21 ವರ್ಷದ ಟೆಕ್ಕಿಗೆ ರಸ್ತೆ ಮಧ್ಯೆ ಗುಪ್ತಾಂಗ ತೋರಿಸಿದವನ ಬಂಧನ

ಬೆಂಗಳೂರು, ಮಾರ್ಚ್ 19: ಇಪ್ಪತ್ತೊಂದು ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಯುವತಿಯನ್ನು ಹಿಂಬಾಲಿಸುತ್ತಾ, ಲೈಂಗಿಕ ಹಿಂಸೆ ನೀಡುತ್ತಿದ್ದ ನಲವತ್ನಾಲ್ಕು ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಯುವತಿ ಪ್ರತಿ ದಿನ ಬೆಳಗ್ಗೆ ತನ್ನ ನಾಯಿ ಜತೆಗೆ ವಾಕಿಂಗ್ ತೆರಳುವ ವೇಳೆ ಅತ ಅಶ್ಲೀಲವಾಗಿ ಸನ್ನೆ ಮಾಡಿದ್ದಾನೆ.

ಜೆ.ಪಿ.ನಗರ ಆರನೇ ಹಂತದ ಕನಕಪುರ ಮುಖ್ಯರಸ್ತೆ ಬಳಿಯ ಜರಗನಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪ್ರತಿ ದಿನ ಬೆಳಗ್ಗೆ ಆರರಿಂದ ಏಳು ಗಂಟೆ ತನಕ ಆತ ಈ ಹಿಂಸೆ ನೀಡಿದ್ದಾನೆ. ಆಕೆ ಬರುವುದನ್ನೇ ಕಾಯುತ್ತಾ ನಿಲ್ಲುವುದು, ಆ ನಂತರ ಹಿಂಬಾಲಿಸುತ್ತಾ ಹಾಡು ಹೇಳುವುದು ಮಾಡಿದ್ದಾನೆ. ಒಂದು ದಿನ ಆ ಟೆಕ್ಕಿ ಅವನ ಜತೆ ಜಗಳಕ್ಕೆ ಇಳಿದಾಗ ರಸ್ತೆ ಮಧ್ಯದಲ್ಲಿ ನಿಂತು, ಆಕೆ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದ. ಆ ನಂತರ ಆಕೆ ಪೊಲೀಸರಿಗೆ ದೂರು ನೀಡಿದ್ದರು.

ಆತನ ಬಂಧನಕ್ಕೆ ಪೊಲೀಸರು ಯೋಜನೆ ರೂಪಿಸಿದರು. ಜೆ.ಪಿ.ನಗರ ನಿವಾಸಿಯಾದ ಆರೋಪಿ ವೀರಯ್ಯ ಬರುವುದನ್ನೇ ಮಫ್ತಿಯಲ್ಲಿ ಕಾಯುತ್ತಾ ನಿಂತಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

44 year old man arrested for techie stalked, harassed

ಆರೋಪಿ ವೀರಯ್ಯನಿಗೆ ಮದುವೆ ಆಗಿದ್ದು, ಆತನ ಇಬ್ಬರು ಮಕ್ಕಳು ಊದುಬತ್ತಿ ವ್ಯವಹಾರ ನಡೆಸುತ್ತಿದ್ದಾರೆ. ಇನ್ನು ವೀರಯ್ಯ ಫೆಬ್ರವರಿ ಹದಿನೈದನೇ ತಾರೀಕಿನಿಂದ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಆರೋಪಿಯು ಯುವತಿಗೆ ರಸ್ತೆ ಮಧ್ಯದಲ್ಲಿ ಅಶ್ಲೀಲವಾಗಿ ಗುಪ್ತಾಂಗ ತೋರಿಸಿದ್ದಾನೆ. ಆ ಕಾರಣಕ್ಕೆ ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈಚೆಗೆ ಇಪ್ಪತ್ತಾರು ವರ್ಷದ ಯುವಕನೊಬ್ಬ ಒಂಬತ್ತನೇ ತರಗತಿ ವಿದ್ಯಾರ್ಥಿನಿಯ ಬೆನ್ನು ಬಿದ್ದಿದ್ದ. ಆಕೆ ಶಾಲೆಗೆ ಹೋಗುವಾಗ, ಬರುವಾಗ ಹಿಂಬಾಲಿಸುತ್ತಿದ್ದ. ತನ್ನ ಇಚ್ಛೆಗೆ ತಕ್ಕಂತೆ ನಡೆದುಕೊಂಡರೆ ದುಬಾರಿ ಮೊಬೈಲ್ ಫೋನ್ ಕೊಡಿಸುವುದಾಗಿ ಹೇಳಿದ್ದ. ಕೊನೆಗೆ ಇದನ್ನು ಆ ವಿದ್ಯಾರ್ಥಿನಿಯ ತಾಯಿ ತಡೆದು, ದಾರಿಹೋಕರ ನೆರವಿನಿಂದ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+