50% Rebate offer: 2 ವಾರ ವಿಸ್ತರಣೆ ಸಾಧ್ಯತೆ, ಬೆಂಗಳೂರು ಒಂದರಿಂದಲೇ ₹500ಕೋಟಿ ಬರಬೇಕು.

ಸಂಚಾರ ನಿಯಮ ಉಲ್ಲಂಘನೆಯ ದಂಡಕ್ಕೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದ್ದರಿಂದ 150 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ. ಇನ್ನೂ ಎರಡು ವಾರದ ಈ ನಿಯಮ ವಿಸ್ತರಣೆ ಆಗಲಿದೆ. ಬೆಂಗಳೂರು ಒಂದರಲ್ಲೇ 500ಕೋಟಿ ರೂ. ಬರಬೇಕಿದೆ.

ಬೆಂಗಳೂರು, ಫೆಬ್ರವರಿ 15: ಎಲ್ಲ ರೀತಿಯ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೇಲೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದ ಮೇಲೆ 150 ಕೋಟಿ ರೂಪಾಯಿಗೂ ಅಧಿಕ ಹಣ ದಂಡದ ರೂಪದಲ್ಲಿ ಸಂಗ್ರಹವಾಗಿದೆ. ಈ ಪೈಕಿ ಇನ್ನೂ ಬೆಂಗಳೂರು ಒಂದರಲ್ಲಿ ಕೋಟ್ಯಂತರ ರೂಪಾಯಿ ಪಾವತಿಯಾಗುವುದು ಬಾಕಿ ಇದೆ.

ಈ ಕಾರಣಕ್ಕೆ ಫೆಬ್ರವರಿ 11ರಂದು ಮುಕ್ತಾಯಗೊಂಡಿರುವ ಎಲ್ಲ ರೀತಿಯ ಸಂಚಾರ ನಿಯಮ ಉಲ್ಲಂಘನೆದ ದಂಡದ ಮೇಲೆ ಶೇ. 50ರಷ್ಟು ರಿಯಾಯಿತಿ ಇನ್ನೂ ಎರಡು ವಾರ ಘೋಷಿಸುವಂತೆ ಮನವಿ ಮಾಡಲಾಗಿದೆ. ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಎರಡು ವಾರ ವಿಸ್ತರಣೆ ಮಾಡುವಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ಕಾರ್ಯ ನಿರ್ವಾಹಕ ಅಧ್ಯಕ್ಷ ನ್ಯಾ.ಯಮೂರ್ತಿ ಬಿ. ವೀರಪ್ಪ ಸರ್ಕಾರಕ್ಕೆ ಕೇಳಿದ್ದಾರೆ.

ಸದ್ಯ ಪಿಟಿಐ ಮಾಡಿರುವ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು ಒಂಬತ್ತು ದಿನಗಳ ಅವಧಿಯಲ್ಲಿ (ಪೆಬ್ರವರಿ 11ರವರೆಗೆ) 152 ಕೋಟಿಗೂ ಹೆಚ್ಚು ದಂಡ ಸಂಗ್ರಹವಾಗಿದೆ ಎಂದು ತಿಳಿಸಲಾಗಿದೆ. ಅದೇ ರೀತಿ ವಾಹನ ಉಲ್ಲಂಘಿಸಿದ ಸವಾರರಿಂದ ರಾಜ್ಯದಲ್ಲಿ ಇನ್ನೂ ಸಂಚಾರ ಪೊಲೀಸ್ ಇಲಾಖೆಗೆ ಸುಮಾರು 530 ಕೋಟಿ ರೂಪಾಯಿ ಪಾವತಿಸಬೇಕು. ಅದರಲ್ಲಿ 500 ಕೋಟಿ ರಾಜ್ಯ ರಾಜಧಾನಿ ಬೆಂಗಳೂರು ಒಂದರಿಂದಲೇ ಪಾವತಿಯಾಗಬೇಕಿದೆ ಎಂದು ಹೇಳಲಾಗಿದೆ.

50% Rebate Offer Will Extended Next two week, 500 Crore Fine Pending Due In Bengaluru

ಫೆಬ್ರವತಿ 2ರಂದು ಜಾರಿಗೊಳಿಸಿದ್ದ ಸಂಚಾರ ನಿಯಮ ಉಲ್ಲಂಘಟನೆ ಮೇಲಿನ ಶೇಕಡಾ 50 ರಿಯಾಯಿತಿ ಕೊಡುಗೆ ಫೆ. 11ರವರೆಗೆ ಮಾನ್ಯವಾಗಿತ್ತು. ಅದಾದ ಬಳಿಕ ಶನಿವಾರ ಲೋಕ ಅದಾಲತ್ ನಲ್ಲಿ ಒಟ್ಟು ಸುಮಾರು 64,13,608 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಕರ್ನಾಟಕದಾದ್ಯಂತ ಬಾಕಿ ಇರುವ 52,11,424 ಪ್ರಕರಣಗಳಿಂದ ಹಣ ಬರಬೇಕಿದೆ. ಈ ಕಾರಣಕ್ಕೆ ಪ್ರಾಧಿಕಾರ ರಾಜ್ಯ ಸರ್ಕಾರದ ಮುಂದೆ ಮನವಿ ಮಾಡಲಾಗಿದೆ.

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರು ದಂಡವನ್ನು ಹತ್ತಿರದ ಸಂಚಾರ ಪೊಲೀಸ್ ಠಾಣೆ ಹಾಗೂ ಬೆಂಗಳೂರು ಒನ್‌ನಲ್ಲಿ ಕಟ್ಟಬಹುದು. ಅಥವಾ ಪೊಲೀಸ್ ಇಲಾಖೆ ಅಧಿಕೃತ ವೆಬ್‌ಸೈಟ್ https://bangaloretrafficpolice.gov.in ಗೆ ಭೇಟಿ ನೀಡಬಹುದು.

50% Rebate Offer Will Extended Next two week, 500 Crore Fine Pending Due In Bengaluru

ಬೆಂಗಳೂರು ಸೇರಿದಂತೆ ಕರ್ನಾಟಕದ ನಾಗರಿಕರು ಶೀಘ್ರದಲ್ಲೇ ವಿಮಾ ಸಂಸ್ಥೆಗಳ ಮೂಲಕ ಸಂಚಾರ ನಿಯಮ ಉಲ್ಲಂಘಟನೆಯ ದಂಡ ಕಟ್ಟಲು ಸಾಧ್ಯವಾಗಿಸಲು ವ್ಯವಸ್ಥೆ ಬರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಶೇಷ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+