ಬೆಂಗಳೂರಿನಲ್ಲಿ ಪಂಜಾಬಿ ಶೈಲಿಯ ಆಹಾರ ಸವಿಯಲು ಇಲ್ಲಿದೆ ಬೆಸ್ಟ್ ಹೋಟೆಲ್‌ಗಳ ಪಟ್ಟಿ
ಬೆಂಗಳೂರಿನಲ್ಲಿ ಪಂಜಾಬಿ ಶೈಲಿಯ ಆಹಾರ ದೊರಕುವ ಹೋಟೆಲ್‌ಗಳಿಗೇನು ಕಮ್ಮಿ ಇಲ್ಲ. ಚಿಕನ್ ಟಿಕ್ಕಾ ಮಸಾಲಾ, ಬಟರ್ ಚಿಕನ್‌ನಿಂದ ಹಿಡಿದು ಬಿರಿಯಾನಿಯವರೆಗೆ ಪಂಜಾಬಿ ಶೈಲಿಯ ವಿವಿಧ ಖಾದ್ಯಗಳು ಬೆಂಗಳೂರಿನಲ್ಲಿ ಲಭ್ಯವಿದೆ.
ಬೆಂಗಳೂರಿನಲ್ಲಿ ಪಂಜಾಬಿ ಶೈಲಿಯ ಥಾಲಿ ಅಥವಾ ಇತರ ಪಂಜಾಬಿ ಖಾದ್ಯಗಳನ್ನು ಸವಿದರೆ ಅದರಲ್ಲಿ ಮಸಾಲೆ ಹೆಚ್ಚಿರುತ್ತದೆ. ಹೀಗಾಗಿ ಪಂಜಾಬಿ ಪಾಕಪದ್ಧತಿ ಬಳಸಿಕೊಂಡು ರುಚಿಕರವಾದ ಆಹಾರ ತಯಾರಿಸುವ ಬೆಂಗಳೂರಿನಲ್ಲಿ ಪಂಜಾಬಿ ಖಾದ್ಯವನ್ನು ಸವಿಯಲು ಕೆಲವು ಸ್ಥಳಗಳು ಇಲ್ಲಿವೆ.

1. ಪಂಜಾಬಿ ಪ್ಯೂರ್ ವೆಜ್, ಚಿಕ್ಕಪೇಟೆ ರಸ್ತೆ
ಚಿಕ್ಕಪೇಟೆಯಲ್ಲಿರುವ ಈ ಪಂಜಾಬಿ ಪ್ಯೂರ್ ವೆಜ್ ಸುಮಾರು ಮೂವತ್ತು ವರ್ಷಗಳಿಂದ ಗ್ರಾಹಕರಿಗೆ ರುಚಿ-ರುಚಿಯಾದ ಪಂಜಾಬಿ ಆಹಾರವನ್ನು ನೀಡುತ್ತಿದೆ. ಚಿಕ್ಕಪೇಟೆಯಲ್ಲಿ ಶಾಪಿಂಗ್ ಮುಗಿಸಿ ಈ ಹೋಟೆಲ್‌ಗೆ ಭೇಟಿ ನೀಡಿ ಹೊಟ್ಟೆ ತುಂಬಾ ತಿಂದರೆ ನಿಮ್ಮ ಆ ದಿನ ಪರಿಪೂರ್ಣವಾಗುತ್ತದೆ. ಚಿಕ್ಕಪೇಟೆಯಲ್ಲಿ ಸಿಗುವ ಪ್ಯೂರ್ ವೆಜ್ ಹೋಟೆಲ್‌ಗಳ ಪೈಕಿ ಈ ಹೋಟೆಲ್ ಕೂಡ ಒಂದಾಗಿದೆ. ಕುಟುಂಬಸ್ಥರೊಂದಿಗೆ ಊಟಕ್ಕೆ ತೆರಳು ಇದೊಂದು ಸೂಕ್ತವಾದ ಸ್ಥಳವಾಗಿದ್ದು, ಬೆಳಗ್ಗೆಯಿಂದ ಸಂಜೆ 4 ಗಂಟೆ ವರೆಗೆ ತೆರೆದಿರುತ್ತದೆ. ಮತ್ತೆ ಸಂಜೆ 7ರಿಂದ ಪ್ರಾರಂಭವಾಗುತ್ತದೆ.
2. ಬಾಬಿಸ್ ಪಂಜಾಬಿ ಧಾಬಾ
ಬಾಬಿಸ್ ಪಂಜಾಬಿ ಧಾಬಾ ಬೆಂಗಳೂರಿನ ಪಂಜಾಬಿ ಶೈಲಿಯ ಪ್ರಸಿದ್ಧ ಹೋಟೆಲ್‌ಗಳಲ್ಲಿ ಒಂದಾಗಿದೆ. ಹಲಸೂರು ಲೇಕ್ ಸಮೀಪವಿರುವ ಗುರುದ್ವಾರವು ಸುಮಾರು 35 ವರ್ಷಗಳ ಹಿಂದೆ ಭಕ್ತರಿಗೆ ಘರ್ ಕಾ ಪಂಜಾಬಿ ಖಾನವನ್ನು ಬಡಿಸಲ ಆಹ್ವಾನಿಸಿತು. ಅಂದಿನಿಂದ ಬೆಂಗಳೂರಿನಲ್ಲಿ ಈ ಸ್ಥಳ ಪ್ರಸಿದ್ಧಿ ಪಡೆದಿದೆ. ಸದ್ಯ ಈ ಹೋಟೆಲ್ ನಾಗಸಂದ್ರಲ್ಲಿದೆ. ಬೆಂಗಳೂರಿನಲ್ಲಿ ಪಂಜಾಬಿ ಶೈಲಿಯ ಆಹಾರವನ್ನು ಟ್ರೈ ಮಾಡಲು ಇದೊಂದು ಉತ್ತಮವಾದ ಸ್ಥಳವಾಗಿದೆ. ಊಟದ ನಂತರ ಇಲ್ಲಿ ಸಿಗುವ ಲಸ್ಸಿಯನ್ನು ಮಿಸ್ ಮಾಡಬೇಡಿ. ಇಲ್ಲಿನ ಲಸ್ಸಿ ರುಚಿಗೆ ಖಾಯಂ ಗ್ರಾಹಕರ ಸಾಲೇ ಇದೆ. ನಾಗಸಂದ್ರ ಮೆಟ್ರೋ ನಿಲ್ದಾಣದ ಸಮೀಪವೇ ಈ ಹೋಟೆಲ್ ಸಿಗಲಿದ್ದು, ಸುಲಭವಾಗಿ ತಲುಪಬಹುದುದಾಗಿದೆ.

