ಬೆಂಗಳೂರಿನ ಇಟ್ಟಮಡು ಮುಖ್ಯರಸ್ತೆಯಲ್ಲಿ ಸೃಷ್ಟಿಯಾದ ಗುಂಡಿ
ಬೆಂಗಳೂರು, ಜನವರಿ 21: ಬೆಂಗಳೂರಿನ ರಸ್ತೆಗಳ ಸ್ಥಿತಿ ಅಧೋಗತಿಗೆ ತಲುಪಿದ್ದು, ನಗರದಲ್ಲಿ ಗುಂಡಿಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ. ನಿತ್ಯ ವಾಹನ ಸಾವರಿರಿಗೆ ಕಿರಿಕಿರಿ ತರುವುದಲ್ಲದೆ ಪ್ರಾಣಹಾನಿಯನ್ನು ತಂದೊಡ್ಡಿವೆ. ಈಗ ಮತ್ತೊಂದು ಮುಖ್ಯರಸ್ತೆಯಲ್ಲಿ ಗುಂಡಿ ಬಿದಿದ್ದು, ಸಾರ್ವಜನಿಕರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಸಿಂಕ್‌ಹೋಲ್‌ಗಳು ಹೆಚ್ಚಾಗುತ್ತಲೇ ಇದ್ದು, ಶುಕ್ರವಾರ ಬನಶಂಕರಿ ಮುಖ್ಯರಸ್ತೆಯ ಬಳಿಯ ಇಟ್ಟಮಡು ಮುಖ್ಯರಸ್ತೆಯಲ್ಲಿ ಕಾಣಿಸಿಕೊಂಡಿದೆ. ರಸ್ತೆಯ ಕೆಳಗಿರುವ ನೀರಿನ ಪೈಪ್‌ಲೈನ್ ಸೋರಿಕೆಯಿಂದಾಗಿ ಮೂರು ಅಡಿ ಆಳದ ಸಿಂಕ್‌ಹೋಲ್ ಕಾಣಿಸಿಕೊಂಡಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಸೋರಿಕೆಯಿಂದಾಗಿ ಮಣ್ಣು ಸಡಿಲಗೊಂಡು ಕುಳಿ ಉಂಟಾಗಿ ರಸ್ತೆ ಗುಂಡಿ ಬಿದ್ದಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು. ಈಗ ಪೈಪ್‌ಲೈನ್ ಬದಲಾಯಿಸಲಾಗುತ್ತಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧಿಕಾರಿಗಳು ತಿಳಿಸಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.

ಮನೆಯೊಂದಕ್ಕೆ ನೀರಿನ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಸೋರುತ್ತಿದ್ದು, ನಾವು ಈಗ ಅದನ್ನು ಬದಲಾಯಿಸಿದ್ದೇವೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಇಂಜಿನಿಯರ್ ಮಾಹಿತಿ ನೀಡಿದ್ದಾರೆ. ಇಲ್ಲಿ ಶುಕ್ರವಾರ ಸಂಜೆ ಸಿಂಕ್ಹೋಲ್ ಕಾಣಿಸಿಕೊಂಡಿತು. ಆಗ ಶೀಘ್ರದಲ್ಲೇ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಯಿತು.
ಶನಿವಾರ ಬೆಳಗ್ಗೆಯಿಂದ ಪೈಪ್ ಲೈನ್ ಬದಲಾವಣೆ ಕಾಮಗಾರಿ ಆರಂಭವಾಗಿದ್ದು, ಶೀಘ್ರದಲ್ಲಿ ರಸ್ತೆ ಪುನಶ್ಚೇತನಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಮಹಾಲಕ್ಷ್ಮಿ ಮೆಟ್ರೊ ನಿಲ್ದಾಣದಿಂದ ಸುಮಾರು 50 ಮೀಟರ್ ದೂರದಲ್ಲಿರುವ ಮುಖ್ಯರಸ್ತೆಯಲ್ಲೇ ಮತ್ತೊಂದು ರಸ್ತೆಗುಂಡಿ ಕಾಣಿಸಿಕೊಂಡಿತ್ತು.
ಕೆಲವು ದಿನಗಳ ಹಿಂದೆ ಬ್ರಿಗೇಡ್ ರಸ್ತೆಯ ಜಾನ್ಸನ್ ಮಾರುಕಟ್ಟೆ ಬಳಿ ರಸ್ತೆಯಲ್ಲಿ ಬೃಹತ್ ರಸ್ತೆಗುಂಡಿ ನಿರ್ಮಾಣವಾಗಿತ್ತು. ಇದರಿಂದ ಬೈಕ್ ಸವಾರರೊಬ್ಬರು ಬಿದ್ದಿದ್ದರಿಂದ ಅವರಿ ಗಾಯವಾಗಿತ್ತು. ಇದಾದ ಐದು ದಿನಗಳ ಅಂತರದಲ್ಲಿ ಮಂಗಳವಾರ ಮಂಗಳವಾರ ಬೆಳಗ್ಗೆ ಮಹಾಲಕ್ಷ್ಮಿ ಮೆಟ್ರೊ ನಿಲ್ದಾಣದಿಂದ ಸುಮಾರು 50 ಮೀಟರ್ ದೂರದಲ್ಲಿರುವ ಮುಖ್ಯರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡಿತ್ತು.












Click it and Unblock the Notifications