ಬ್ರೇಕ್ ಬದಲು ಆಕ್ಸಲರೇಟರ್ ಒತ್ತಿದ್ರೆ ಏನಾಗುತ್ತೆ? ಚಿತ್ರ ನೋಡಿ
ವ್ಯಕ್ತಿಯೊಬ್ಬ ಕಾರಿನ ಬ್ರೇಕ್ ಬದಲು ಆಕ್ಸಲರೇಟರ್ ಒತ್ತಿದ ಕಾರಣ ಕಾರು ಆಯತಪ್ಪಿ ಕಚೇರಿಯ ಕಾಂಪೌಂಡಿನ ಒಳಗೆ ಬಿದ್ದ ಘಟನೆ ನಡೆದಿದೆ.
ಬೆಂಗಳೂರು, ಮಾರ್ಚ್ 03: ಜಯನಗರದ ಒನ್ಇಂಡಿಯಾ ಕಚೇರಿ ಮುಂದೆ ಶುಕ್ರವಾರ ಸಂಜೆ ವ್ಯಕ್ತಿಯೊಬ್ಬ ಕಾರಿನ ಬ್ರೇಕ್ ಬದಲು ಆಕ್ಸಲರೇಟರ್ ಒತ್ತಿದ ಕಾರಣ ಕಾರು ಆಯತಪ್ಪಿ ಕಚೇರಿಯ ಕಾಂಪೌಂಡಿನ ಒಳಗೆ ಬಿದ್ದ ಘಟನೆ ನಡೆದಿದೆ.

ಜಖಂಗೊಂಡಿರುವ ಮಹಿಂದ್ರಾ ರೇವಾ ಇಲೆಕ್ಟ್ರಿಕ್ ಕಾರು ಇಲ್ಲಿನ ಅಪೋಲೋ ಆಸ್ಪತ್ರೆಗೆಂದು ಬಂದಿದ್ದ ಮಧುಶ್ರೀ ಎಂಬುವವರದ್ದು. ಇವರ ಕಾರನ್ನು ಪಾರ್ಕಿಂಗಿನಿಂದ ಕೊಂಡೊಯ್ಯುತ್ತಿದ್ದ ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಆದರೆ, ಶೀರ್ಷಾಸನ ಹಾಕಿದ ರೀತಿಯಲ್ಲಿ ಕಾರು ವಿಭಿನ್ನವಾಗಿ ಪಾರ್ಕಿಂಗ್ ನೋಡಲು ಜನ ಮುಗಿಬೀಳುತ್ತಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಕಾರನ್ನು ಓಡಿಸುತ್ತಿದ್ದ ವ್ಯಕ್ತಿ, ನಿಮ್ಮ ಕಾರಿಗೆ ಸಣ್ಣ ಅಪಘಾತವಾಗಿದೆ, ಸಣ್ಣಪುಟ್ಟ ತರಚಿದ ಗಾಯವಾಗಿದೆ ಎಂದು ಫೋನ್ ಮಾಡಿದ್ದಾರೆ. ಆದರೆ, ಬಂದು ನೋಡಿದಾಗ ಮಾಲಿಕರು ಮೂರ್ಛೆ ಬೀಳುವುದು ಬಾಕಿಯಿತ್ತು.
ಈ ಘಟನೆ ನಡೆದ ನಂತರ ವ್ಯಾಲೆಟ್ ಪಾರ್ಕಿಂಗ್ ಮಾಡುವಾಗ ಜನರು ಮತ್ತೊಮ್ಮೆ ವಿಚಾರ ಮಾಡುವಂತಾಗಿದೆ. ಇಂಥ ದೊಡ್ಡ ಅಪಘಾತವಾದರೆ ಯಾರು ಜವಾಬ್ದಾರರು. ಅದೃಷ್ಟವಶಾತ್ ಆ ಸಮಯದಲ್ಲಿ ಭದ್ರತಾ ಸಿಬ್ಬಂದಿಗಳು ಆ ಸ್ಥಳದಲ್ಲಿ ಅಲ್ಲಿ ನಿಂತಿರಲಿಲ್ಲ.












Click it and Unblock the Notifications