ಬೆಂಗಳೂರು : ಕತ್ತು ಹಿಸುಕಿ ಮನೆಯಲ್ಲಿ ವೃದ್ಧನ ಹತ್ಯೆ
ಬೆಂಗಳೂರು, ಮೇ 28 : ಬೆಂಗಳೂರಿನಲ್ಲಿ ವೃದ್ಧನನ್ನು ಹತ್ಯೆ ಮಾಡಲಾಗಿದೆ. ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಬಸವೇಶ್ವರ ನಗರದ ವಾಟರ್ ಟ್ಯಾಂಕ್ ಬಳಿಯ ಮನೆಯಲ್ಲಿ ನಂಜುಡಪ್ಪ (66) ಅವರನ್ನು ಹತ್ಯೆ ಮಾಡಲಾಗಿದೆ. ಕತ್ತು ಹಿಸುಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದು, ಸೋಮವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದೆ.
ನಂಜುಡಪ್ಪ ಅವರು ಬಿಎಚ್‌ಇಎಲ್‌ನ ನಿವೃತ್ತ ಉದ್ಯೋಗಿಯಾಗಿದ್ದರು. ಸೋಮವಾರ ಬೆಳಗ್ಗೆ ಮನೆಗೆ ಆಗಮಿಸಿದ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪರಿಚಿತರು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಒಂಟಿ ಮಹಿಳೆ ಕೊಲೆ : ಕೈ-ಕಾಲು ಕಟ್ಟಿಹಾಕಿ ಒಂಟಿ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ರಾಮನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ. ಸರಸ್ವತಿ ಎಂಬುವವರು ಕೊಲೆಯಾದ ದುರ್ದೈವಿ. ಕುಟುಂಬದಿಂದ ದೂರವಾಗಿದ್ದ ಸರಸ್ವತಿ ಒಂಟಿಯಾಗಿ ನೆಲೆಸಿದ್ದರು. ಮೂರು ದಿನದ ಹಿಂದೆ ಕೊಲೆಯಾಗಿರುವ ಸಾಧ್ಯತೆ ಇದ್ದು, ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯಲ್ಲಿ ಮದ್ಯಪಾನ ಮಾಡಿ ನಂತರ ಕೊಲೆ ಮಾಡಲಾಗಿದೆ. ಪರಿಚಿತರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಇಂದು ಮನೆಯಿಂದ ಕೆಟ್ಟವಾಸನೆ ಬರಲು ಆರಂಭವಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾಮನಗರ ಟೌನ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications