬ ಯೋಜನೆಯ ಮಹತ್ವ ಮತ್ತು ಸಾಗುತ್ತಿರುವ ದಾರಿಗಳ ಕುರಿತು ಚರ್ಚೆಯ ಮೌಲ್ಯಯುತ ಕಾರ್ಯಕ್ರಮವನ್ನು ಗ್ಲೋಬಲ್ ಹೆಲ್ತ್ ಸ್ಟ್ರಾಟಜೀಸ್ ಸಂಸ್ಥೆ ಹಮ್ಮಿಕೊಂಡಿತ್ತು.
ನಗರದ ದಿ ಲೀಲಾ ಪ್ಯಾಲೆಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಫ್‌ಓಜಿಎಸ್‌ಐನ ಅಧ್ಯಕ್ಷೆ ವೈದ್ಯೆ ಹೇಮಾ ದಿವಾಕರ್ ಮಾತನಾಡಿ, ವೈದ್ಯರು, ಆಶಾ ಕಾರ್ಯತರ್ತೆಯರು, ಸರ್ಕಾರ ಕುಟುಂಬ ಯೋಜನೆಯನ್ನು ಪರಿಣಾಮಕಾರಿ ರೀತಿಯಲ್ಲಿ ಸಮುದಾಯಕ್ಕೆ ವಿಶೇಷವಾಗಿ ಮಹಿಳೆಯರಿಗೆ ತಲುಪಿಸುವಲ್ಲಿ ಸೋಲುತ್ತಿರುವ ಬಗ್ಗೆ ಮಾತನಾಡಿದರು.
ಇಂಡಿಯಾ ಸ್ಪೆಂಡ್ ನ ಸಂಪಾದಕ ಸಮರ್ ಹಲರಂಕರ್ ಮಾತನಾಡಿ, ಕರ್ನಾಟಕ ಹಾಗೂ ಭಾರತದಲ್ಲಿ ಕುಟುಂಬ ಯೋಜನೆ ಏಕೆ ಅವಶ್ಯಕ ಎಂಬುದನ್ನು ವಿವಿಧ ದೇಶಗಳ ಅಂಕಿ-ಸಂಖೆಗಳನ್ನು ಮುಂದೆ ಇಟ್ಟು ಮನದಟ್ಟು ಮಾಡಿದರು.

ಮಹಿಳೆ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಲಕ್ಷ್ಮಿಪತಿ ಮಾತನಾಡಿ, ವ್ಯಾಸಕ್ಟಮಿ (ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ) ಯ ಹಲವು ಯಶಸ್ವಿ ಉದಾಹರಣೆಗಳನ್ನು ನೀಡಿದರು. ಪುರುಷರ ಗರ್ಭನಿರೋಧಕ ಶಸ್ತ್ರಚಿಕಿತ್ಸೆಯ ಪ್ರಮಾಣ ಹೆಚ್ಚಾಗಲೇ ಬೇಕಿದೆ ಎಂಬುದನ್ನು ಒತ್ತಿ ಹೇಳಿದರು.
ವಿವಿಧ ಪತ್ರಿಕೆಗಳ ಮುಖ್ಯ ವರದಿಗಾರರು, ಸಂಪಾದಕೀಯ ಮಂಡಳಿ ಸದಸ್ಯರು ಭಾಗವಹಿಸಿ ಕುಟುಂಬ ಯೋಜನೆ ಪ್ರಸರಣದಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಹಾಗೂ ಕುಟುಂಬ ಯೋಜನೆಯ ಮಹತ್ವವನ್ನು ಅವಶ್ಯಕತೆಯನ್ನು ಸಮುದಾಯಕ್ಕೆ ತಲುಪಿಸುವ ದಾರಿಗಳ ಬಗ್ಗೆ ಚರ್ಚೆ ಮಾಡಿದರು.
ವ್ಯಾಸಕ್ಟಮಿ ಮಾಡಿಸಿಕೊಂಡವರು, ಆಶಾ ಕಾರ್ಯತರ್ತೆಯರ ಮುಖ್ಯಸ್ಥೆ ಇನ್ನೂ ಹಲವರು ತಮ್ಮ-ತಮ್ಮ ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.












Click it and Unblock the Notifications