Get Updates
Get notified of breaking news, exclusive insights, and must-see stories!

ಗುರುದೇವ ರವೀಂದ್ರರಿಗೆ ವಿನೂತನ ಕಾವ್ಯ ನಮನ

ಗುರುದೇವ ರವೀಂದ್ರನಾಥ್ ಠಾಗೋರ್ ಅವರ 153ನೇ ಜನ್ಮದಿನೋತ್ಸವವಾದ ಇಂದು ಅನೇಕ ಗೆಳೆಯರು ತಂಡ ವಿಶಿಷ್ಟವಾಗಿ ಕಾವ್ಯ ನಮನ ಸಲ್ಲಿಸಿದೆ. ಭಾರತದ ಇತಿಹಾಸದಲ್ಲಿ ಕವಿ, ಸಾಹಿತಿ, ಸಂಗೀತಗಾರ, ಗುರುವಾಗಿ ಚಿರಸ್ಮರಣೀಯರಾಗಿದ್ದಾರೆ.

ಅನೇಕ ಗೆಳೆಯರು ಎಂಬ ಹೆಸರಿನ ಸಾಹಿತ್ಯಾಸಕ್ತ ಸಮಾನ ಮನಸ್ಕರ ಒಂದು ಸಮೂಹ ಕವಿಗಳಿಗೆ ವಿಶಿಷ್ಟವಾಗಿ ಕಾವ್ಯ ನಮನ ಸಲ್ಲಿಸುತ್ತಿದೆ. ಈ ಹಿಂದೆ ಚಾರ್ಲ್ಸ್ ಬೊದಿಲೇರ್ ಅವರ ನೆನಪಲ್ಲಿ ಅವರ ಕವನಗಳು ವಾಚಿಸಲಾಯಿತು. ವಿವಿಧೆಡೆಗಳಲ್ಲಿಂದ ಕಾವ್ಯಾಸಕ್ತರು ತಮ್ಮ ಒಂದು ಸ್ವಂತ ಕವನದ ಜತೆ ಬೊದಿಲೇರ್ ಅವರ ಕವನವನ್ನು ವಾಚಿಸಿದರು. ಯೂಟ್ಯೂಬ್ ಮೂಲಕ ಈ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡಿ ಜನಮೆಚ್ಚುಗೆ ಪಡೆಯಲಾಯಿತು. ಇದೇ ಪ್ರಯೋಗದ ಮುಂದುವರೆದ ಭಾಗವಾಗಿ ಇಂದು ರವೀಂದ್ರನಾಥ ಠಾಗೋರ್ ಅವರ ಜನ್ಮದಿನವನ್ನು ಇದೇ ರೀತಿ ಆಚರಿಸಲಾಗುತ್ತಿದೆ.

ಕಾವ್ಯ ಗಾಯನ ವಿಡಿಯೋ ಕಲ್ಪನೆ ಹುಟ್ಟಿದ್ದು ಹೇಗೆ?: ಅನೇಕ ಗೆಳೆಯರು -ಇದೊಂದು ಅನೌಪಚಾರಿಕ ಸಾಹಿತ್ಯ ಸಮೂಹ.ಎಲ್ಲರೂ ಕೂಡಿ ಸಾಹಿತ್ಯ ಓದುವ, ಕೇಳುವ, ಪಾಲ್ಗೊಳ್ಳುವ ಅವಕಾಶಗಳನ್ನು ಕಲ್ಪಿಸಿಕೊಳ್ಳುವುದು ಇದರ ಉದ್ದೇಶ. ಸಮಾಜದ ಎಲ್ಲ ಸ್ತರದ ವ್ಯಕ್ತಿಗಳೂ ಈ ಕಾವ್ಯ ಗಾಯನ ವಿಡಿಯೋದಲ್ಲಿ ಪಾಲ್ಗೊಳ್ಳಬಹುದು. ಈವೆಂಟ್ ಒಂದನ್ನು ರೂಪಿಸಿ ಪ್ರತಿಯೊಬ್ಬರು ಅದರಲ್ಲಿ ಪಾಲ್ಗೊಳ್ಳುವುದು. ಈ ಧಾವಂತದ ಜೀವನದಲ್ಲಿ ಕಷ್ಟ. ಹಾಗಾಗಿ ನಾವುಗಳು ಎಲ್ಲಿ ಇದ್ದೇವೆಯೋ ಹಾಗೆಯೇ ಅಲ್ಲಿಂದಲೆ ಕವಿತೆ ಓದುವ ಮತ್ತು ಅದನ್ನು ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಬೇಕಿತ್ತು. ಈ ಬಗ್ಗೆ ಕವಿ ರಾಜೇಂದ್ರ ಪ್ರಸಾದ್ ಇನ್ನಷ್ಟು ವಿವರಿಸಿದ್ದಾರೆ ಮುಂದೆ ಓದಿ...

