ನೆಲಮಂಗಲ ಬಳಿ ಭೀಕರ ಅಪಘಾತ, ಸ್ಥಳದಲ್ಲೇ 5 ಸಾವು

ಬೆಂಗಳೂರು, ಅಕ್ಟೋಬರ್ 19 : ನೆಲಮಂಗಲ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 5 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುರುವಾರ ಸಂಜೆ ನೆಲಮಂಗಲ ಬಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಬೆಂಗಳೂರಿನಿಂದ ಚುಂಚಿಫಾಲ್ಸ್‌ಗೆ ಹೊರಟಿದ್ದ ಸ್ಕಾರ್ಪಿಯೋ ಕಾರು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು ನಂತರ, ಬಸ್ ನಿಲ್ದಾಣಕ್ಕೆ ನುಗ್ಗಿದೆ.

5 killed, 2 injured in road accident, Nelamangala

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಸಾಜನ್ (24), ನವನೀದ್ (25) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನಾಗವಾರ ನಿವಾಸಿಗಳಾದ ಆರು ಜನರು ಕಾರಿನಲ್ಲಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲು ಊರಿಗೆ ಹೊರಟಿದ್ದಾಗ ಈ ಅಪಘಾತ ನಡೆಸಿದೆ.

ಬೈಕ್‌ನಲ್ಲಿದ್ದ ಕೆಂಪರಾಜು (40), ಸೌಮ್ಯ (10), ಸಂಜಯ್ (2) ಸಾವನ್ನಪ್ಪಿದ್ದಾರೆ. ಕೆಂಪರಾಜು ಪತ್ನಿ ಮಮತಾ (30) ಸ್ಥಿತಿ ಗಂಭೀರವಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಕ್ ನಲ್ಲಿದ್ದವರು ಬೆಂಗಳೂರಿನ ಹೆಗಗ್ಗನಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+