3. ಪಂಜಾಬ್ ಬೀಟ್
ಪಂಜಾಬ್ ಬೀಟ್ ಸಸ್ಯಾಹಾರಿಗಳಿಗೆ ಇದೊಂದು ಸೂಕ್ತವಾದ ಸ್ಥಳ. ಇಲ್ಲಿ ನೀವು ಸಸ್ಯಾಹಾರಿ ಪಂಜಾಬಿ ಖಾದ್ಯಗಳು ಬಹು ಆಯ್ಕೆ ನಿಮಗೆ ಸಿಗುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಪಂಜಾಬ್ ಬೀಟ್ ಉತ್ತಮ ಆಯ್ಕೆ. ಈ ಹೋಟೆಲ್ ಸುಂದರವಾಗಿದ್ದು, ರಾತ್ರಿ ವೇಳೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಪಂಜಾಬಿ ಹಳ್ಳಿಗಳ ನಿಜವಾದ ಕರಕುಶಲ ವಸ್ತುಗಳಿಂದ ಅಲಂಕಾರ ಮಾಡಲಾಗಿದೆ.
4. ಸರ್ದಾರ್ಜಿ ಲಂಡನ್‌ವಾಲಿ
ಸರ್ದಾರ್ಜಿ ಲಂಡನ್‌ವಾಲಿಯು ಪಂಜಾಬಿ ರೆಸ್ಟೋರೆಂಟ್ ಉತ್ತರ ಭಾರತ ಶೈಲಿಯ ಖಾದ್ಯಗಳಿಗೆ ಕೋರಮಂಗಲದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ. ಕೋರಮಂಗಲದ 7ನೇ ಬ್ಲಾಕ್‌ನಲ್ಲಿರುವ ಈ ರೆಸ್ಟೋರೆಂಟ್‌ನಲ್ಲಿ ಪಂಜಾಬಿ, ಉತ್ತರ ಭಾರತ ಶೈಲಿಯ ಊಟಗಳಷ್ಟೇ ಅಲ್ಲದೇ ವಿವಿಧ ರೀತಿಯ ಬಿರಿಯಾನಿಗಳು ಹಾಗೂ ಚೈನೀಸ್ ಖಾದ್ಯಗಳು ಕೂಡ ಲಭ್ಯವಿದೆ. ಈ ಹೋಟೆಲ್ ತಡರಾತ್ರಿಯವರೆಗೂ ತೆರೆದಿರುತ್ತದೆ.

5. ಪಂಜಾಬಿ ರಸೋಯಿ
ಬಜೆಟ್ ಫ್ರೆಂಡ್ಲಿಯಾಗಿ ವಿವಿಧ ಬಗೆಯ ಪಂಜಾಬಿ ಖಾದ್ಯವನ್ನು ಸವಿಯಲು ಇಂದಿರಾನಗರದಲ್ಲಿರುವ ಪಂಜಾಬಿ ರೆಸ್ಟೋರೆಂಟ್‌ಗೆ ಭೇಟಿ ನೀಡಿ. ಇಲ್ಲಿ ಲಸ್ಸಿನಿಂದ ಹಿಡಿದು ಬಟರ್ ಚಿಕನ್ ವರೆಗೆ ಪ್ರತಿಯೊಂದು ಖಾದ್ಯವು ಕೂಡ ರುಚಿಕರವಾಗಿರುತ್ತದೆ. ಇಲ್ಲಿಗೆ ಬರುವ ಖಾಯಂ ಗ್ರಾಹಕರ ಪ್ರಮುಖ ಆಯ್ಕೆಗಳೆಂದರೆ ಕಲ್ಮಿ ಕಬಾಬ್, ಬಟರ್ ಚಿಕನ್, ಗಜ್ಜರ್ ಕಾ ಹಲ್ವಾ, ಮಕ್ಕಿ ಕಿ ರೋಟಿ ಮತ್ತು ಪನೀರ್ ಆಚಾರಿ. ಬೆಂಗಳೂರಿನಲ್ಲಿ ಅತ್ಯಂತ ರುಚಿಕರವಾದ ಉತ್ತರ ಭಾರತದ ಶೈಲಿಯ ಹೋಟೆಲ್‌ಗಳ ಪೈಕಿ ಪಂಜಾಬಿ ರಸೋಯಿ ಪ್ರಮುಖವಾಗಿದೆ. ಈ ಹೋಟೆಲ್ ಇಂದಿರಾ ನಗರದ ಮೊದಲನೇ ಹಂತದಲ್ಲಿದೆ.
6. ಗ್ಯಾನಿ ದಾ ಪಂಜಾಬಿ ಧಾಬಾ
ಉತ್ತರ ಭಾರತ ಮತ್ತು ಪಂಜಾಬಿ ಖಾದ್ಯವನ್ನು ಸವಿಯಲು ಒಮ್ಮೆ ಇಲ್ಲಿಗೆ ಭೇಟಿ ನೀಡಿ. ಬಿಟಿಎಂ ಲೇಔಟ್‌ನಲ್ಲಿನ ಗದ್ದಲದ ನಡುವೆ ಧಾಬಾ ವಾತಾವರಣವನ್ನು ಅನುಭವಿಸುತ್ತಾ. ಇಲ್ಲಿನ ಖಾದ್ಯ ರುಚಿ ಸವಿಯಿರಿ. ಪರಾಠಾ ಎನ್ನುವ ರುಚಿಕರವಾದ ಖಾದ್ಯವನ್ನು ಸವಿಯಲು ಇಲ್ಲಿಗೆ ಭೇಟಿ ನೀಡುವುದನ್ನು ಮರೆಯದಿರಿ. ಪರಾಠಾವನ್ನು ಸವಿಯಲು ಇದಕ್ಕಿಂತ ಸೂಕ್ತವಾದ ಸ್ಥಳ ಇನ್ನೊಂದಿಲ್ಲ.

7. ಚುಲ್ಹಾ ಚೌಕಿ ದಾ ಧಾಬಾ
ಬೆಂಗಳೂರಿನಲ್ಲಿ ಪಂಜಾಬಿ ಶೈಲಿಯ ಆಹಾರವನ್ನು ಟ್ರೈ ಮಾಡಲು ಪ್ರಸಿದ್ಧ ಸ್ಥಳಗಳಲ್ಲಿ ಚುಲ್ಹಾ ಚೌಕಿ ದಾ ಧಾಬಾ ಒಂದಾಗಿದೆ. ಧಾಬಾ ಶೈಲಿಯ ಆಹಾರದ ಜೊತೆಗೆ ಉತ್ತರ ಭಾರತದ ಶುದ್ಧ ದೇಸಿ ಪಾಕಪದ್ಧತಿಯನ್ನು ಬಳಸಿಕೊಂಡು ಇಲ್ಲಿ ಆಹಾರ ತಯಾರಿಸಲಾಗುತ್ತದೆ. ಇಲ್ಲಿನ ಮರದ ಪೀಠೋಪಕರಣಗಳು, ಬೆಳಕು ಮತ್ತು ಹಳ್ಳಿಯ ಶೈಲಿಯ ವಾತಾವರಣ ನಿಮಗೆ ಮನೆಯಂತೆ ಭಾಸವಾಗುತ್ತದೆ. ಬೆಂಗಳೂರಿನಲ್ಲಿ ವಿವಿಧ ಶಾಖೆ ಹೊಂದಿರುವ ಈ ರೆಸ್ಟೋರೆಂಟ್ ಪಂಜಾಬಿ ಖಾದ್ಯಗಳಿಗೆ ಹೆಸರುವಾಸಿಯಾದ ಸ್ಥಳವಾಗಿದೆ.












Click it and Unblock the Notifications