ಬೆಂಗಳೂರಿನಲ್ಲೂ ಹನಿಟ್ರ್ಯಾಪ್ ಪ್ರಕರಣ: ಆರೋಪಿಗಳ ಬಂಧನ
ಉದ್ಯಾನನಗರಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರು ಜನರನ್ನು ಬಂಧಿಸುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು, ಏಪ್ರಿಲ್ 1: ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಗಂಗಾಧರ್ ಎಂಬುವವರನ್ನು ಬಲೆಗೆ ಹಾಕಿಕೊಂಡು ನಗನಾಣ್ಯಗಳನ್ನು ದೋಚಿದ್ದ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರಿನ ಬ್ಯಾಟರಾಯನಪುರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೊಂದು ಹನಿಟ್ರ್ಯಾಪ್ ಪ್ರಕರಣವಾಗಿದ್ದು, ಬಂಧಿತರನ್ನು ಮಂಜುನಾಥ್, ಮಹಾದೇವ, ಸ್ವಾಮಿ, ಮಹೇಶ್, ಆಶಾ, ಜ್ಯೋತಿ ಎಂದು ಗುರುತಿಸಲಾಗಿದೆ.[ಮಹಿಳಾ ಸಹಾಯವಾಣಿಗೇ ಅಶ್ಲೀಲ ಕರೆ!]

ತಾವು ಖಾಸಗಿ ಬ್ಯಾಂಕಿನ ಮ್ಯಾನೇಜರ್ ಎಂದು ಗಂಗಾಧರ್ ಅವರನ್ನು ಪರಿಚಯಿಸಿಕೊಂಡಿದ್ದ ಜ್ಯೋತಿ ಮತ್ತವರ ತಂಡ, ಗಂಗಾಧರ್ ಅವರೊಂದಿಗೆ ಫೋನಿನಲ್ಲಿ ಕನಿಷ್ಠ 15 ಬಾರಿ ಮಾತನಾಡಿತ್ತು. ನಂತರ ಬ್ಯಾಂಕ್ ಅಕೌಂಟ್ ತೆರೆಯುವ ಬಗ್ಗೆ ಮಾಹಿತಿ ನೀಡುವುದಾಗಿ ಅವರನ್ನು ಖಾಸಗಿ ಹೊಟೇಲ್ ಒಂದಕ್ಕೆ ಕರೆಸಿಕೊಂಡಿತ್ತು. ವಾಪಸ್ಸಾಗುವಾಗ ಇವರ ಕಣ್ಣಿಗೆ ಬಟ್ಟೆ ಕಟ್ಟಿ ಬಿಡದಿ ಕಡೆಗೆ ಕರೆದೊಯ್ದು, 10 ಲಕ್ಷ ರೂಪಾಯಿ ಹಣ ನೀಡದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆಂದು ಬೆದರಿಕೆ ಹಾಕಲಾಗಿತ್ತು.[ದಂಡುಪಾಳ್ಯ ಗ್ಯಾಂಗ್ ಸದಸ್ಯ ತಿಮ್ಮನ ಬಿಡುಗಡೆಗೆ ಹೈಕೋರ್ಟ್ ಆದೇಶ]
ಇವರ ಬೆದರಿಕೆಗೆ ಹೆದರಿದ ಉದ್ಯಮಿ ತಮ್ಮ ಸ್ನೇಹಿತರ ಬಳಿ ಹಣ ತರಿಸಿಕೊಟ್ಟಿದ್ದರು. ನಂತರ ಅವರನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.[ಬೆಂಗಳೂರು: ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನ]
ವಾಪಾಸ್ಸಾದ ಗಂಗಾಧರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಆರೂ ಜನ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.











Click it and Unblock the Notifications