A and B Khata: ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸುವುದು ಹೇಗೆ, ಬೇಕಾಗುವ ದಾಖಲೆಗಳು!
ಕರ್ನಾಟಕದಲ್ಲಿ ಹಲವು ಆಸ್ತಿ ಮಾಲೀಕರು ಆಸ್ತಿಯ ಖಾತೆಯನ್ನು ಬಿ ಖಾತಾದಲ್ಲಿ ಹೊಂದಿದ್ದು. ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳುವುದು ಹೇಗೆ ಎನ್ನುವುದು ತಿಳಿಯದೆ ಪರದಾಡುತ್ತಿದ್ದಾರೆ. ಆಸ್ತಿದಾರರಿಗೆ ಎ ಖಾತಾ ಇದ್ದರೆ ಹಲವು ಸೌಲಭ್ಯಗಳು ಹಾಗೂ ಸರ್ಕಾರದ ಅಧಿಕೃತ ಆಸ್ತಿ ಖಾತಾ ಎನ್ನುವ ಮಾನ್ಯತೆ ಸೇರಿದಂತೆ ಹಲವು ಕಾನೂನು ಮಾನ್ಯತೆಗಳು ಸಿಗುತ್ತವೆ. ಆದರೆ ಬಿ ಖಾತಾದ ಆಸ್ತಿದಾರರು ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಕೆಲವು ನಿರ್ದಿಷ್ಟ ಬಿ ಖಾತಾ ಆಸ್ತಿಗಳನ್ನು ನೀವು ಎ ಖಾತಾಗೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿದೆ. ಅದೇನು ಎನ್ನುವ ವಿವರ ನೋಡೋಣ.
ಬಿ ಖಾತಾದ ಆಸ್ತಿದಾರರಿಗೆ ಸರ್ಕಾರದ ಪ್ರಮುಖ ಸೌಲಭ್ಯಗಳು ಸಿಗುವುದಿಲ್ಲ. ಅಲ್ಲದೇ ಎ ಖಾತಾದ ಆಸ್ತಿಗಳಿಗೆ ಹೋಲಿಕೆ ಮಾಡಿದರೆ ಬಿ ಖಾತಾದ ಆಸ್ತಿಗಳಿಗೆ ಹೆಚ್ಚು ಡಿಮ್ಯಾಂಡ್ ಸಹ ಇಲ್ಲ. ಬ್ಯಾಂಕ್‌ಗಳಿಂದ ಸಾಲಸೌಲಭ್ಯ ಹಾಗೂ ಸರ್ಕಾರದ ಅಧಿಕೃತ ಮಾನ್ಯತೆ ಇರುವುದಿಲ್ಲ. ಆದರೆ, ಕೆಲವು ನಿರ್ದಿಷ್ಟ ಆಸ್ತಿಗಳನ್ನು ನೀವು ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸಿಕೊಂಡು ಸರ್ಕಾರದ ಅಧಿಕೃತ ಮಾನ್ಯತೆಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಹಾಗಾದರೆ ಬಿ ಖಾತಾದ ಆಸ್ತಿಯನ್ನು ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳುವುದು ಹೇಗೆ. ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಬದಲಾವಣೆ ಮಾಡಿಕೊಳ್ಳಲು ಬೇಕಾಗುವ ದಾಖಲೆಗಳು ಏನು ಎನ್ನುವ ಸಂಪೂರ್ಣ ವಿವರ ತಿಳಿಯೋಣ.

ಆಸ್ತಿಗಳಲ್ಲಿ ಪ್ರಮುಖವಾಗಿ ಎ ಖಾತಾ ಹಾಗೂ ಬಿ ಖಾತಾ ಎಂದಿದೆ. ಬಿ ಖಾತಾ ಇದ್ದರೆ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದರ್ಥ. ಕೆಲವೊಂದು ಸಣ್ಣಪುಟ್ಟ ತಪ್ಪುಗಳಿದ್ದರೆ ನೀವು ಬಿ ಖಾತಾದ ಆಸ್ತಿಗಳನ್ನು ಎ ಖಾತಾಗೆ ವರ್ಗಾಯಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಬಿ ಖಾತಾದಿಂದ ಎ ಖಾತಾಗೆ ಆಸ್ತಿ ವರ್ಗಾವಣೆ ಮಾಡಿಕೊಳ್ಳುವ ಪ್ರಮುಖ ವಿಧಾನದ ವಿವರ ನೋಡೋಣ.
