ಚುನಾವಣೆ ಹಿನ್ನೆಲೆ ಹೆಚ್ಚಾದ ನಗದು ಹರಿವು: 81 ಆರ್ಥಿಕ ಸೂಕ್ಷ್ಮ ಪ್ರದೇಶಗಳು
ಬೆಂಗಳೂರು, ಏಪ್ರಿಲ್. 28 : ಮುಂದಿನ ತಿಂಗಳು 10 ರಂದು ರಾಜ್ಯದಲ್ಲಿವಿಧಾನಸಭಾ ಚುಣಾವಣೆ ನಡೆಯಲಿದ್ದು, ಚುನಾವಣಾ ಆಕ್ರಮ ತಡೆಗಟ್ಟುವ ಹಿನ್ನೆಲೆಯಲ್ಲಿ ಕರುನಾಡಿನೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 81 ಆರ್ಥಿಕ ಸೂಕ್ಷ್ಮ ಪ್ರದೇಶಗಳನ್ನು ಆಯೋಗದ ಅಧಿಕಾರಿಗಳು ಗುರುತಿಸಿದ್ದಾರೆ.
ರಾಜ್ಯದಲ್ಲಿ 81 ಆರ್ಥಿಕ ಸೂಕ್ಷ್ಮ ವಲಯಗಳಿದ್ದು, ಇದರಲ್ಲಿ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ 52 ಆರ್ಥಿಕ ಸೂಕ್ಷ್ಮ ಸ್ಥಳಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ಗುರುತಿಸಿದ್ದಾರೆ. ಹೆಚ್ಚಿನ ಸ್ಥಳಗಳನ್ನು ಅಧಿಕಾರಿಗಳು ಇನ್ನೂ ಪಟ್ಟಿ ಮಾಡುತ್ತಲೇ ಇದ್ದಾರೆ. ಈ ಪ್ರದೇಶಗಳಲ್ಲಿ ಹೆಚ್ಚಿನ ನಗದು, ಒಡವೆ ಮತ್ತು ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ಈ ಸ್ಥಳಗಳು ಚಿಕ್ಕ ಘಟಕಗಳಾಘಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಪ್ರಸ್ತುತ ಈ ಸ್ಥಳಗಳಿಂದ ನಗದು ವಶಪಡಿಸಿಕೊಳ್ಳುವಿಕೆ ಹೆಚ್ಚುತ್ತಿದೆ. ಗುರುತಿಸಲಾದ 52 ಸ್ಥಳಗಳು ಆರ್ಥಿಕ ಸ್ತರಗಳಿಗೆ ಸೀಮಿತವಾಗಿರದೆ ಜನಸಾಂದ್ರತೆಯನ್ನೂ ಹೊಂದಿದೆ. ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಆರ್ಥಿಕವಾಗಿ ಸೂಕ್ಷ್ಮವೆಂದು ಗುರುತಿಸಲಾಗಿದ್ದು, ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ನಿಯೋಜಿತ ಏಜೆನ್ಸಿಗಳು ಗಸ್ತು ಮತ್ತು ಜಾಗರೂಕತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
*ಬೆಂಗಳೂರಿಗೆ ವಿಶೇಷ ಮೊಬೈಲ್ ಸ್ಕ್ವಾಡ್*
ಮೊದಲ ಬಾರಿಗೆ, ಬೆಂಗಳೂರಿಗೆ ವಿಶೇಷ ಮೊಬೈಲ್ ಸ್ಕ್ವಾಡ್‌ಗಳನ್ನು ಯೋಜಿಸಲಾಗಿದೆ. ಇವುಗಳು 200 ಫ್ಲೈಯಿಂಗ್ ಸ್ಕ್ವಾಡ್‌ಗಳು ಮತ್ತು 130 ಚೆಕ್‌ಪೋಸ್ಟ್ ತಂಡಗಳನ್ನು ಹೊರತುಪಡಿಸಿ, ಜಿಎಸ್‌ಟಿ, ಕೇಂದ್ರೀಯ ಅಬಕಾರಿ, ಪೊಲೀಸ್, ಸಾರಿಗೆ, ಆದಾಯ ತೆರಿಗೆ ಮತ್ತು ಇತರ ವಿಶೇಷ ತಂಡಗಳನ್ನು ಒಳಗೊಂಡಿರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಮುಖ್ಯ ಚುನಾವಣಾ ಆಯುಕ್ತರು ಕರ್ನಾಟಕದಲ್ಲಿ ಸಾಕಷ್ಟು ಹಣಕಾಸು ತೊಡಗಿಸಿಕೊಂಡಿರುವುದನ್ನು ಗಮನಿಸಿರುವುದರಿಂದ, ಜಾಗೃತರಾಗಿರಲು ಕ್ಷೇತ್ರಗಳು ಮತ್ತು ಸ್ಥಳವಾರು ನಮ್ಮ ಕಾರ್ಯತಂತ್ರಗಳನ್ನು ಬದಲಾಯಿಸುತ್ತಿದ್ದೇವೆ. ಬೆಂಗಳೂರು ಹೊರವಲಯದಲ್ಲಿರುವ ಕೇವಲ ಏಳು ಕ್ಷೇತ್ರಗಳಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ ಶೇ.400ರಷ್ಟು ದಾಳಿ ನಡೆದಿದೆ" ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಥಿಕವಾಗಿ ಸೂಕ್ಷ್ಮ ಸ್ಥಳಗಳ ಪಟ್ಟಿಯು ಏರಿಳಿತಗೊಳ್ಳುತ್ತಲೇ ಇರುತ್ತದೆ. ಪ್ರತಿದಿನವೂ ಇದನ್ನು ಮಾನಿಟೈಜ್ ಮಾಡಲಾಗುತ್ತದೆ. ನಮ್ಮ ತಂಡಗಳು ನಿರಂತರವಾಗಿ ಸಂಚರಿಸುತ್ತಿರುತ್ತವೆ. ಜನರೊಂದಿಗೆ ಮಾತುಕತೆ ನಡೆಸುತ್ತಿರುತ್ತವೆ. ರಾತ್ರಿ ವೇಳೆ ಮಾತ್ರವಲ್ಲದೇ ಹಗಲಿನಲ್ಲೂ ವಾಹನಗಳ ತಪಾಸಣೆಯೂ ತೀವ್ರಗೊಂಡಿದೆ ಎಂದು ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications