Get Updates
Get notified of breaking news, exclusive insights, and must-see stories!

ಶಿಕ್ಷಕಿಯಿಂದ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು, ನ. 22 : ಮಗುವಿನ ಮೇಲೆ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆರ್‌.ಟಿ.ನಗರದ ಶಾಲೆಯೊಂದರಲ್ಲಿ ಆರು ವರ್ಷ ಪ್ರಾಯದ ಬಾಲಕಿಗೆ ಶಿಕ್ಷಕಿಯೊಬ್ಬರು ಲೈಂಗಿಕ ಕಿರುಕುಳ ನೀಡಿ ಬಗ್ಗೆ ದೂರು ದಾಖಲಾಗಿದೆ.

ಶಾಲೆಯಲ್ಲಿ ದೌರ್ಜನ್ಯ ನಡೆದಿದೆ ಎಂದು ಬಾಲಕಿಯ ಪೋಷಕರು ಆರ್.ಟಿ.ನಗರ ಪೊಲೀಸರಿಗೆ ಶುಕ್ರವಾರ ಸಂಜೆ ದೂರು ನೀಡಿದ್ದಾರೆ. ಬಾಲಕಿಯ ಮೇಲೆ ದೌರ್ಜನ್ಯ ನಡೆದಿರುವುದು ವೈದ್ಯಕೀಯಲ್ಲಿ ಸಾಬೀತಾಗಿದೆ. ಸಂಜೆ 5 ಗಂಟೆಗೆ ಬಾಲಕಿಯನ್ನು ನಿಮ್ಹಾನ್ಸ್‌ಗೆ ದಾಖಲು ಮಾಡಲಿದ್ದಾರೆ.

Bangalore Rape

ಆರ್‌.ಟಿ.ನಗರ ಪೊಲೀಸರು ಬಾಲಕಿಯನ್ನು ಕೌನ್ಸಿಲಿಂಗ್‌ಗೆ ಕರೆದುಕೊಂಡು ಹೋಗಿದ್ದು, ನಂತರ ಶಾಲೆಯ ಶಿಕ್ಷಕಿಯನ್ನು ಬಂಧಿಸುವ ಸಾಧ್ಯತೆ ಇದೆ. ಪೋಷಕರು ನೀಡಿರುವ ದೂರಿನಲ್ಲಿ ಶಿಕ್ಷಕಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶನಿವಾರ ಬೆಳಗ್ಗೆ ಶಾಲೆಯ ಮುಂಭಾಗದಲ್ಲಿ ಪೋಷಕರು ಸೇರಿದಂತೆ, ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣದ ಬಳಿಕ ಶಾಲೆಯ ಬಳಿ ಹೆಚ್ಚಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಾಲೆಗೆ ಆಡಳಿತ ಮಂಡಳಿ ಇಂದು ರಜೆ ಘೋಷಿಸಿದೆ.

ಶಾಲೆಯಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು

* ಜುಲೈ ತಿಂಗಳಿನಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣದ ಬೆಂಗಳೂರಿನ ವಿಬ್‌ಗಯಾರ್ ಶಾಲೆಯಲ್ಲಿ ಬೆಳಕಿಗೆ ಬಂದಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಮಾರ್ಗಸೂಚಿಯನ್ನು ರೂಪಿಸಿತ್ತು. [ಶಾಲೆಯಲ್ಲಿ ದೌರ್ಜನ್ಯ ಪ್ರಕರಣಗಳು]

* ಉಡುಪಿಯ ಹೆಬ್ರಿ ಸಮೀಪದ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿ‌ನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕನನ್ನು ಹೆಬ್ರಿ ಪೊಲೀಸರು ಬಂಧಿಸಿದ್ದರು. [ಈ ನಿರ್ಧಾರದಿಂದ ಅತ್ಯಾಚಾರ ನಿಲ್ಲುತ್ತಾ?]

* ಬೆಂಗಳೂರಿನಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಲಾಳದ ಮಾರುತಿ ಶಾಲೆಯ ಅತಿಥಿ ಶಿಕ್ಷಕ ಚಂದ್ರಮೌಳಿ (69)ಯನ್ನು ಪೊಲೀಸರು ಬಂಧಿಸಿದ್ದರು.

* ಒಂದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣ ಇಂದಿರಾನಗರ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆಯಲ್ಲಿ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಆರೋಪಿ ಜೈಶಂಕರ್‌ನನ್ನು ಬೈಯಪ್ಪನ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+