ಸಂಗೀತ ದಿಗ್ಗಜ ಕಿಶೋರ್ ಕುಮಾರ್ ಸಮರ್ಪಣೆ ವಿಶೇಷ
ಬೆಂಗಳೂರು, ಆಗಸ್ಟ್ 25: 58ನೇ ವರ್ಷದ ಬೆಂಗಳೂರು ಗಣೇಶ ಉತ್ಸವದ ಅಂಗವಾಗಿ 5ನೇ ದಿನದಂದು ಖ್ಯಾತ ಹಿಂದಿ ಗಾಯಕ ಕಿಶೋರ್ ಕುಮಾರ್ ಅವರಿಗೆ ಗೌರವಪೂರ್ಣ ಸಂಗೀತ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
Recommended Video
ಅರುಣ್ ಕುಮಾರ್ ಮುಂದಾಳತ್ವದಲ್ಲಿ ಆಗಸ್ಟ್ 26 , 2020ರಂದು ಸಂಜೆ 6.30ರಿಂದ ವರ್ಚುವಲ್ ವೇದಿಕೆಯಲ್ಲಿ ಕಾರ್ಯಕ್ರಮ ಆಕರ್ಷಕವಾಗಿ ಮೂಡಿ ಬರಲಿದೆ. ಮೋಹನ್ ಕೃಷ್ಣ, ಸುನೀತಾ ಮುರಳಿ, ಸಿದ್ದಾರ್ಥ್ ಬೆಳ್ಮಣ್ಣು, ಸಮನ್ವಿತ ಶರ್ಮಾ, ಗೋವಿಂದ್ ಕರ್ನೂಲ್ ಮತ್ತು ತಂಡವು ಸಂಗೀತ ಪ್ರೇಮಿಗಳ ಮನತಣಿಸಲು ಮುಂದಾಗಿದೆ.
ಕೀ ಬೋರ್ಡ್ ನಲ್ಲಿ ಶಬ್ಬೀರ್ ಅಹ್ಮದ್,ದೀಪಕ್,ಉಮೇಶ್ ಪಾಲ್ಗೊಳ್ಳಲಿದ್ದಾರೆ. ತಬಲಾದಲ್ಲಿ ಮಧುಸೂದನ, ಸತ್ಯ ಮೂರ್ತಿ ಹಾಗೂ ಸುದರ್ಶನ್ ಅವರ ಕೊಳಲುವಾದನದ ಮೋಡಿ ಜತೆಗೆ ಶ್ರೀನಿವಾಸ್ ಆಚಾರ್ ಅವರ ಗೀಟಾರ್ ವಾದನ ಮನಸೂರೆಗೊಳ್ಳಲಿದೆ.

1946ರಲ್ಲಿ, ಅಭಾಸ್ ಕುಮಾರ್ ಮುಂಬೈಗೆ ಬಂದು ತನ್ನ ಹೆಸರನ್ನುಕಿಶೋರ್ ಕುಮಾರ್ ಎಂದು ಬದಲಾಯಿಸಿಕೊಂಡರು ಮತ್ತು ಬಾಂಬೆ ಟಾಕೀಸ್‌ನಲ್ಲಿ ಕೋರಸ್ ಗಾಯಕನಾಗಿ ತಮ್ಮ ಸಿನೆಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರ ಸಹೋದರ ಅಶೋಕ್ ಕುಮಾರ್ ಕೆಲಸ ಮಾಡುತ್ತಿದ್ದರು. ಜಿಡ್ಡಿ (1948) ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಖೇಮಚಂದ್ ಪ್ರಕಾಶ್ ಕುಮಾರ್ ಅವರಿಗೆ "ಮಾರ್ನೆ ಕಿ ಡುಯೆನ್ ಕ್ಯೋನ್ ಮಂಗು" ಹಾಡಲು ಅವಕಾಶ ನೀಡಿದರು.
ಸಂಗೀತ ಲೋಕದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಕಿಶೋರ್ ಕುಮಾರ್ ಅವರು 'ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವಂತೆ ಎಲ್ಲಾ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಿಶೋರ್ ಕುಮಾರ್ ಅವರು ನಟರಾಗಿ, ಗೀತರಚನೆಕಾರರಾಗಿ, ಮ್ಯೂಸಿಕ್ ಕಂಪೋಸರ್, ನಿರ್ಮಾಪಕ-ನಿರ್ದೇಶಕ ಹಾಗೂ ಸಂಕಲನಕಾರರಾಗಿ ಕೂಡ ಹೆಸರು ಮಾಡಿದವರು. ಆದರೆ ಬಾಲಿವುಡ್ ನಲ್ಲಿ ಇವರು ಗಾಯಕರಾಗಿಯೇ ಚಿರಪರಿಚಿತ. ಇವರ ಸಂಗೀತ, ಧ್ವನಿ ಮಾತ್ರ ಇಂದಿಗೂ ಅಮರ.

ಬರೀ ಹಿಂದಿ ಭಾಷೆಯಲ್ಲಿ ಮಾತ್ರವಲ್ಲದೇ, ಕನ್ನಡ, ಬೆಂಗಾಲಿ, ಮರಾಠಿ, ಅಸ್ಸಾಮಿ, ಗುಜರಾತ್, ಭೋಜ್ ಪುರಿ, ಮಲಯಾಳಂ ಮತ್ತು ಉರ್ದು ಮುಂತಾದ ಭಾಷೆಗಳಿಗೆ ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಅವರು ಧ್ವನಿ ನೀಡಿದ್ದಾರೆ.ಅದ್ರಲ್ಲೂ ಕನ್ನಡದ 'ಕುಳ್ಳ ಏಜೆಂಟ್ 000' ಚಿತ್ರದ 'ಆಡು ಆಟ ಆಡು, ನೀ ಆಡು ಆಡು ಆಡಿ ನೋಡು'... ಅನ್ನೋ ಹಾಡು ಮಾತ್ರ ಎಂದಿಗೂ ಎವರ್ ಗ್ರೀನ್ ಆಗಿದೆ.











Click it and Unblock the Notifications