Best Road Trips near Bengaluru: ಬೆಂಗಳೂರು ಬಳಿ ರೋಡ್ ಟ್ರಿಪ್‌ಗೆ ಹೇಳಿ ಮಾಡಿಸಿದ ಬೆಸ್ಟ್ ತಾಣಗಳು- ಮಾಹಿತಿ, ವಿವರ
ಬೆಂಗಳೂರಿನ ಗೌಜು ಗದ್ದಲದಿಂದ ನೀವು ದೂರವಾಗಬೇಕೇ? ನಿಮ್ಮ ವಿಕೆಂಡ್ ಅನ್ನು ಪ್ರಕೃತಿಯ ಮಡಿಲಲ್ಲಿ ಕಳೆಯಬೇಕೆ? ಹಾಗಾದರೆ, ಬೆಂಗಳೂರು ಮಹಾನಗರವು ತನ್ನ ಸುತ್ತಲೂ ಅತ್ಯಂತ ರಮಣೀಯ ತಾಣಗಳನ್ನು ಹೊಂದಿದೆ. ಪ್ರಕೃತಿ ಸೌಂದರ್ಯದ ಆರಾಧಕರಿಗಂತೂ ಹೇಳಿ ಮಾಡಿಸಿದ ಅತ್ಯುತ್ತಮ ಜಾಗಗಳಿವೆ. ಬೆಂಗಳೂರು ಬಳಿ ಬೆಸ್ಟ್ ವಿಕೆಂಡ್ ರೋಡ್ ಟ್ರಿಪ್‌ಗೆ ಈ ಕೆಳಗಿನ ತಾಣಗಳನ್ನು ಆಯ್ದುಕೊಳ್ಳಿ...

ರಂಗನತಿಟ್ಟು ಪಕ್ಷಿಧಾಮ
ಕಾವೇರಿ ನದಿಯ ದಡದಲ್ಲಿರುವ ಈ ಅಭಯಾರಣ್ಯವನ್ನು ಸಂರಕ್ಷಿತ ರಾಮ್ಸಾರ್ ತಾಣವೆಂದು ಯುನೆಸ್ಕೋ 2022 ರಲ್ಲಿ ಗುರುತಿಸಿದೆ. ಪ್ರಸಿದ್ಧ ಪಕ್ಷಿಶಾಸ್ತ್ರಜ್ಞ ಸಲೀಂ ಅಲಿ 1940 ರಲ್ಲಿ ಇದನ್ನು ಸಂರಕ್ಷಿತ ಅಭಯಾರಣ್ಯವನ್ನಾಗಿ ಮಾಡಲು ಮೈಸೂರು ರಾಜರಿಗೆ ಒತ್ತಾಯಿಸಿದರು. ಇಲ್ಲಿ ಹಲವಾರು ಅಪರೂಪದ ಮತ್ತು ಅನನ್ಯ ಪಕ್ಷಿಗಳನ್ನು ನೀವು ಕಾಣಬಹುದು.
ಬೆಳ್ಳಕ್ಕಿಗಳು, ಭಾರತೀಯ ನೀರುಕೋಳಿಗಳು, ಕಾರ್ಮೊರಂಟ್‌ಗಳು ಮತ್ತು ಬಣ್ಣದ ಕೊಕ್ಕರೆಗಳನ್ನು ನೀವು ಇಲ್ಲಿ ನೋಡಬಹುದು. ಐತಿಹಾಸಿಕ ಪಟ್ಟಣವಾದ ಶ್ರೀರಂಗಪಟ್ಟಣದಿಂದ ಇದು ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ.

ರಾಮನಗರ
ನೀವು ಸೂಪರ್‌ಹಿಟ್ ಬಾಲಿವುಡ್ ಚಿತ್ರ ಶೋಲೆಯ ಅಭಿಮಾನಿಯಾಗಿದ್ದರೆ ನೀವು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು. ಏಕೆಂದರೆ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಈ ಪ್ರದೇಶದಲ್ಲಿ ಬೆರಗುಗೊಳಿಸುವ ಮತ್ತು ಭವ್ಯವಾದ ರಾಮಗಿರಿ ಬೆಟ್ಟಗಳಿವೆ. ಇವುಗಳನ್ನು ಶೋಲೆ ಬೆಟ್ಟಗಳೂ ಎಂದು ಕರೆಯಲಾಗುತ್ತದೆ. ಇದು ಟ್ರೆಕ್ಕಿಂಗ್ ಮತ್ತು ಕ್ಲೈಂಬಿಂಗ್‌ಗೆ ಉತ್ತಮ ತಾಣಗಳಾಗಿವೆ.

