ಬೆಂಗಳೂರು : ಟರ್ಕಿಯಿಂದ ಗಡೀಪಾರಾಗಿದ್ದ 9 ಜನ ಬಿಡುಗಡೆ

ಬೆಂಗಳೂರು, ಫೆ. 2: ಟರ್ಕಿಯಿಂದ ಭಾರತಕ್ಕೆ ಗಡೀಪಾರಾಗಿದ್ದ 9 ಜನರನ್ನು ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇವರೆಲ್ಲ ಐಎಸ್ಐಎಸ್‌ ಭಯೋತ್ಪಾದಕ ಸಂಘಟನೆಗೆ ಸೇರಲು ಯತ್ನಿಸಿದ್ದರು ಎಂಬ ಶಂಕೆಯ ಮೇರೆಗೆ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು.

ಪೊಲೀಸರ ವಿಚಾರಣೆಯಲ್ಲಿ ತಾವೆಲ್ಲ ಪ್ರವಾಸಕ್ಕಾಗಿ ತೆರಳಿದ್ದೆವೆಂದು ಎಲ್ಲ 9 ಜನ ಹೇಳಿದ್ದಾರೆ. ಇವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲು ಸಾಕ್ಷಿ ಸಿಕ್ಕಿಲ್ಲ. ಆದ್ದರಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. [ಐಎಸ್ಐಎಸ್ ಸೇರಲು ಹೊರಟವರು ಭಾರತಕ್ಕೆ ಗಡೀಪಾರು]

ಘಟನೆಯ ಹಿನ್ನೆಲೆ : ಟರ್ಕಿ ಗಡಿ ಮೂಲಕ 9 ಭಾರತೀಯರು ಸಿರಿಯಾ ಪ್ರವೇಶಿಸಲು ಯತ್ನಿಸುತ್ತಿದ್ದರು. ಅಲ್ಲಿಗೆ ತೆರಳಿ ಐಎಸ್ಐಎಸ್ ಸೇರುವ ಯೋಚನೆಯನ್ನು ಅವರು ಹೊಂದಿದ್ದರು ಎಂದು ಆರೋಪಿಸಿ ಟರ್ಕಿ ಸರ್ಕಾರ ಅವರನ್ನು ಭಾರತಕ್ಕೆ ಗಡೀಪಾರು ಮಾಡಿತ್ತು. [ಐಎಸ್ಐಎಸ್ ಸೇರಲು ಬಯಸುವವರ ಬಂಧನಕ್ಕೆ ಚಕ್ರವ್ಯೂಹ]

isis

ಇವರೆಲ್ಲ ಬೆಂಗಳೂರಿನ ಮೂಲಕವೇ ಟರ್ಕಿಗೆ ತೆರಳಿದ್ದರು. ಆದ್ದರಿಂದ ಟರ್ಕಿ ಸರ್ಕಾರ ಕೂಡ ಇವರನ್ನು ವಿಮಾನದ ಮೂಲಕ ಬೆಂಗಳೂರಿಗೇ ಕಳುಹಿಸಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. [ಶಮಿವಿಟ್ ನೆಸ್ ಸಂಪರ್ಕ ಹೊಂದಿದ್ದ ಎಲ್ಲರ ವಿಚಾರಣೆ]

ಈ ತಂಡದಲ್ಲಿ ಏಳು ಜನ ಚೆನ್ನೈ ಮೂಲದವರು. ಇವರಲ್ಲಿ ಓರ್ವ ಮಹಿಳೆ ಹಾಗೂ ಐವರು ಮಕ್ಕಳಿದ್ದು ಎಲ್ಲರೂ ಒಂದೇ ಕುಟುಂಬದವರಾಗಿದ್ದರು. ತೆಲಂಗಾಣ ಹಾಗೂ ಹಾಸನದ ತಲಾ ಒಬ್ಬರು ಸೇರಿದ್ದಾರೆ.

ಪೊಲೀಸರ ಅಭಿಪ್ರಾಯ : ಉಗ್ರ ಸಂಘಟನೆಗೆ ಸೇರಲು ಇಚ್ಛಿಸುವವರು ಸಾಮಾನ್ಯವಾಗಿ ಮಕ್ಕಳು ಹಾಗೂ ಕುಟುಂಬವನ್ನು ಕರೆದೊಯ್ಯುವುದಿಲ್ಲ. ತಂಡದ ಎಲ್ಲರೂ ತಾವು ಪ್ರವಾಸಕ್ಕಾಗಿ ಟರ್ಕಿಗೆ ತೆರಳಿದ್ದಾಗಿ ತಿಳಿಸಿದ್ದಾರೆ. ಅವರು ಭಯೋತ್ಪಾದಕರಾಗಲು ತೆರಳಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. [ಜಾಣ ಮೆಹದಿ ಪೊಲೀಸರ ಕಣ್ಣು ತಪ್ಪಿಸಿದ್ದು ಹೇಗೆ?]

ಬೆಂಗಳೂರಿನಲ್ಲಿ ಬಂಧಿತನಾಗಿರುವ ಮೆಹದಿ ಮಸ್ರೂರ್ ಬಿಸ್ವಾಸ್ ಜೊತೆಗೂ ಇವರು ಯಾವುದೇ ಸಂಬಂಧ ಹೊಂದಿರಲಿಲ್ಲ. ಆದ್ದರಿಂದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಒನ್ಇಂಡಿಯಾ ಕನ್ನಡ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+