ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೆಂಗಳೂರಲ್ಲಿ 400 ಹೊಸ ಕೋವಿಡ್ ಪ್ರಕರಣ ಪತ್ತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 29; ಕರ್ನಾಟಕದಲ್ಲಿ 566 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 4000 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 7771 ಆಗಿದೆ.

ಬುಧವಾರ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 245 ಜನರು ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು 6 ಸೋಂಕಿತರು ಮೃತಪಟ್ಟಿದ್ದಾರೆ.

ಮುಂಬೈ, ದೆಹಲಿಯಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಭಾರೀ ಏರಿಕೆ ಮುಂಬೈ, ದೆಹಲಿಯಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಭಾರೀ ಏರಿಕೆ

ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. 400 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,388.

ಬಿಬಿಎಂಪಿ ವ್ಯಾಪ್ತಿಯಲ್ಲಿ 7.2 ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ 7.2 ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ

400 New Covid Cases Reported In Bengaluru

ಹೆಲ್ತ್ ಬುಲೆಟಿನ್; ಕರ್ನಾಟಕದಲ್ಲಿ ಹೊಸದಾಗಿ ಪತ್ತೆಯಾದ ಪ್ರಕರಣ 566. ಆಸ್ಪತ್ರೆಯಿಂದ ಡಿಸ್ಚಾರ್ಜ್ 245. ರಾಜ್ಯದ ಸಕ್ರಿಯ ಪ್ರಕರಣ 7771. ಒಟ್ಟು ಗುಣಮುಖ 2959674. ರಾಜ್ಯದ ಒಟ್ಟು ಪ್ರಕರಣಗಳು 3005798. ಒಟ್ಟು ಮೃತಪಟ್ಟವರು 38324.

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ 21 ಕೋವಿಡ್ ಪಾಸಿಟಿವ್; ಮತ್ತೊಂದು ಕ್ಲಸ್ಟರ್ ರಚನೆಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ 21 ಕೋವಿಡ್ ಪಾಸಿಟಿವ್; ಮತ್ತೊಂದು ಕ್ಲಸ್ಟರ್ ರಚನೆ

ಬೆಂಗಳೂರು ನಗರದಲ್ಲಿ 400 ಹೊಸ ಪ್ರಕರಣ ದಾಖಲು. ಸಕ್ರಿಯ ಪ್ರಕರಣ 6388. ಒಟ್ಟು ಸೋಂಕಿತರು 1262397. ಒಟ್ಟು ಗುಣಮುಖ 1239616. ಒಟ್ಟು ಸಾವು 16392.

ರಾಜ್ಯದ ಪಾಸಿಟಿವಿಟಿ ದರ ಶೇ 0.52 ಮತ್ತು ಮರಣ ಪ್ರಮಾಣ ಶೇ 1.06 ಆಗಿದೆ. 21,932 ಆಂಟಿಜೆನ್, 86794 ಆರ್‌ಟಿಪಿಸಿಆರ್ ಸೇರಿದಂತೆ 108726 ಮಾದರಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?; ಬಳ್ಳಾರಿ 1, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 3, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ಚಿತ್ರದುರ್ಗ 2, ದಕ್ಷಿಣ ಕನ್ನಡ 33, ದಾವಣಗೆರೆ 2, ಧಾರವಾಡ 7.

ಹಾಸನ 31, ಕಲಬುರಗಿ 3, ಕೊಡಗು 14, ಮಂಡ್ಯ 9, ಮೈಸೂರು 9, ಶಿವಮೊಗ್ಗ 1, ತುಮಕೂರು 8, ಉಡುಪಿ 17, ಉತ್ತರ ಕನ್ನಡ 2, ವಿಜಯಪುರ 1.

ಯಾದಗಿರಿ, ರಾಯಚೂರು, ರಾಮನಗರ, ಕೊಪ್ಪಳ, ಹಾವೇರಿ, ಗದಗ, ಬೀದರ್, ಬಾಗಲಕೋಟೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ.

ಕರ್ನಾಟಕ ಸರ್ಕಾರ ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಡಿಸೆಂಬರ್ 28ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಜನವರಿ 7ರ ತನಕ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ನೈಟ್ ಕರ್ಫ್ಯೂ ಜೊತೆಗೆ ಹಲವಾರು ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆ ಮಾಡುವುದನ್ನು ಸಹ ನಿರ್ಬಂಧಿಸಲಾಗಿದೆ.

Recommended Video

Rishabh Pant ಅತಿ ವೇಗವಾಗಿ Dhoni ರೆಕಾರ್ಡ್ ಬ್ರೇಕ್ ಮಾಡಿದ್ದು ಹೇಗೆ? | Oneindia Kannada

English summary
Bengaluru reported 400 new Coronavirus cases. City active cases number 6,388.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X