ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03 : ಹಸಿರು ಮಾರ್ಗದಲ್ಲಿ ಸಂಚಾರ ನಡೆಸುವ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ. ಮುಂದಿನ ತಿಂಗಳಿನಿಂದ ಹಸಿರು ಮಾರ್ಗದಲ್ಲಿ 6 ಕೋಚ್‌ಗಳ ಮೆಟ್ರೋ ರೈಲು ಸಂಚಾರ ನಡೆಸಲಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗ ನಾಗಸಂದ್ರ-ಯಲಚೇನಹಳ್ಳಿ ನಡುವೆ ಸಂಪರ್ಕ ಕಲ್ಪಿಸುತ್ತದೆ. ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಅಕ್ಟೋಬರ್‌ನಿಂದ ಹಸಿರು ಮಾರ್ಗದಲ್ಲಿ 6 ಕೋಚ್‌ಗಳ ರೈಲು ಸಂಚರಿಸಲಿದೆ ಎಂದು ಹೇಳಿದೆ.

2020ರೊಳಗೆ ನಮ್ಮ ಮೆಟ್ರೋ ಮಾರ್ಗಗಳ ಕಾಮಗಾರಿ ಪೂರ್ಣ2020ರೊಳಗೆ ನಮ್ಮ ಮೆಟ್ರೋ ಮಾರ್ಗಗಳ ಕಾಮಗಾರಿ ಪೂರ್ಣ

ಇದುವರೆಗೂ 25 ರೈಲುಗಳನ್ನು 6 ಕೋಚ್ ರೈಲುಗಳಾಗಿ ಪರಿವರ್ತನೆ ಮಾಡಲಾಗಿದೆ. ಆದರೆ, ಅವರು ನೇರಳೆ ಮಾರ್ಗದಲ್ಲಿ ಮಾತ್ರ ಸಂಚಾರ ನಡೆಸುತ್ತಿವೆ. ವಿದ್ಯುತ್ ವ್ಯವಸ್ಥೆಯ ಕಾರಣದಿಂದಾಗಿ ಹಸಿರು ಮಾರ್ಗದಲ್ಲಿ ಸಂಚಾರ ಆರಂಭಿಸಿರಲಿಲ್ಲ.

ಫ್ಲವರ್ ಶೋ: ನಮ್ಮ ಮೆಟ್ರೋಗೆ ಬಂದ ಆದಾಯ ಎಷ್ಟು ಗೊತ್ತಾ?ಫ್ಲವರ್ ಶೋ: ನಮ್ಮ ಮೆಟ್ರೋಗೆ ಬಂದ ಆದಾಯ ಎಷ್ಟು ಗೊತ್ತಾ?

6 Car Trains In Namma Metro Green Line From October 1

ಅಕ್ಟೋಬರ್ 1ರಿಂದ ಹಸಿರು ಮಾರ್ಗದಲ್ಲಿ 6 ಕೋಚ್ ರೈಲುಗಳು ಸಂಚಾರ ನಡೆಸಲಿವೆ. ಪ್ರತಿ ತಿಂಗಳು ಮೂರರಿಂದ ನಾಲ್ಕು ರೈಲುಗಳನ್ನು 6 ಕೋಚ್‌ ಆಗಿ ಪರಿವರ್ತನೆ ಮಾಡಲಾಗುತ್ತದೆ. ಮಾರ್ಚ್ 2020ರ ವೇಳೆಗೆ ಎಲ್ಲಾ 50 ರೈಲುಗಳು ಆರು ಕೋಚ್‌ ಆಗಲಿವೆ.

ಮೆಟ್ರೋ ಸುರಂಗ ಕೊರೆಯುವುದಷ್ಟೇ ಅಲ್ಲ, ಕಟ್ಟಡಗಳ ಸುರಕ್ಷತೆಯೂ ಮುಖ್ಯಮೆಟ್ರೋ ಸುರಂಗ ಕೊರೆಯುವುದಷ್ಟೇ ಅಲ್ಲ, ಕಟ್ಟಡಗಳ ಸುರಕ್ಷತೆಯೂ ಮುಖ್ಯ

ಮೊದಲು 2 ಆರು ಬೋಗಿಯ ರೈಲುಗಳನ್ನು ಹಸಿರು ಮಾರ್ಗದಲ್ಲಿ ಓಡಿಸಲಾಗಿತ್ತು. ಆದರೆ, ನೇರಳೆ ಮಾರ್ಗಕ್ಕೆ ಹೋಲಿಸಿದರೆ ಹಸಿರು ಮಾರ್ಗದಲ್ಲಿ ಅಂತಹ ಪ್ರತಿಕ್ರಿಯೆ ಸಿಕ್ಕಿಲ್ಲ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳು ಈಗ 6 ಕೋಚ್ ಹೊಂದಿವೆ.

ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ : ನಮ್ಮ ಮೆಟ್ರೋ ಪ್ರಯಾಣಿರ ಸಂಖ್ಯೆ ಹೊಸ ದಾಖಲೆ ಬರೆದಿದೆ. ಶುಕ್ರವಾರ 4.58 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಆಗಸ್ಟ್ 14ರಂದು 4.53 ಲಕ್ಷ ಜನರು ಪ್ರಯಾಣ ಮಾಡಿರುವುದು ಇಲ್ಲಿಯ ವರೆಗಿನ ದಾಖಲೆಯಾಗಿತ್ತು. ಏಪ್ರಿಲ್ 5ರಂದು 4.52 ಲಕ್ಷ ಜನರು ಪ್ರಯಾಣ ಮಾಡಿದ್ದರು.

English summary
BMRCL will introduce 6 car trains in Namma Metro green line (Nagasandra-Yelachenahalli) from October 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X