100 ಮಹಿಳೆಯರಿಗೆ ಮೋಸ ಮಾಡಿದ 'ಕ್ಯಾಸಾನೋವಾ'ನ ಬಂಧನ
ಬೆಂಗಳೂರು, ಜೂನ್ 28 : ಒಂದಲ್ಲ ಎರಡಲ್ಲ, ಬರೋಬ್ಬರಿ 100 ಮಹಿಳೆಯರಿಗೆ ಮೋಸ ಮಾಡಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ಸಾದತ್ ಖಾನ್ (28) ಬಂಧಿತ ಆರೋಪಿ. ಲೈಂಗಿಕವಾಗಿ ಬಳಸಿಕೊಂಡು ಅವರಿಂದಲೇ ಹಣ ಪೀಕಿ ಪರಾರಿಯಾಗುತ್ತಿದ್ದ ಖದೀಮ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಮ್ಯಾಟ್ರಿಮೋನಿ ತಾಣದಲ್ಲಿನ ಪ್ರೊಫೈಲ್ ಗಳನ್ನು ಟಾರ್ಗೆಟ್ ಮಾಡುತ್ತಿದ್ದ, ಈತ ನಾನು ಕೇಂದ್ರ ಸರ್ಕಾರದ ಉದ್ಯೋಗಿ/ ಕಂಪೆನಿಯ ಸಿಇಒ ಇತ್ಯಾದಿ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡುತ್ತಿದ್ದ. ಈ ವೆಬ್ ಸೈಟ್ ಗಳಲ್ಲಿ ವಿಚ್ಚೇದಿತ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮದುವೆಯಾಗುವುದಾಗಿ ನಂಬಿಸಿ, ನಂತರ ಲೈಂಗಿಕವಾಗಿ ಬಳಸಿಕೊಂಡು ಅವರಿಂದಲೇ ಹಣ ಪಡೆದು ಸಾದತ್ ಖಾನ್ ಪರಾರಿಯಾಗುತ್ತಿದ್ದ.

ಸುಮಾರು 40 ಕ್ಕೂ ಹೆಚ್ಚು ಮಹಿಳೆಯರಿಗೆ ಹಣ ಪಡೆದು ಮೋಸ ಮಾಡಿದ್ದು, 75 ರಿಂದ 100 ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಮಾಹಿತಿ ಈಗ ಸಿಕ್ಕಿದೆ.
ಬೆಂಗಳೂರಿನ ಯಲಹಂಕ, ಜಯನಗರ, ಮೈಸೂರು ಕೆ. ಅರ್.ಪುರ. ಧಾರವಾಡ ಸೇರಿದಂತೆ 8 ಕಡೆ ಅಧಿಕೃತ ದೂರು ದಾಖಲಾಗಿದೆ.ಪಿಯು ಓದಿದ ಬಳಿಕ ಐಟಿಐ ಮಾಡಿದ್ದ ಈತ ಹೇರ್ ಸ್ಟೈಲ್, ಬಾಡಿ ಸ್ಟ್ರಕ್ಚರ್, ಭಾಷೆ, ಊರು ಎಲ್ಲ ಬದಲಾಯಸಿಕೊಂಡಿದ್ದ. ಅನ್ ಲೈನ್‍ಲ್ಲಿ ಫಾರೀನ್ ಇಂಗ್ಲಿಷ್ ಶೈಲಿಯನ್ನು ಕಲಿತು ಯುವತಿಯರನ್ನು ಪಟಾಯಿಸುತ್ತಿದ್ದ.
CRIMINAL CASANOVA CAUGHT... sadat khan who had duped many ladies and cheated them of lakhs of rupees by creating false profiles arrested. pic.twitter.com/IzFuoujvSc
— Dr. HARSHA P.S, IPS (@DCPNEBCP) June 27, 2017
ಓರ್ವ ಮಹಿಳೆ ಬಳಿಯಿಂದ 20 ಲಕ್ಷ ಹಣ ಸುಲಿಗೆ ಮಾಡಿದ್ದಾನೆ. ನಿವೃತ್ತ ಸರ್ಕಾರಿ ಅಧಿಕಾರಿಯ ಮಗಳಿಗೂ ಮೋಸ ವಂಚಕ ಮೋಸ ಮಾಡಿದ್ದಾನೆ.
ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್, ಸರ್ಕಾರಿ ನೌಕರರು, ಟೆಕ್ಕಿಗಳು, ಕಾರ್ಪೊರೇಟ್ ಸಂಸ್ಥೆಯ ಮುಖ್ಯಸ್ಥರು ಸಹ ಇವನಿಂದ ಮೋಸ ಹೋಗಿದ್ದು, ಕೆಲ ಮಹಿಳೆಯರ ಸಂಪೂರ್ಣ ಆಸ್ತಿ ಕಿತ್ತುಕೊಂಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಅರೋಪಿಯ ಎಲ್ಲಾ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಲಾಗಿದೆ. ಈತ ಉಮೇಶ್ ರೆಡ್ಡಿಯ ರೀತಿಯ ಮತ್ತೊಬ್ಬ ವಿಕೃತ ಮನಸ್ಸಿನ ವ್ಯಕ್ತಿ. ಅನೇಕ ಮಹಿಳೆಯರು ಮರ್ಯಾದೆಗೆ ಅಂಜಿ ದೂರು ನೀಡಲು ಬರುತ್ತಿಲ್ಲ.

ಈ ಹಿಂದೆ ಯಲಹಂಕದಲ್ಲಿ ಒಂದು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ. ಧಾರವಾಡ ಠಾಣೆಯಲ್ಲಿ ಒಮ್ಮೆ ಅರೆಸ್ಟ್ ಆಗಿದ್ದ. ಜೈಲಿಗೆ ಹೋಗಿ ಬಂದ ಮೇಲೆ ಎಲ್ಲಾ ಬದಲಾಯಿಸಿಕೊಳ್ಳುತ್ತಾನೆ.
ಪೊಲೀಸರು ಮಾರುವೇಷದಲ್ಲಿ ಹೋಗಿ ಲಾಡ್ಜ್ ನಲ್ಲಿ ಆರೋಪಿಯನ್ನು ಹಿಡಿದಿದ್ದಾರೆ. ಶ್ರೀಮಂತ ಮಹಿಳೆಯರ ಲೈಫ್ ಸ್ಟೈಲ್ ತಿಳಿದುಕೊಂಡಿದ್ದ ಈತ ಆನಂತರ, ಡೈವೋರ್ಸ್ ಆದ ಮಹಿಳೆಯರು, ಲೇಟ್ ಮದುವೆಯಾದವರು, ಗಂಡ ಹೆಂಡತಿಯರ ಸಬಂಧ ಸರಿಯಿಲ್ಲದವರನ್ನು ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದ.
ಈತನಿಂದ ನೊಂದವರು ಯಾರಾದರೂ ಇದ್ದರೆ ಬಂದು ದೂರು ಕೊಡಬಹುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಹರ್ಷಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications