ಗಣೇಶ ಉತ್ಸವ: ಪ್ರವೀಣ್ ಡಿ. ರಾವ್ ತಂಡದಿಂದ ಫ್ಯೂಷನ್ ಸಂಗೀತ
ಬೆಂಗಳೂರು, ಆಗಸ್ಟ್ 24: ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ ಬೆಂಗಳೂರು ಗಣೇಶ ಉತ್ಸವ (ಬಿಜಿಯು), 58ನೇ ವರ್ಷದ ಬೆಂಗಳೂರು ಗಣೇಶ ಉತ್ಸವದ ಪ್ರಯುಕ್ತ 4ನೇ ದಿನದಂದು ಪ್ರವೀಣ್ ಡಿ ರಾವ್ ಚಕ್ರಫೋನಿಕ್ಸ್ ತಂಡ ದಿಂದ ಫ್ಯೂಷನ್ ಸಂಗೀತ ಸಂಜೆ ನಡೆಯಲಿದೆ.
Recommended Video
ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತ ಸಮ್ಮಿಶ್ರಣವನ್ನು ಸಂಗೀತ ರಸಿಕರಿಗೆ ಉಣಬಡಿಸಲು ಸಂಗೀತಗಾರ ಪ್ರವೀಣ್ ಡಿ. ರಾವ್ ನೇತೃತ್ವದ ಚಕ್ರಫೋನಿಕ್ಸ್ ತಂಡ ಸಜ್ಜಾಗಿದೆ. ಆಗಸ್ಟ್ 25 2020ರಂದು ಸಂಜೆ 6.30ರಿಂದ ವರ್ಚುವಲ್ ವೇದಿಕೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದ ಮೂಲಕ ಸಂಗೀತಾಭಿಮಾನಿಗಳು ಸಂಗೀತ ಧಾರೆಯಲ್ಲಿ ಮಿಂದೇಳಬಹುದು.
ಚಕ್ರಫೋನಿಕ್ಸ್ ಫ್ಯೂಶನ್ ಸಂಗೀತ ಸಂಜೆಯಲ್ಲಿ ಅಜಯ್ ವಾರಿಯರ್, ವಾರಿಜಾ ಶ್ರೀ ವೇಣು ಗೋಪಾಲ್, ಪ್ರಮಥ್ ಕಿರಣ್ ಮುಂತಾದ ಗಾಯಕರು ಪಾಲ್ಗೊಂಡು ಪ್ರೇಕ್ಷಕರಿಗೆ ಸಂಗೀತ ಮನರಂಜನೆಯನ್ನು ಉಣಬಡಿಸಲಿದ್ದಾರೆ.

ಚಕ್ರಫೊನಿಕ್ಸ್ ವಿಶ್ವ ಸಂಗೀತದ ಸೇತುವೆಗಳೊಂದಿಗೆ ಸಂಪ್ರದಾಯಗಳ ಗಡಿಗಳನ್ನು ದಾಟುವ ದೃಷ್ಟಿ ಹೊಂದಿರುವ ಬಹುಮುಖ ಕಲಾವಿದರ ವಿಶಿಷ್ಟ ತಂಡವಾಗಿದೆ.ಚಕ್ರಫೊನಿಕ್ಸ್ ಭಾರತೀಯ ಶಾಸ್ತ್ರೀಯ ಸಂಗೀತ, ವಿಶ್ವ ಸಂಗೀತದಂತಹ ವಿಶಾಲ ಪ್ರಕಾರಗಳನ್ನು ಪೂರೈಸುತ್ತದೆ. ವಿವಿಧ ಪ್ರತಿಷ್ಠಿತ ಕಾರ್ಯಕ್ರಮಗಳು ಮತ್ತು ಉತ್ಸವಗಳಲ್ಲಿ ಪ್ರದರ್ಶನ ನೀಡಿದ ಚಕ್ರಫೊನಿಕ್ಸ್, ಮಾಸ್ಟರ್ ಸಂಗೀತ ತರಗತಿಗಳು ಮತ್ತು ಕಾರ್ಯಾಗಾರಗಳಂತಹ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

ಭಾರತೀಯ ಶಾಸ್ತ್ರೀಯ ಸಂಗೀತ(ಗಾಯನ ಹಾಗೂ ವಾದ್ಯ), ಫ್ಯೂಷನ್, ಕನ್ನಡ ಭಾವಗೀತೆ ಗಾಯನ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಭಜನೆ, ಭಕ್ತಿಗೀತೆ ಗಾಯನ, ಗುಲಾಂ ಅಲಿ, ಜಗಜೀತ್ ಸಿಂಗ್, ಹರಿಹರನ್, ಮಧುರಾಣಿ ಮುಂತಾದವರ ಗಜಲ್ ಗಾಯಕ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ಚಕ್ರಫೋನಿಕ್ಸ್ ನಿರತವಾಗಿದೆ.ಭಾರತೀಯ ಶಾಸ್ತ್ರೀಯ ಸಂಗೀತ, ಗಾಯನ, ವಾದ್ಯ ಸಂಯೋಜನೆ ಕುರಿತಂತೆ ಹಲವಾರು ವರ್ಕ್ ಶಾಪ್ ಗಳನ್ನು ಚಕ್ರ ಫೋನಿಕ್ಸ್ ನಡೆಸುತ್ತಾ ಬಂದಿದೆ. ಈಗ ಚಕ್ರಫೋನಿಕ್ಸ್ ತಂಡ ಆಗಸ್ಟ್ 25, 2020 ರಂದು ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನೀಡಲು ಮುಂದಾಗಿದೆ.












Click it and Unblock the Notifications