ಯೂಟ್ಯೂಬ್ ನಲ್ಲಿ ಅನೇಕ ಗೆಳೆಯರು ಚಾನೆಲೆ ಗೆ ಚಂದಾದಾರರಾಗಿ ಈ ರೀತಿಯ ವಿಶಿಷ್ಟ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಬಹುದು. ಕವನ ಗಾಯನ ಮಾಡುವವರ ವಿವರದ ಜತೆಗೆ ಒಂದೆರಡು ಕವನ ವಾಚನವನ್ನು ಕೇಳಬಹುದು.

ಅನೇಕ ಗೆಳೆಯರ ಬಗ್ಗೆ ಕವಿ ರಾಜೇಂದ್ರ ಪ್ರಸಾದ್

ಅನೇಕ ಗೆಳೆಯರ ಬಗ್ಗೆ ಕವಿ ರಾಜೇಂದ್ರ ಪ್ರಸಾದ್

ನಾವುಗಳು ಎಲ್ಲಿ ಇದ್ದೇವೆಯೋ ಹಾಗೆಯೇ ಅಲ್ಲಿಂದಲೆ ಕವಿತೆ ಓದುವ ಮತ್ತು ಅದನ್ನು ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಬೇಕಿತ್ತು. ಆವಾಗ ನಾವು ಇದನ್ನು ಅರಿಸಿಕೊಂಡೆವು. 20-25 ಮಂದಿ ಕವಿಗಳನ್ನು ಅರಿಸಿಕೊಂಡು ಅವರಿಂದ ಕವಿತೆಗಳನ್ನು ಓದಿಸುತ್ತಾ ಕೇಳುತ್ತಾ ಆನಂದಿಸಿದೆವು. ಫೇಸ್ ಬುಕ್ ನ ಎಲ್ಲ ಗೆಳೆಯರು ಈ ಹೊಸ ಕಾರ್ಯಕ್ರಮಕ್ಕೆ ಬೆಂಬಲವಾದರೂ ಮೆಚ್ಚಿದರು ಎಂದು ಅನೇಕ ಗೆಳೆಯರು ತಂಡದ ರುವಾರಿ ಯುವ ಕವಿ ರಾಜೇಂದ್ರ ಪ್ರಸಾದ್ ವಿವರಿಸಿದ್ದಾರೆ.

ಕವಿತೆ & ವಾಚನ : ಚಿದಂಬರ್ ನರೇಂದ್ರ

ಕವಿತೆ & ವಾಚನ : ಚಿದಂಬರ್ ನರೇಂದ್ರ ಪರಿಚಯ : ಚಿದಂಬರ್ ಅವರು , ಮೂಲತಃ ಧಾರವಾಡದವರು , ಬೆಂಗಳೂರಿನಲ್ಲಿ ವಾಸ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ, ಬೇಂದ್ರೆಯವರನ್ನು ಪ್ರೀತಿಯಿಂದ ಓದಿಕೊಂಡಿದ್ದಾರೆ. ಕವಿತೆಗಳನ್ನು ಬರೆಯುವ ಜೊತೆಗೆ ಭೃರ್ತಹರಿಯ ಶೃಂಗಾರ ಶತಕ, ಮಿರ್ಜಾ ಗಾಲಿಬ್, ಗುಲ್ಜಾರ್ ರನ್ನು ಚೆನ್ನಾಗಿ ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ

rn

ಕವಿತೆ & ವಾಚನ : ಡಾ|| ಶಿವಾನಂದ

ಡಾ|| ಶಿವಾನಂದ ಅವರು ಬಿಜಾಪುರದವರು.. ಸಧ್ಯಕ್ಕೆ ಮುಧೋಳದಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರು..

ಕವಿತೆ & ವಾಚನ : ಬಾಗಲಕೋಟೆಯ ಖಾಡೆ

ಖಾಡೆ ಅವರು ಬಾಗಲಕೋಟೆ ಜಿಲ್ಲೆಯವರು.. ಅಲ್ಲಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿಗಳಾಗಿದ್ದಾರೆ ..

ಕವಿತೆ & ವಾಚನ : ಕಾವ್ಯಾ ಸಂತೋಷ ನಾಗರಕಟ್ಟೆ

ಕಾವ್ಯಾ ಸಂತೋಷ ನಾಗರಕಟ್ಟೆ. 'ಧ್ಯಾನಕೆ ತಾರೀಖಿನ ಹಂಗಿಲ್ಲ' ಮೊದಲ ಕವನ ಸಂಕಲನ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿದೆ. ಸದ್ಯಕ್ಕೆ ಪತಿಯೊಡನೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ವಾಸ. 1988ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ ಎ ಪದವಿ. ಯುವ ಬರಹಗಾರರಿಗೆ ನೀಡುವ 2012ರ ಟೋಟೋ ಪುರಸ್ಕಾರ. ಕ್ರೈಸ್ಟ್ ಕಾಲೇಜ್ ಡಾ ಬೇಂದ್ರೆ ಕವನ ಸ್ಪರ್ಧೆಯಲ್ಲಿ ಆರು ವರ್ಷ ಹಾಗೂ ಸಂಚಯದಲ್ಲಿ ಎರಡು ಬಾರಿ ಕಾವ್ಯ ಬಹುಮಾನ. ಬಳ್ಳಾರಿಯ ರಂಗತೋರಣ ವಿದ್ಯಾರ್ಥಿ ನಾಟಕೋತ್ಸವದಲ್ಲಿ ಎರಡು ಸಲ ರಂಗ ಬಹುಮಾನ. ಕನ್ನಡಪ್ರಭ ಪ್ರೇಮಪತ್ರ ಸ್ಪರ್ಧೆಯಲ್ಲಿ ಪ್ರಥಮ. ದೆಹಲಿಯಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕೆಡೆಮಿಯ ಆಲ್ ಇಂಡಿಯನ್ ಯಂಗ್ ರೈಟರ್ಸ್ ಮೀಟ್ ನಲ್ಲಿ 'ಇಶ್ಯೂಸ್ ಆಫ್ ನ್ಯೂ ಫಿಕ್ಶನ್' ಪ್ರಬಂಧ ಮಂಡನೆ. ವಿಜಯಕರ್ನಾಟಕದಲ್ಲಿ 'ಚೆಂದಳಿರ್' ಅಂಕಣ ಬರಹ.

rn

ಕವಿತೆ & ವಾಚನ : ವಿಠ್ಠಲ ದಳವಾಯಿ

ವಿಠ್ಠಲ ದಳವಾಯಿ ಅವರು ಬೆಳಗಾವಿ ಜಿಲ್ಲೆಯ ಮುಗಳಿಹಾಳದವರು. ಅಲ್ಲಿಯೇ ಶಾಲಾ ಶಿಕ್ಷಕರಾಗಿದ್ದಾರೆ. 'ಬೋಧಿ ನೆರಳಿನ ದಾರಿ' ಇವರ ಪ್ರಕಟಿತ ಕವನ ಸಂಕಲನ. ಇವರ ಕಾವ್ಯಕ್ಕೆ ಬಹಳಷ್ಟು ಬಹುಮಾನ ಸಂದಿವೆ.

ಕವಿತೆ & ವಾಚನ : ಅಶೋಕ್ ಶೆಟ್ಟರ್

ಅಶೋಕ್ ಶೆಟ್ಟರ್ ಅವ್ರು ಮೂಲತಃ ಬೈಲಹೊಂಗಲದವರು, ಸಧ್ಯಕ್ಕೆ ಧಾರವಾಡದಲ್ಲಿ ನೆಲೆಸಿದ್ದಾರೆ. ಅಲ್ಲಿನ ಕರ್ನಾಟಕ ವಿಶ್ವವಿದ್ಯಾನಿಲಯದ ಇತಿಹಾಸ & ಪ್ರಾಕ್ತನ ಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.. ವರ್ತಮಾನದ ಕನ್ನಡ ಕಾವ್ಯದಲ್ಲಿ ಶೆಟ್ಟರ್ ಅವ್ರ ಹೆಸರು ಮುಂಚೂಣಿಯಲ್ಲಿದೆ.

rn

ಕವಿತೆ & ವಾಚನ : ಮಂಜುಳಾ ಬಬಲಾದಿ

ಪರಿಚಯ : ಮಂಜುಳಾ ಅವರು ಮೂಲತಃ ಧಾರವಾಡದವರು ಓದಿದ್ದು ಎಂಜನಿಯರಿಂಗ್, ಖಾಸಗಿ ಕಂಪನಿಯಲ್ಲಿ ಉದ್ಯೋಗ ಸಾಹಿತ್ಯ & ಕಾವ್ಯದಲ್ಲಿ ಅಪಾರ ಆಸಕ್ತಿ ಇರಿಸಿಕೊಂಡಿದ್ದಾರೆ

ಕವಿತೆ & ವಾಚನ : ಶಿರಾಳಿಯ ಪರೇಶ್

ಪರೇಶ್ ಮೂಲತಃ ಶಿರಾಳಿಯವರು, ಸಧ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಆರ್.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದು, ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ. ಹಲವು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕವಿತೆ & ವಾಚನ : ಪ್ರವೀಣ್

ಪ್ರವೀಣ್ , ಮೂಲತಃ ಗುಲಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲೂಕಿನವರು ಸದ್ಯ ಹೈದರಾಬಾದಲ್ಲಿ Parexel international ಅಲ್ಲಿ IT Specialist ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯದಲ್ಲಿ ಅಪಾರ ಆಸಕ್ತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+