ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಶಿಕ್ಷಕ!
ಬೆಂಗಳೂರು, ಜನವರಿ 8: ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ದುಡ್ಡನ್ನು ನೀಡಿ, ಓದಲು ಸಹಾಯ ಮಾಡುತ್ತಿದ್ದ ಅಧ್ಯಾಪಕರ ಬಗ್ಗೆ ಕೇಳಿದ್ದೇವೆ. ಆದರೆ, ವಿದ್ಯೆ ಕಲಿಸಿ ಎಂದು ವಿದ್ಯಾರ್ಥಿಗಳು ನೀಡಿದ ದುಡ್ಡನ್ನು ಅಧ್ಯಾಪಕನೊಬ್ಬ ವೈಯಕ್ತಿಕವಾಗಿ ಬಳಸಿಕೊಂಡು, ಶಿಕ್ಷಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ ಕೆ ಜನಾರ್ದನಂ ಅವರು ವಿದ್ಯಾರ್ಥಿಗಳು ಕಟ್ಟಿದ ಕಾಲೇಜು ಶುಲ್ಕವನ್ನು ವೈಯಕ್ತಿಕ ಕಾರಣಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‌ನಲ್ಲಿ ಎಂಬಿಎ ಸಂಜೆ ಕಾಲೇಜಿಗೆ 2018-19 ರಲ್ಲಿ ಪ್ರವೇಶ ಪಡೆದಿದ್ದ 57 ವಿದ್ಯಾರ್ಥಿಗಳು ಪ್ರವೇಶ ಶುಲ್ಕವಾಗಿ 13.62 ಲಕ್ಷ ರುಪಾಯಿ ಪಾವತಿಸಿದ್ದರು.

ಆದರೆ, ಪ್ರೊ ಕೆ ಜನಾರ್ದನಂ ಅವರು, ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ನಿರ್ದೇಶಕರಾಗಿದ್ದಾಗ 13.62 ಲಕ್ಷ ರುಪಾಯಿ ಕಾಲೇಜು ಶುಲ್ಕವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಹಣವನ್ನು ವಾಪಸ್ ಸಂಸ್ಥೆಗೆ ಮರಳಿಸಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರೊ. ಶಿವರಾಂ ದೂರು ನೀಡಿದ್ದಾರೆ.












Click it and Unblock the Notifications