Narayana Murthy: 70 ಗಂಟೆ ಕೆಲಸ ಚರ್ಚೆ ಮತ್ತೆ ಮುನ್ನೆಲೆಗೆ: ದೇಶದಲ್ಲಿ ಅವರೊಬ್ಬರಿಂದಲೇ ಸಾಧ್ಯ ಎಂದ ನಾರಾಯಣ ಮೂರ್ತಿ!
Narayana Murthy: ಭಾರತದ ಉದ್ಯೋಗಿಗಳು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು 100 ಗಂಟೆ ಕೆಲಸ ಮಾಡಿದರೂ ಕಡಿಮೆ ಎಂದು ಕೆಲವು ಉದ್ಯಮಿಗಳು ಈಚೆಗೆ ಹೇಳಿದ್ದರು. ಈ ಹೇಳಿಕೆಗಳು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ನಡುವೆ ಇನ್ಫೋಸಿಸ್ ಸಂಸ್ಥೆಯು ವಾರಕ್ಕೆ 70 ಗಂಟೆಗೂ ಹೆಚ್ಚು ಕೆಲಸ ಮಾಡುವವರಿಗೆ ಸಂದೇಶಗಳನ್ನು ಕಳುಹಿಸುತ್ತಿದೆ ಎನ್ನುವ ವಿಚಾರವೂ ಚರ್ಚೆಯಾಗಿತ್ತು. ನಾರಾಯಣ ಮೂರ್ತಿ ಅವರು ಮನಸ್ಸು ಬದಲಾಯಿಸಿಕೊಂಡಿದ್ದಾರೆ ಅಂತಲೇ ತುಂಬಾ ಜನ ಭಾವಿಸಿದ್ದರು. ಆದರೆ, ಇದೀಗ ಅವರು ಮತ್ತೆ 70 ಗಂಟೆಯ ವಿಚಾರದಲ್ಲಿ ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ ಸಂಸದ ತೇಜಸ್ವಿ ಸೂರ್ಯ ಅವರು ಮಾಡಿರುವ ಟ್ವೀಟ್.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು, 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಭಾರೀ ಟ್ರೋಲ್‌ಗೆ ಒಳಗಾಗಿದ್ದರು. ಇನ್ನೊಂದಷ್ಟು ಉದ್ಯಮಿಗಳು 100 ಗಂಟೆ ಕೆಲಸ ಮಾಡಬೇಕು ಎಂದು ಹೇಳಿರುವುದೂ ಸಹ ಇದೆ. ಆದರೆ ಈ ವಿಚಾರಗಳೆಲ್ಲವೂ ಚರ್ಚೆಯಾಗಿ ಮುಗಿದು ಹೋಗಿದೆ ಅಂತಲೇ ಜನ ಭಾವಿಸಿದ್ದರು. ಅದರಲ್ಲೂ ಈಚೆಗೆ ಇನ್ಫೋಸಿಸ್‌ನಲ್ಲೇ ಉದ್ಯೋಗಿಗಳಿಗೆ ಪರ್ಸನಲ್ ಲೈಫ್ ಹಾಗೂ ವರ್ಕ್ ಲೈಫ್ ಬ್ಯಾಲೆನ್ಸ್‌ನ ಬಗ್ಗೆ ಸೆಷೆನ್‌ಗಳು ನಡೆಯುತ್ತಿದ್ದು. ಪರವಾಗಿಲ್ಲ ನಾರಾಯಣ ಮೂರ್ತಿ ಅವರು ಸಹ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ತೇಜಸ್ವಿ ಸೂರ್ಯ ಅವರು ನಾರಾಯಣ ಮೂರ್ತಿ ಅವರೊಂದಿಗೆ ಚರ್ಚಿಸಿದ ವಿಷಯವನ್ನು ಹಂಚಿಕೊಂಡಿದ್ದು. ಮತ್ತೆ 70 ಗಂಟೆ ಕೆಲಸ ವಿಚಾರ ಮತ್ತೆ ಚರ್ಚೆ ಆಗುತ್ತಿದೆ.

ಈಚೆಗೆ ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗುವಾಗ ಪ್ರಸಿದ್ಧ ನಾರಾಯಣ ಮೂರ್ತಿ ಅವರೊಂದಿಗೆ ಸ್ಫೂರ್ತಿದಾಯಕ ಸಂಭಾಷಣೆ ನಡೆಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾರಾಯಣ ಮೂರ್ತಿ ಅವರು, ಭಾರತೀಯ ಐಟಿ ಸೇವಾ ವಲಯದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿ, ಅದನ್ನು ಜಾಗತಿಕ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಅವರು ಇನ್ಫೋಸಿಸ್ ಮೂಲಕ ಅಕ್ಷರಶಃ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಸಂಪತ್ತನ್ನು ಸೃಷ್ಟಿಸಿದ್ದಾರೆ.
AI ನಿಂದ ಉತ್ಪಾದನೆಯವರೆಗೆ, ನಮ್ಮ ನಗರಗಳ ಸ್ಥಿತಿಯಿಂದ ನಮ್ಮ ಯುವಕರನ್ನು ನೈತಿಕತೆ ಮತ್ತು ನಾಯಕತ್ವದವರೆಗೆ ಕೌಶಲ್ಯ ಹೆಚ್ಚಿಸುವ ವಿಷಯಗಳ ಬಗ್ಗೆ ಅವರಿಂದ ಕಲಿಯಲು 2 ಗಂಟೆಗಳ ಮಾಸ್ಟರ್‌ಕ್ಲಾಸ್ ಇದಾಗಿತ್ತು. ನಮ್ಮ ಸಂಭಾಷಣೆಯ ಕೊನೆಯಲ್ಲಿ ನಾನು ಅವರ ವಾರಕ್ಕೆ 70 ಗಂಟೆಗಳ ಗುರಿಯನ್ನು ತಲುಪಲು ಶ್ರಮಿಸುತ್ತೇನೆ ಎಂದು ಹಾಸ್ಯಮಯವಾಗಿ ಹೇಳಿದೆ ಎಂದು ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ. ಇದಕ್ಕೆ ನಾರಾಯಣ ಮೂರ್ತಿ ಅವರು ನಕ್ಕರು ಮತ್ತು "ನನಗೆ ತಿಳಿದಿರುವ ಏಕೈಕ ವ್ಯಕ್ತಿ ಬಹುಶಃ ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ" ಎಂದು ಹೇಳಿದರು. ಅವರು ಪ್ರಧಾನಿ ನರೇಂದ್ರ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ ಎನ್ನಲಾಗಿದೆ.












Click it and Unblock the Notifications