ಇಂದಿರಾ ಕ್ಯಾಂಟೀನ್‌ಗೆ ಕೇವಲ 50 ಕೋಟಿ, ರಾತ್ರಿ ಊಟ ನಿಲುಗಡೆ ಸಾಧ್ಯತೆ

ಹಲವು ವರ್ಷಗಳಿಂದ ಈ ಕ್ಯಾಂಟೀನ್‌ಗಳ ನಿರ್ವಹಣೆ ಕಳಪೆಯಾಗಿದೆ ಎಂದು ಜನರು ಆರೋಪಿಸಿದ್ದಾರೆ. ಕೋವಿಡ್ ನಂತರ, ಈ ಕ್ಯಾಂಟೀನ್‌ಗಳಲ್ಲಿ ಜನಸಂದಣಿ ತೀವ್ರವಾಗಿ ಕಡಿಮೆಯಾಗಿದೆ.

ಬೆಂಗಳೂರು, ಮಾರ್ಚ್‌ 3: ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟೀನ್ ನಡೆಸಲು ಬಿಬಿಎಂಪಿ ತನ್ನ ಬಜೆಟ್‌ನಲ್ಲಿ ಕೇವಲ 50 ಕೋಟಿ ರೂಪಾಯಿ ಹಣ ನೀಡಿದೆ. ಹೀಗಾಗಿ ಬೆಂಗಳೂರಿನಲ್ಲಿ ರಾತ್ರಿ ಹೊತ್ತು ನೀಡುವ ಊಟವನ್ನು ನಿಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಲವು ವರ್ಷಗಳಿಂದ ಈ ಕ್ಯಾಂಟೀನ್‌ಗಳ ನಿರ್ವಹಣೆ ಕಳಪೆಯಾಗಿದೆ ಎಂದು ಜನರು ಆರೋಪಿಸಿದ್ದಾರೆ. ಕೋವಿಡ್ ನಂತರ, ಈ ಕ್ಯಾಂಟೀನ್‌ಗಳಲ್ಲಿ ಜನಸಂದಣಿ ತೀವ್ರವಾಗಿ ಕಡಿಮೆಯಾಗಿದೆ.

50 crores only for Indira canteen, night dinner may stop

ಜನಸಂಖ್ಯೆ ಕಡಿಮೆಯಾದ ಕಾರಣ ಸುಮಾರು 35 ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾತ್ರಿಯ ಊಟದ ಪೂರೈಕೆಯನ್ನು ಶೀಘ್ರದಲ್ಲೇ ನಿಲ್ಲಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. 30 ರಿಂದ 35 ಕ್ಯಾಂಟೀನ್‌ಗಳಲ್ಲಿ ರಾತ್ರಿ ಊಟದ ಸಂಖ್ಯೆಯು ತೀವ್ರವಾಗಿ ಕುಸಿದಿದೆ. ಅನೇಕ ಕ್ಯಾಂಟೀನ್‌ಗಳು 50 ಪ್ಲೇಟ್‌ಗಳನ್ನು ಸಹ ಮಾರಾಟ ಮಾಡುವುದಿಲ್ಲ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಗಿರಿನಾಥ್ ಹೇಳಿದರು.

ಇವುಗಳಲ್ಲಿ ಕೆಲವು ಕ್ಯಾಂಟೀನ್‌ಗಳನ್ನು ನಡೆಸುತ್ತಿರುವ ಅದಮ್ಯ ಚೇತನದ ಪ್ರತಿನಿಧಿಯೊಬ್ಬರು, ಕಡಿಮೆ ಸಂಖ್ಯೆಯ ಜನರಿಗೆ ಸರಬರಾಜು ಮಾಡುವುದು ಕಾರ್ಯಸಾಧ್ಯವಲ್ಲ ಎಂದು ಹೇಳಿದರು.

ಕೋವಿಡ್‌ ಸಾಂಕ್ರಾಮಿಕ ನಂತರ, ಜನರ ಬರುವಿಕೆ ತೀವ್ರವಾಗಿ ಕಡಿಮೆಯಾಗಿದೆ ಮತ್ತು ಅದು ನಮಗೆ ಕೆಲಸ ಮಾಡುವುದಿಲ್ಲ. ನಾವು ಸಾರಿಗೆ ಮತ್ತು ಇತರ ವೆಚ್ಚಗಳನ್ನು ಭರಿಸುವುದರಿಂದ ಅಷ್ಟು ಕಡಿಮೆ ಸಂಖ್ಯೆಗೆ ಸರಬರಾಜು ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಪ್ರತಿನಿಧಿಯೊಬ್ಬರು ತಿಳಿಸಿದರು ಎಂದು ಡಿಎಚ್‌ ವರದಿ ಮಾಡಿದೆ.

ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಹಾವೇರಿ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಮತ್ತಿತರ ಕಡೆಗಳಲ್ಲಿ ಕ್ಯಾಂಟೀನ್ ತೆರೆಯಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಬಡವರಿಗೆ ಮೂರು ಹೊತ್ತಿನ ಊಟ ಸಿಗುತ್ತಿದೆ. ಅಂತಹ ಮಹತ್ವದ ಕ್ಯಾಂಟೀನ್‌ಗಳು ಇದೀಗ ಸ್ಥಗಿತಗೊಳ್ಳುತ್ತಿರುವುದು ದುರ್ದೈವದ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+