* ಆಸ್ತಿ ತೆರಿಗೆ ಪಾವತಿ ಮಾಡಿ: ನೀವು ಆಸ್ತಿಯನ್ನು ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸಿಕೊಳ್ಳುವ ಹಂತದಲ್ಲಿ ಮೊದಲು ಈ ನಿರ್ದಿಷ್ಟ ಆಸ್ತಿಗೆ ಬಾಕಿ ಉಳಿದಿರುವ ಎಲ್ಲಾ ಆಸ್ತಿ ತೆರಿಗೆಯನ್ನೂ ಪಾವತಿ ಮಾಡಿ. ಎಲ್ಲಾ ಬಾಕಿ ಆಸ್ತಿ ತೆರಿಗೆ ಪಾವತಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.
* ಬಿ ಖಾತಾದಿಂದ ಎ ಖಾತಾ ಅರ್ಜಿ: ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದಲ್ಲಿ ಉದಾ: ಬೆಂಗಳೂರಿನಲ್ಲಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಅರ್ಜಿ ಸಲ್ಲಿಕೆ ಮಾಡಿ. ಈ ಸಂದರ್ಭದಲ್ಲಿ ಮರೆಯದೆ ಹಾಗೂ ಮುಖ್ಯವಾಗಿ ಆಸ್ತಿ ಪತ್ರದ ದಾಖಲೆ, ಪ್ರಾಪರ್ಟಿ ಟ್ಯಾಕ್ಸ್ ಡಾಕ್ಯೂಮೆಂಟ್ಸ್ ಹಾಗೂ ಕಟ್ಟಡ ನಿರ್ಮಾಣ ಪ್ಲ್ಯಾನ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಸಲ್ಲಿಕೆ ಮಾಡಿ.
* ಪರಿಶೀಲನಾ ಪ್ರಕ್ರಿಯೆ: ಆಸ್ತಿ ಖಾತಾ ಬದಲಾವಣೆ ಆಗುವ ಸಂದರ್ಭದಲ್ಲಿ ಆ ಪ್ರಕಿಯೆ ಮುಗಿಯುವ ವರೆಗೆ ಕಾಯಿರಿ. ಇನ್ನು ಬಿ ಖಾತಾದಿಂದ ಎ ಖಾತಾಗೆ ಆಸ್ತಿ ದಾಖಲೆಗಳು ಬದಲಾದ ಮೇಲೆ ನಿಮಗೆ ಹೊಸ ಖಾತಾದ ಪ್ರಮಾಣ ಪತ್ರ ಲಭ್ಯವಾಗಲಿದೆ.
* ಬಿ ಖಾತಾ ಎಂದಿಗೂ ಸಮಸ್ಯೆಯೇ: ಇನ್ನು ಬಿ ಖಾತಾ ಹಾಗೂ ಬಿ ಖಾತಾದ ಆಸ್ತಿಯು ಎಂದಿಗೂ ಸಮಸ್ಯೆಯೇ ಎಂದು ಹೇಳಲಾಗುತ್ತದೆ. ಮುಂದಿನ ದಿನಗಳಲ್ಲಿ ಆಸ್ತಿ ಬೆಲೆ ಹೆಚ್ಚಳವಾದರೂ ಬಿ ಖಾತಾದ ಆಸ್ತಿ ಇರುವವರಿಗೆ ಇದರ ಪೂರ್ಣ ಪ್ರಮಾಣದ ಲಾಭ ಸಿಗುವುದಿಲ್ಲ. ಅಲ್ಲದೇ ಬಿ ಖಾತಾದ ಆಸ್ತಿಯನ್ನು ಹೊಂದಿರುವವರಿಗೆ ಸರ್ಕಾರದಿಂದ ಎಲ್ಲಾ ಮಾದರಿಯ ಸೌಲಭ್ಯಗಳು ಸಹ ಲಭ್ಯವಾಗುವುದಿಲ್ಲ. ಹೀಗಾಗಿ ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಬದಲಾಯಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಪ್ರಾಪರ್ಟಿ ತಜ್ಞರು.
ಬಿ ಖಾತಾದಿಂದ ಎ ಖಾತಾ ಯಾವಾಗಲೂ ಸೇಫ್: ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳುವುದು ಆಸ್ತಿಯ ಸಂರಕ್ಷಣೆ ಹಾಗೂ ಮೌಲ್ಯ ಸೇರಿದಂತೆ ವಿವಿಧ ಕಾರಣಗಳಿಗೆ ಯಾವಾಗಲೂ ಸೇಫ್ ಅಂತಲೇ ಹೇಳಲಾಗುತ್ತದೆ. ಹೀಗಾಗಿ, ಬಿ ಖಾತಾ ಇರುವವರು ಎ ಖಾತಾ ಮಾಡಿಸಿಕೊಳ್ಳುವುದು ಉತ್ತಮ.












Click it and Unblock the Notifications