ಅಂತರಗಂಗೆ
ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿರುವ ಇದು ಜನಪ್ರಿಯ ಟ್ರೆಕ್ಕಿಂಗ್ ತಾಣವಾಗಿದೆ. ಶತಶೃಂಗ ಬೆಟ್ಟಗಳ ಶ್ರೇಣಿಯು ಈ ಪ್ರದೇಶವನ್ನು ಆವರಿಸಿದೆ. ಅಂತರಗಂಗೆ ಗುಹೆಗಳಿಗೆ ಈ ತಾಣವು ಪ್ರಸಿದ್ದವಾಗಿದೆ. ಇಲ್ಲಿ ಚಾರಣವು ಸ್ಪಲ್ಪ ಕಷ್ಟಕರವಾಗಿದೆ. ಆದ್ದರಿಂದ, ರೋಡ್ ಟ್ರಿಪ್‌ಗೆ ತೆರಳುವ ಮೊದಲು ಅಗತ್ಯ ವಸ್ತುಗಳನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಬೇಕಿರುವ ಅನಿವಾರ್ಯತೆ ಇದೆ.

ಮಂಚನಬೆಲೆ ಅಣೆಕಟ್ಟು
ಸುಂದರವಾದ ಅರ್ಕಾವತಿ ನದಿಯ ಮೇಲೆ ಮಂಚನಬೆಲೆ ಅಣೆಕಟ್ಟು ಇದೆ. ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಜಲಾಶಯವು ಕೆರೆಯನ್ನು ಹೊಂದಿದೆ. ಅದರಲ್ಲಿ ನೀವು ತ್ವರಿತವಾಗಿ ಸ್ನಾನ ಮಾಡಬಹುದು. ಈಜಾಡಲೂಬಹುದು. ಆದರೆ, ಕೆಲವೊಮ್ಮೆ ಸುರಕ್ಷತೆಯ ಕಾರಣಗಳಿಗಾಗಿ ಇದನ್ನು ಮುಚ್ಚಲಾಗಿರುತ್ತದೆ. ಈ ಕೆರೆಯಲ್ಲಿ ಕಯಾಕಿಂಗ್ ಮತ್ತು ಬೋಟಿಂಗ್‌ನಂತಹ ನೀರಿನ ಚಟುವಟಿಕೆಗಳ ಸೌಲಭ್ಯವೂ ಇದೆ.

ಸಾವನದುರ್ಗ ಬೆಟ್ಟಗಳು
ಇದು ಬೆಂಗಳೂರು ಬಳಿಯ ಮತ್ತೊಂದು ಟ್ರೆಕ್ಕಿಂಗ್ ತಾಣ. ಇದು ಅರ್ಕಾವತಿ ನದಿಗೆ ಸಮೀಪದಲ್ಲಿದೆ. ಈ ಏಕಶಿಲೆಯ ಬೆಟ್ಟವು ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದೆ. ನೀವು ಉತ್ಸಾಹಿಗಳಾಗಿದ್ದರೆ ಉತ್ತಮ ಟ್ರೆಕ್ಕಿಂಗ್ ಮಾಡಬಹುದು. ಬಲ್ಬುಲ್‌ಗಳು, ರಣಹದ್ದುಗಳು, ಕರಡಿಗಳು ಮತ್ತು ಚಿರತೆಗಳಿಗೆ ಇದು ನೆಲೆಯಾಗಿದೆ. ಈ ಪ್ರದೇಶದಲ್ಲಿ ಆಸಕ್ತಿದಾಯಕ ಸಸ್ಯ ಮತ್ತು ಪ್ರಾಣಿಗಳನ್ನು ಸಹ ಕಾಣಬಹುದಾಗಿದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications