ಹುಕ್ಕಾ ಬಾರ್‌ಗಳಿಗೆ ಪರವಾನಗಿ ನೀಡುವ ಅಧಿಕಾರ ಪೊಲೀಸರಿಗೆ ಇಲ್ಲ: ಆರಗ ಜ್ಞಾನೇಂದ್ರ
ಬೆಂಗಳೂರು, ಮಾ. 18: ರಾಜಧಾನಿ ಬೆಂಗಳೂರಿನಲ್ಲಿ ನೊಂದಾಯಿತ 68 ಹುಕ್ಕಾ ಬಾರ್‌ಗಳಿವೆ. 49 ಮನರಂಜನೆ ಕ್ಲಬ್ ( ರಿಕ್ರಿಯೇಷನ್ ಕ್ಲಬ್) ಗಳಿವೆ. ಕಳೆದ ಮೂರು ವರ್ಷದಲ್ಲಿ ನಿಯಮ ಉಲ್ಲಂಘನೆ ಮಾಡಿದ ಹುಕ್ಕಾ ಬಾರ್‌ಗಳ ಮೇಲೆ 40 ಕೇಸುಗಳನ್ನು ದಾಖಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ್ ಪರಿಷತ್‌ನಲ್ಲಿ ತಿಳಿಸಿದ್ದಾರೆ.
ಹುಕ್ಕಾ ಬಾರ್‌ಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹುಕ್ಕಾ ಬಾರ್‌ಗಳಿಗೆ ಬಿಬಿಎಂಪಿ ಪರವಾನಗಿ ನೀಡುತ್ತದೆ. ಪ್ರತ್ಯೇಕ ಸ್ಮೋಕಿಂಗ್ ಜೋನ್ ಮಾಡಿಕೊಂಡು ಹುಕ್ಕಾ ಬಾರ್‌ಗಳ ಕಾರ್ಯ ನಿರ್ವಹಣೆಗೆ ಅವಕಾಶ ನೀಡಲಾಗಿದೆ. ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ ಸೇವನೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡದ ಹೊರತು ಹುಕ್ಕಾ ಬಾರ್‌ಗಳ ವಿಚಾರದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಲು ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ನಿಯಮ ಉಲ್ಲಂಘನೆ ಮಾಡಿ ಹುಕ್ಕಾ ಸೇವನೆಗೆ ಅವಕಾಶ ಕೊಟ್ಟ ಹುಕ್ಕಾ ಬಾರ್‌ಗಳ ಮೇಲೆ 2019 ರಿಂದ 2021 ರ ಅವಧಿಯಲ್ಲಿ 40 ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಹುಕ್ಕಾ ಬಾರ್ ಗಳು ಸಹ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಿರ್ಬಂಧ ಕಾಯ್ದೆ ಅಡಿ ಕೇಸು ದಾಖಲಿಸಲಾಗುತ್ತದೆ. ಇನ್ನು ಮನರಂಜನಾ ಕ್ಲಬ್‌ಗಳ ಮೇಲೆ ನುರಾರು ಕೇಸು ದಾಖಲಾಗಿವೆ. ಹಲವು ಕ್ಲಬ್‌ಗಳ ಮೇಲೆ ದಾಳಿಗಳು ನಡೆದಿವೆ. ಬೆಂಗಳೂರಿನಲ್ಲಿ ಯಾವುದೇ ಡಾನ್ಸ್ ಬಾರ್ ಮತ್ತು ಕ್ಯಾಸಿನೋ ಇಲ್ಲ. ಹುಕ್ಕಾ ಬಾರ್‌ಗಳಿಗೆ ಪೊಲೀಸರು ಯಾವುದೇ ರೀತಿಯ ಪರವಾನಗಿ ಮಂಜೂರು ಮಾಡುವ ಅಧಿಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications