ಬೆಂಗಳೂರು ಗ್ರಾಮಾಂತರಕ್ಕೂ ಬಂಪರ್: ಈ ಪ್ರದೇಶಕ್ಕೆ 68 ಹೊಸ ಗ್ರಾಮಗಳ ಸೇರ್ಪಡೆ, ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ!

ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದೀಗ ಬೆಂಗಳೂರು ಮಾತ್ರವಲ್ಲ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭೂಮಿ ಹಾಗೂ ಪ್ರಾಪರ್ಟಿ ಬೆಲೆ ಹೆಚ್ಚಳ ಕಂಡಿದೆ. ಬೆಂಗಳೂರು ನಂತರ ರಾಮನಗರ ಪ್ರದೇಶವನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲಾಗಿದೆ. ಅಲ್ಲದೇ ಬೆಂಗಳೂರು ಗ್ರಾಮಾಂತರ ಪ್ರದೇಶವನ್ನು ಬೆಂಗಳೂರು ಉತ್ತರ ಎಂದು ಬದಲಾಯಿಸುವ ನಿಟ್ಟಿನಲ್ಲೂ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಇದೀಗ ಬೆಂಗಳೂರು ಸಮೀಪದ ಪ್ರದೇಶಗಳಿಗೂ ಬಂಪರ್ ಬಂದಿದೆ. ಹೊಸ ಪ್ರದೇಶಗಳು ಸೇರ್ಪಡೆ ಆಗಿವೆ. ಅದರ ವಿವರ ಇಲ್ಲಿ ನೋಡೋಣ.

ಬೆಂಗಳೂರು ಆಡಳಿತವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಆಡಳಿತ) ರಚನೆಯಾದ ಮೇಲೆ ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇದೀಗ ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಗುಡ್‌ನ್ಯೂಸ್‌ನೊಂದಿಗೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ಭೂಮಿಗೂ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ.

68 Villages Added to Rural Bengaluru Land Prices Poised for Major Jump

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ 68 ಗ್ರಾಮಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಬೆಂಗಳೂರು ನಂತರ ಬೆಂಗಳೂರು ಸಮೀಪದ ಜಿಲ್ಲೆಗಳಲ್ಲೂ ಆಯಾ ಜಿಲ್ಲೆಗಳ ಬ್ರ್ಯಾಂಡ್ ವ್ಯಾಲ್ಯೂ ಬಳಸಿಕೊಂಡು ಭೂಮಿ ಬೆಲೆ ಹೆಚ್ಚಳವಾಗುವುದಕ್ಕೆ ಸರ್ಕಾರವು ಪರೋಕ್ಷ ವೇದಿಕೆ ಕಲ್ಪಿಸಿದೆ. 68 ಗ್ರಾಮಗಳನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಲು ಸೆಪ್ಟೆಂಬರ್‌ 9ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಅಲ್ಲದೇ ಆಕ್ಷೇಪಣೆಗೆ ಅವಕಾಶ ಕೊಡಲಾಗಿತ್ತು. ಇದೀಗ ಈ ಎಲ್ಲಾ ಪ್ರಕ್ರಿಯೆಗಳ ನಂತರ ಅಕ್ಟೋಬರ್‌ 27ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಮಾಗಡಿ ತಾಲ್ಲೂಕಿನಿಂದ ನೆಲಮಂಗಲ ತಾಲ್ಲೂಕಿಗೆ ಸೇರ್ಪಡೆಯಾಗುತ್ತಿರುವ ಗ್ರಾಮಗಳ ವಿವರ: ನಾಗನಹಳ್ಳಿ, ಮುಮ್ಮೇನಹಳ್ಳಿ, ಬೊಮ್ಮನಹಳ್ಳಿ, ತೊರೆಚನ್ನೋಹಳ್ಳಿ, ವೋಟಗೊಂಡನಹಳ್ಳಿ, ಗೊಲ್ಲಹಳ್ಳಿ, ಕೊತ್ತಗೊಂಡನಹಳ್ಳಿ, ಮರೇನಹಳ್ಳಿ, ಗರ್ಗೇಶ್ವರಪುರ, ಕೋಡಿಹಳ್ಳಿ, ಪೆಮ್ಮನಹಳ್ಳಿ, ಹಕ್ಕಿನಾಳು, ಮರಿಕುಪ್ಪೆ, ಬಸವನೇನಹಳ್ಳಿ, ಹೊಸಹಳ್ಳಿ, ಬಾಣವಾಡಿ, ಹಾಲೂರು, ಶಿರಗನಹಳ್ಳಿ, ಮಲ್ಲಾಪುರ, ಮೂಗನಹಳ್ಳಿ, ಬಿಟ್ಟಸಂದ್ರ, ಹೇಮಾಪುರ, ರಂಗೇನಹಳ್ಳಿ, ಕೆಂಪಾಪುರ, ತಟ್ಟೇಕೆರೆ, ಲಿಂಗೇನಹಳ್ಳಿ, ತಿಮ್ಮಸಂದ್ರ, ರಾಮನಹಳ್ಳಿ, ಗೊರೂರು, ರಂಗನಬೆಟ್ಟ, ಮುಪ್ಪೇನಹಳ್ಳಿ, ಸೋಲೂರು, ಕಲ್ಯಾಣಪುರ, ತೂಬರಪಾಳ್ಯ, ಎಣ್ಣಿಗೆರೆ, ಚಿಕ್ಕನಹಳ್ಳಿ, ವಡ್ಡರಹಳ್ಳಿ, ಗಂಗೇನಪುರ, ಕನಕೇನಹಳ್ಳಿ, ಭೈರಾಪುರ, ಮಲ್ಲಿಕಾರ್ಜುನ ಪಾಳ್ಯ, ಲಕ್ಕೇನಹಳ್ಳಿ, ಬೀರವಾರ, ಕೋರಮಂಗಲ, ಕನ್ನಸಂದ್ರ, ಪರ್ವತಪಾಳ್ಯ, ಗುಡೇಮಾರನಹಳ್ಳಿ, ಉಡುಕುಂಟೆ, ಮೈಲನಹಳ್ಳಿ, ಪಾಲನಹಳ್ಳಿ, ಶಾಂತಪುರ, ಕಲ್ಲಹಟ್ಟಿಪಾಳ್ಯ, ಭೈರಸಂದ್ರ, ಮಲ್ಲೂರು, ಭಂಟರಕುಪ್ಪೆ, ಚನ್ನೋಹಳ್ಳಿ, ಅರಿಶಿನ ಕುಂಟೆ, ಊದ್ದಂಡಳ್ಳಿ, ಚಿಕ್ಕಸೋಲೂರು, ಹ್ಯಾಗನಹಳ್ಳಿ, ಬ್ಯಾಡರಹಳ್ಳಿ, ಕೂಡ್ಲುರು, ಸೋಮೇದೇವನಹಳ್ಳಿ, ಒಂಭತ್ತನಕುಂಟೆ, ಕುಪ್ಪೇಮಾಳ, ತಿರುಮಲಾಪುರ ಹಾಗೂ ಹೊಸೂರು ಪ್ರದೇಶಗಳು ಹೊಸದಾಗಿ ಸೇರ್ಪಡೆ ಆಗುತ್ತಿವೆ. ಈ ಪ್ರದೇಶಗಳ ಸೇರ್ಪಡೆಯಿಂದ ಈ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+