ಬೆಂಗಳೂರು: ಪ್ರಮೋಷನ್ ಸಿಗದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ
ಬೆಂಗಳೂರು, ಮೇ 25 : ತಾವು ಅಂದುಕೊಂಡಿದ್ದು ಸಿಗದಿದ್ದರೇ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಜನರು ಇದ್ದಾರೆ.
ಹೌದು. ಬೆಂಗಳೂರಿನ ಆರ್ ಟಿ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಒಬ್ಬಳು ತಾನು ಆಸೆ ಪಟ್ಟಿದ್ದ ಹುದ್ದೆಗೆ ಬಡ್ತಿ (ಪ್ರಮೋಷನ್) ಸಿಕ್ಕಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದಿವ್ಯಾ ದಮಯಂತಿ (26) ಎನ್ನುವ ಯುವತಿ ತನ್ನ ಆಸೆಯಂತೆ ಕಂಪನಿಯಲ್ಲಿ ಪ್ರಮೋಷನ್ ದೊರೆತಿಲ್ಲ ಎನ್ನುವ ಕಾರಣಕ್ಕಾಗಿ ವಿದ್ಯಾರಣ್ಯಪುರದ ತಿಂಡ್ಲುವಿನ ವಿಘ್ನೇಶ್ವರ ನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ದಿವ್ಯಾ ಅವರು ಕೆಲದಿನಗಳಿಂದ ಫ್ಲೋರ್ ಮ್ಯಾನೇಜರ್ ಹುದ್ದೆಯ ಪ್ರಮೋಷನ್ ನಿರೀಕ್ಷೆಯಲ್ಲಿದ್ದರು. ಆದರೆ, ಇವರಿಗೆ ಪ್ರಮೋಷನ್ ನೀಡದೇ ಬೇರೊಬ್ಬ ಮಹಿಳೆಗೆ ಕಂಪನಿ ಪ್ರಮೋಷನ್ ನೀಡಿತ್ತು.
ಇದರಿಂದ ಹಲವು ದಿನಗಳಿಂದ ದಿವ್ಯಾ ಖಿನ್ನತೆ ಒಳಗಾಗಿದ್ದರು. ಇದೀಗ ಇದೇ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗುತ್ತಿದೆ. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications